ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಪೋರ್ಟಿನಲ್ಲಿ ಕಸ್ಟಮ್ಸ್ ಎದುರು ಬೆತ್ತಲಾದ ಪುಣ್ಯಾತಗಿತ್ತಿ!

By Srinath
|
Google Oneindia Kannada News

woman-stripps-before-airport-customs-bermuda
ಲಂಡನ್, ಆಗಸ್ಟ್ 25: 'ನೋಡ್ಕೊಳ್ಳಿ! ಅದೇನ್ ಚೆಕ್ ಮಾಡ್ತೀರೋ ಮಾಡ್ಕೊಳ್ಳಿ' ಎಂದ ಆ ಪುಣ್ಯಾತಗಿತ್ತಿ ತಾನು ಉಟ್ಟಿದ್ದ ಅಷ್ಟೂ ಬಟ್ಟೆಗಳನ್ನು ಸರಸರನೇ ಕಿತ್ತು ಗುಡ್ಡೆ ಹಾಕಿದಳು. ಪಾಪ! ಬೆಟ್ಟ ಅಗೆದ ಕಸ್ಟಮ್ಸ್ 'ಪೋಲಿ'ಸರಿಗೆ ಇಲಿನೂ ಸಿಗಲಿಲ್ಲ ಎಂಬಂತಾಯಿತು.

ಏನಾಯಿತೆಂದರೆ 36 ವರ್ಷದ ಲೌಕಾಯ್ ಫಿಲಿಪ್ಸ್ ಎಂಬ ಮಹಿಳೆಯನ್ನು ಬರ್ಮುಡಾ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮಾಮೂಲಿ ಲಗೇಜ್ ತಪಾಸಣೆಗಾಗಿ ಎಂದು ತಡೆದಿದ್ದಾರೆ. ಆ ಮಹಿಳೆಯೋ ಪಾಪ ಅಧಿಕಾರಿಗಳಿಗೆ ಹೆಚ್ಚು ತ್ರಾಸ ಕೊಡುವುದು ಬೇಡವೆಂದು ಮತ್ತು ತಪಾಸಣೆ 'ಪಾರದರ್ಶನಕ'ವಾಗಿ ಇರಲಿ ಎಂದು ಹಾಗೆ ಮಾಡಿದಳೋ ಅಂತೂ ಸಂಪೂರ್ಣವಾಗಿ ವಿವಸ್ತ್ರಳಾದಳು. ಅಧಿಕಾರಿಗಳೋ ಮೂಗಿನ ಬೆರಳಿಟ್ಟುಕೊಳ್ಳುವುದರ ಬದಲು ಕಣ್ಣಿಗೆ ಕೈ ಅಡ್ಡವಿಟ್ಟುಕೊಂಡು ಮುಜುಗರಕ್ಕೊಳಗಾದರು.

'ನನ್ನನ್ನು ಸಂಪೂರ್ಣವಾಗಿ ಚೆಕ್ ಮಾಡಬೇಕಾ? ಮಾಡ್ಕೊಳ್ಳಿ. ಅದೇನು ... ಮಾಡ್ತೀರೋ ಮಾಡಿ' ಎಂದೂ ಉಲಿದಿದ್ದಾಳೆ. ಜನದಟ್ಟಣೆಯ ವಿಮಾನ ನಿಲ್ದಾಣದ ನಟ್ಟ ನಡುವೆ ಈ 'ಫ್ರೀ ಷೋ' ನಡೆದಿದೆ. ಅಧಿಕಾರಿಗಳು, ಮಕ್ಕಳುಮರಿ ಎನ್ನದೆ ಎಲ್ಲ ಪ್ರಯಾಣಿಕರು ಈ ದೃಶ್ಯವನ್ನು ಕಣ್ತುಂಬಿಸಿಕೊಂಡಿದ್ದಾರೆ ಎಂದು 'ಡೈಲಿ ಮಿರರ್' ವರದಿ ಮಾಡಿದೆ.

ಫಿಲಿಪ್ಸ್ ಮೂಲತಃ ಬರ್ಮುಡಾ ದ್ವೀಪದವಳೇ. ಆದರೆ ಲಂಡನ್ನಿನಲ್ಲಿ ನೆಲೆಸಿದ್ದಾಳೆ. ಹಣಕಾಸು ವ್ಯವಹಾರವನ್ನು ಇತ್ಯರ್ಥಪಡಿಸಿಕೊಳ್ಳಲು ಈ ಮಹಿಳೆ ಮೊನ್ನೆ ಶನಿವಾರ (ಆಗಸ್ಟ್ 20) ಬರ್ಮುಡಾ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಳು.

ನಾನು ಅನೇಕ ಬಾರಿ ವಿಮಾನಗಳಲ್ಲಿ ಸಂಚರಿಸಿದ್ದೇನೆ. ಇಲ್ಲಿ ಕಸ್ಟಮ್ಸ್ ನವರು ವಿಚಿತ್ರವಾಗಿ ತಪಾಸಣೆ ಮಾಡುತ್ತಾರೆ. ನನಗೂ ರೋಸಿಹೋಗಿತ್ತು. ಅದಕ್ಕೆ ಒಮ್ಮೆ ನನ್ನ ರುಚಿ 'ತೋರಿಸಿದೆ' ಎಂದು ಫಿಲಿಪ್ಸ್ ನ್ಯಾಯಾಲಯದಲ್ಲಿ ಪುಣ್ಯಾತಗಿತ್ತಿ ಅವಲತ್ತುಕೊಂಡಿದ್ದಾಳೆ. ಆದರೆ ಜನ್ಮದಲ್ಲಿ ಇನ್ನೆಂದಿಗೂ ಹೀಗೆ ವಿವಸ್ತ್ರವಾಗುವ ಆಲೋಚನೆ ಮಾಡೊಲ್ಲ' ಎಂದೂ ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾಳೆ.

English summary
According to 'Daily Mail' report, a woman passenger Loukai Phillips (36) stripped naked at an airport in Bermuda after being stopped by the customs officers for a routine luggage check on Aug 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X