ಸಸ್ಯಾಹಾರಿ ಬಾಯಿಗೆ ಚಿಕನ್ ಹಾಕಿದ ಏರ್ ಲೈನ್ಸ್

ಭಾರತಕ್ಕೆ ಸಂಚರಿಸುತ್ತಿದ್ದ ಸಿಂಗಾಪುರ ಏರ್‌ಲೈನ್ಸ್‌ನ ವಿಮಾನದಲ್ಲಿ ಕೋಳಿ ಮಾಂಸದ ಆಹಾರ ಸೇವಿಸಿದ 56ರ ಹರೆಯದ ಪುಷ್ಪಲತಾ ಶರ್ಮಾ ಬಳಿಕ ಅಸ್ವಸ್ಥಗೊಂಡಿದ್ದಾರೆ ಎಂದು ನ್ಯೂಜಿಲೆಂಡ್‌ನ ಮಾಧ್ಯಮಗಳು ವರದಿ ಮಾಡಿದೆ.
ನ್ಯೂಜಿಲೆಂಡ್‌ನ ಬ್ಲೆನ್‌ಹೆಮ್‌ನಲ್ಲಿ ನೆಲೆಸಿರುವ ಪುಷ್ಪಲತಾ ಶರ್ಮಾ ಅಪ್ಪಟ ಸಸ್ಯಾಹಾರಿಯಾಗಿದ್ದು, ಮಾಂಸ ಅಥವಾ ಮೊಟ್ಟೆ ಸೇವಿಸಿತ್ತಿರಲಿಲ್ಲ ಎನ್ನಲಾಗಿದೆ.
ಶರ್ಮಾರಿಗೆ ಅಸಮರ್ಪಕ ಆಹಾರ ಸರಬರಾಜಾಗಿರುವ ಬಗ್ಗೆ ಸಿಂಗಾಪುರ ಏರ್‌ಲೈನ್ಸ್ ಬೇಸರ ವ್ಯಕ್ತಪಡಿಸಿದೆ. ಟಿಕೆಟ್ ಕಾದಿರಿಸಿದ್ದ ಟ್ರಾವೆಲ್ ಏಜೆಂಟ್ ವಿಶೇಷ ಆಹಾರ ಒದಗಿಸುವಂತೆ ಕೇಳಿಕೊಂಡಿರಲಿಲ್ಲ. ಹಾಗಾಗಿ ಆಹರ ನೀಡಿಕೆಯಲ್ಲಿ ವ್ಯತ್ಯಾಸವಾಗಿದೆ ಎಂದು ಏರ್ ಲೈನ್ಸ್ ಹೇಳಿದೆ.
ಟ್ರಾವೆಲ್ ಏಜೆಂಟ್ ಮೂಲಕ ತಾನು ಟಿಕೆಟ್ ಕಾದಿರಿಸಿದ್ದು, ಪ್ರಯಾಣದ ವೇಳೆ ಭಾರತೀಯ ಶಾಕಾಹಾರ ಪೂರೈಸುವಂತೆ ಕೇಳಿಕೊಂಡಿದ್ದೆ. ಕೋಳಿ ಮಾಂಸವನ್ನು 'ಗಿಣ್ಣು" ಎಂದು ಭಾವಿಸಿದ್ದೆ, ಸ್ವಲ್ಪ ತಿನ್ನುವಷ್ಟರಲ್ಲೇ ಅಸ್ವಸ್ಥಳಾದೆ ಎಂದು ಶರ್ಮಾ ಹೇಳಿದ್ದಾರೆ.












Click it and Unblock the Notifications