ಮಂಗಳೂರಿನಲ್ಲಿ ಮಹಿಳೆಯರಿಗೆ ಪ್ರತ್ಯೇಕ ಪಾರ್ಕ್

ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಯೋಜನೆ ಮಹತ್ವದ್ದಾಗಿದ್ದು, ಮುಂದೆ ಪುರುಷರಿಗಾಗಿಯೂ ಪ್ರತ್ಯೇಕ ಪಾರ್ಕ್ ರೂಪಿಸುವ ಆಲೋಚನೆ ಇದೆ ಎಂದು ಪಾಲೆಮಾರ್ ಹೇಳಿದರು.ಈ ಪ್ರಯೋಗ ಯಶಸ್ವಿಯಾದಲ್ಲಿ ಜಿಲ್ಲಾದ್ಯಂತ ಇಂತಹ ಪಾರ್ಕ್‌ಗಳನ್ನು ನಿರ್ಮಿಸಲಾಗುವುದು ಎಂದು ಪಾಲೆಮಾರ್, ಹೇಳಿದರು. ತಮ್ಮ ನಿಧಿಯಿಂದ 2 ಲಕ್ಷ ರೂ. ಅನುದಾನವನ್ನು ಅವರು ಪಾರ್ಕ್ ಗಾಗಿ ಪ್ರಕಟಿಸಿದರು.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ನಳಿನ್‌ಕುಮಾರ್ ಕಟೀಲ್ ಹಾಗೂ ಸ್ಥಳೀಯ ಶಾಸಕ ಯೋಗೀಶ್ ಭಟ್ ಹಾಗೂ ಪಾಲೇಮಾರ್ ಅವರು ತಲಾ 2 ಲಕ್ಷ ರೂ.ಗಳ ಅನುದಾನವನ್ನು ಘೋಷಿಸಿದರು.
ನೈಸರ್ಗಿಕ ಪಾರ್ಕ್ : 25 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ 1.5 ಎಕರೆ ಭೂಮಿಯಲ್ಲಿ ಅಲ್ಲಿದ್ದ ಮರಗಳನ್ನೇ ಉಳಿಸಿಕೊಂಡು ಈ ಪಾರ್ಕ್‌ನ ಯೋಜನೆಯನ್ನು ರೂಪಿಸಲಾಗಿದ್ದು, ಭೂ ಪ್ರದೇಶವನ್ನು ಸಮತಟ್ಟು ಗೊಳಿಸಲು ಟ್ರಾಕ್ ನಿರ್ಮಿಸಲು ಈಗಾಗಲೇ 6 ಲಕ್ಷ ರೂ.ಗಳನ್ನು ಪಾರ್ಕ್ ಗಾಗಿ ಖರ್ಚು ಮಾಡಲಾಗಿದೆ. ಒಟ್ಟು 25 ಲಕ್ಷ ರೂ.ಗಳಲ್ಲಿ ಪಾರ್ಕ್‌ನಲ್ಲಿ ವಿವಿಧ ಸೌಕರ್ಯಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ ಎಂದು ಮನಪಾ ಆಯುಕ್ತ ಡಾ.ಕೆ.ಎನ್. ವಿಜಯಪ್ರಕಾಶ್ ತಿಳಿಸಿದ್ದಾರೆ.












Click it and Unblock the Notifications