ಕೇರಳ ಕುಟ್ಟಿ ಜತೆಸೇರಿ ಪತ್ನಿಯ ಹತ್ಯೆ ಮಾಡಿದ ಪಾಕಿ

ಕಳೆದ ಮಂಗಳವಾರ ಏನಾಯಿತೆಂದರೆ, 26 ವರ್ಷದ ಆರೋಪಿ ಕಷೀಫ್ ಪರ್ವೇಜ್ ಮಾತಿನಲ್ಲೇ ಕೇಳಿ: ಇಫ್ತಾರ್ ಕೂಟ ಮುಗಿಸಿಕೊಂಡು ನಮ್ಮ ಮೂರು ವರ್ಷದ ಮಗನೊಂದಿಗೆ ನಾನು ನನ್ನ ಹೆಂಡತಿ ನಾಜಿಶ್ ನೂರಾನಿ ನಡೆದುಕೊಂಡು ಬರುತ್ತಿದ್ದೆವು. ಆಗ ಮೂವರು ದುಷ್ಕರ್ಮಿಗಳು ಪಿಸ್ತೂಲು ಹಿಡಿದುಕೊಂಡು ಎದುರಾದರು.
ತಕ್ಷಣವೇ ನಾವು ಭಯೋತ್ಪಾದಕರು ಎಂದು ಕಿರುಚುತ್ತಾ ನನ್ನ ಪತ್ನಿಯ ಮೇಲೆ ಒಂದೇ ಸಮನೆ ಗುಂಡು ಹಾರಿಸಿ ಪರಾರಿಯಾದರು. ನನ್ನ ಕಾಲು, ಭುಜಕ್ಕೂ ಬುಲೆಟ್ ತಾಕಿತು. ಆದರೆ ಅಲ್ಲಾಹುವಿನ ದಯೆ ಮಗುವಿಗೆ ಏನೂ ಆಗಲಿಲ್ಲ ಎಂದು ಆರೋಪಿ ಪರ್ವೇಜ್ ಪೊಲೀಸರಿಗೆ ಕತೆ ಕಟ್ಟಿದ್ದಾನೆ.
ಮುಂದ!?: ಆದರೆ ಮೊದಲೇ ಅವರು ಅಮೆರಿಕ ಪೊಲೀಸರು. ಲಾಡೆನ್ ದಾಳಿಯ ನಂತರ ಭಯೋತ್ಪಾದನೆಯ ಕರಿನೆರಳನ್ನು ತಮ್ಮತ್ತ ಸುಳಿಯಲು ಬಿಟ್ಟಿಲ್ಲ. ಅಂಥಹುದರಲ್ಲಿ ಇದ್ಯಾವುದಿದು ತಲೆ ನೋವು ಪ್ರಸಂಗ ಎಂದು ತಲೆ ಮೇಲೆ ಕೈ ಹೊತ್ತು ಕುಳಿತರು. ಆಗ ಅವರ ನೆರವಿಗೆ ಬಂದಿದ್ದು ಮೃತ ನಾಜಿಶ್ ನೂರಾನಿ ಮನೆಯವರು.
ನಮ್ಮ ನೂರಾನಿಗೂ ಅಳಿಮಯ್ಯ ಪರ್ವೇಜ್ ಗೂ ಆಗಿಬರುತ್ತಿರಲಿಲ್ಲ. ಅವರ ವಿವಾಹ ಜೀವನದಲ್ಲಿ ದ್ವೇಷದ ಹುತ್ತಗಳು ಎದ್ದಿದ್ದವು ಎಂದರು. ಪೊಲೀಸರಿಗೆ ಇಷ್ಟು ಸಾಕಾಗಿತ್ತು. ಆದರೆ ಪರ್ವೇಜ್ ಸಹ ಪೊಲೀಸರಿಗೆ ಪರೋಕ್ಷವಾಗಿ ನೆರವಾದ. ಕತೆ ಕಟ್ಟುವುದನ್ನು ಒಂದೇ ಸಮನೆ ಬದಲಾಯಿಸತೊಡಗಿದ್ದ. ಪರ್ವೇಜ್ ಕತೆ ಸುಳ್ಳಿ ಕಂತೆ ಎಂಬುದು ಅವರಿಗೆ ಅಷ್ಟೊತ್ತಿಗೆ ಅರಿವಾಗಿತ್ತು.
ಈ ಮಧ್ಯೆ, ನೂರಾನಿ ತನ್ನ ಅಣ್ಣನಿಗೆ ಕಳಿಸಿದ್ದ ಇಮೇಲ್ ಪೊಲೀಸರ ನೆರವಿಗೆ ಬಂದಿತ್ತು. 'ಅಣ್ಣಾ ನನ್ನ ಗಂಡ ಯಾವಾಗ ಬೇಕಾದರೂ ನನ್ನನ್ನು ಸಾಯಿಸಬಹುದು. ಮಕ್ಕಳ ಮುಂದೆ ಒಂದೇ ಸಮನೆ ಹೊಡೆದು ಬಡಿದು ಮಾಡುತ್ತಿರುತ್ತಾನೆ. ಮನೆಯಲ್ಲಿ ಆತಂಕವಾದ ಸೃಷ್ಟಿಯಾಗಿದೆ' ಎಂದು ಭಯ ತೋಡಿಕೊಂಡಿದ್ದಳು.
ತನ್ನ ವಿದ್ಯಾಭ್ಯಾಸದ ಬಗ್ಗೆಯೂ ಸುಳ್ಳು ಪೋಣಿಸಿದ್ದ. ನನ್ನ ತಂದೆ ಶುಗರ್ ಪೇಷೆಂಟ್ ಆಗಿದ್ದು ಯಾವಾಗ ಬೇಕಾದರೂ ಅವ ಗೊಟಕ್ ಅನ್ನಬಹುದು. ಆದರೆ ಅವನ ಕೋಟ್ಯಂತರ ರುಪಾಯಿ ಆಸ್ತಿ ನನಗೇ ಬರುತ್ತದೆ ಎಂದು ಸಿಹಿ ಮಾತುಗಳನ್ನು ಆಡಿದ್ದ.












Click it and Unblock the Notifications