ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಮೇಲೆ ಬಿತ್ತು ಮತ್ತೊಂದು ಲೋಕಾಯಕ್ತ ಕೇಸು

By Srinath
|
Google Oneindia Kannada News

yeddyurappa-shimoga-lawer-new-lokayukta-case
ಶಿವಮೊಗ್ಗ, ಆಗಸ್ಟ್ 22: ಅಧಿಕಾರ ಕಳೆದುಕೊಂಡ ಯಡ್ಡಿ ನಸೀಬು ಖೋತಾ ಆಗುತ್ತಿದೆ ಎನಿಸುತ್ತಿದೆ. ಲೋಕಾಯುಕ್ತ ಕೋರ್ಟ್ ತಮ್ಮ ವಿರುದ್ಧ ಕೈಗೆತ್ತಿಕೊಂಡಿರುವ ತನಿಖೆಗೆ ತಡೆಯಾಜ್ಞೆ ಕೋರಿ ಅವರು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ತಡೆಯಾಜ್ಞೆಗೆ ನಿರಾಕರಿಸಿರುವ ಹೈಕೋರ್ಟ್, ವಿಚಾರಣೆಯನ್ನು ಆಗಸ್ಟ್ 26ಕ್ಕೆ ಮುಂದೂಡಿದೆ.

ಈ ಮಧ್ಯೆ, ಶಿವಮೊಗ್ಗ ವಕೀಲ ವಿನೋದ್ ಎಂಬವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಅಧಿಕಾರದ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಆಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತರಿಗೆ ಪ್ರತ್ಯೇಕ ದೂರು ನೀಡಿದ್ದಾರೆ.

ಈ ಕುರಿತು ಯಡಿಯೂರಪ್ಪ ಅವರ ಆಸ್ತಿಯ ಸಂಪೂರ್ಣ ವಿವರ, ಇಂದಿನ ಮಾರುಕಟ್ಟೆ ಬೆಲೆ, ಕ್ರಯ ಪತ್ರಗಳ ನಕಲು, ಸಾಕ್ಷಿಗಳು ಇತ್ಯಾದಿ ದಾಖಲೆಗಳನ್ನು ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಆಗಸ್ಟ್ 20ರಂದು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ಮಾಜಿ ಸಿಎಂ ಕುಟುಂಬ ಪ್ರೇರಣಾ ವಿದ್ಯಾ ಸಂಸ್ಥೆ-ಪೆಸಿಟ್ ತಾಂತ್ರಿಕ ವಿದ್ಯಾಲಯ, ಪಿಇಎಸ್ ಪಬ್ಲಿಕ್ ಶಾಲೆ, ಮೈತ್ರಿ ನರ್ಸಿಂಗ್ ಕಾಲೇಜು, ಮೈತ್ರಿ ಮೋಟಾರ್ಸ್‌, ಜನ ಶಿಕ್ಷಣ ಸಂಸ್ಥಾನ, ರಾಯಲ್ ಆರ್ಕಿಡ್ ಹೋಟೆಲ್, ಭದ್ರ ಸರ್ವೀಸ್ ಸ್ಟೇಷನ್, ಜೆಎಎಂ ಪೈಪ್ಸ್ ನಡೆಸುತ್ತಿದ್ದಾರೆ. ಅಲ್ಲದೆ ಬಿಎಸ್. ಯಡಿಯೂರಪ್ಪ ಅವರ ಪುತ್ರಿ ಎಸ್.ವೈ. ಅರುಣಾದೇವಿ ಹೆಸರಿನಲ್ಲಿ 4 ನಿವೇಶನ ಕಾನೂನು ಬಾಹಿರವಾಗಿ ನೋಂದಣಿಯಾಗಿವೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆ. 13(1) (ಡಿ) ಮತ್ತು ಸೆ. 13(1) (ಇ) ಅಡಿಯಲ್ಲಿ ಮತ್ತು ಭಾರತ ದಂಡ ಸಂಹಿತೆ ಅಡಿ ಸಮಗ್ರ ತನಿಖೆ ನಡೆಸಿ ಯಡಿಯೂರಪ್ಪ ಕುಟುಂಬದ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

English summary
Karnataka ex Chief Minister B.S. Yeddyurappa is to face Lokayukta Music again. Shimoga Advocate Vinod lodges fresh case against BSY. ಯಡಿಯೂರಪ್ಪ ಮೇಲೆ ಬಿತ್ತು ಮತ್ತೊಂದು ಲೋಕಾಯಕ್ತ ಕೇಸು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X