ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲಸ ಖಾಲಿ ಇದೆ; 1 ಲಕ್ಷ ಸರಕಾರಿ ಸಿಬ್ಬಂದಿ ಬೇಕಾಗಿದ್ದಾರೆ

By Srinath
|
Google Oneindia Kannada News

vacancy-in-govt-cause-corruption-yogeshwar
ರಾಮನಗರ, ಆಗಸ್ಟ್ 22: ಭ್ರಷ್ಟಾಚಾರ ವಿರುದ್ಧದ ಆಣ್ಣಾ ಕೂಗು ಆಡಳಿತಾರೂಢ ಮಂದಿಯನ್ನು ಒಂದಷ್ಟು ಚಿಂತನೆಗೆ ಹಚ್ಚುವಲ್ಲಿ ಸಫಲವಾಗಿದೆ. ಆದರೆ ಭ್ರಷ್ಟಾಚಾರಕ್ಕೆ ಸರಕಾರಿ ಸಿಬ್ಬಂದಿಯ ಕೊರತೆಯೇ ಕಾರಣ ಎಂಬ ವಿಚಿತ್ರ ವಾದವನ್ನು ಮಂಡಿಸಿ ಕೈತೊಳೆದುಕೊಂಡಿದ್ದಾರೆ.

ವಿಷಯ ಏನೆಂದರೆ, ರಾಜ್ಯದಲ್ಲಿ 1.12 ಲಕ್ಷ ಸರಕಾರಿ ನೌಕರರ ಕೊರತೆ ಇದೆ. ಪ್ರತಿ ಕಚೇರಿಯಲ್ಲಿ ಮೂವರು ಮಾಡುವ ಕೆಲಸವನ್ನು ಒಬ್ಬ ವ್ಯಕ್ತಿ ಮಾಡುತ್ತಿದ್ದಾನೆ. ಇದು ಸ್ವಾಭಾವಿಕವಾಗಿ ಕೆಲಸದ ಒತ್ತಡವನ್ನು ಜಾಸ್ತಿ ಮಾಡಿದೆ ಎಂದು ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ತಿಳಿಸಿದ್ದಾರೆ.

ಇದು ನಿರುದ್ಯೋಗಿಗಳಿಗೆ ಆಶಾಕಿರಣವಾಗುವ ಮಾತೋ ಅಥವಾ ಇರುವ ಸಿಬ್ಬಂದಿಯಿಂದ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಅಧಿಕೃತ ಮನ್ನಣೆ ಕಲ್ಪಿಸಿ, ಪ್ರೋತ್ಸಾಹಿಸುವ ಮಾತೋ ಸನ್ಮಾನ್ಯ ಯೋಗೀಶ್ವರ್ ಅವರೇ ಸ್ಪಷ್ಟಪಡಿಸಬೇಕು.

ಜಿಲ್ಲಾ ನೌಕರರ ಸಂಘದ ವತಿಯಿಂದ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಸರಕಾರಿ ಕೆಲಸ- ಕಾರ್ಯಗಳನ್ನು ತ್ವರಿತವಾಗಿ ಮಾಡಿಕೊಳ್ಳಲು ಹಣ ನೀಡಿ ಸಿಬ್ಬಂದಿಯನ್ನು ಭ್ರಷ್ಟರನ್ನಾಗಿಸಿದ್ದಾರೆ ಎಂದರು.

ಸರಕಾರಿ ಸಿಬ್ಬಂದಿ ಪ್ರತಿ ವರ್ಗಾ ವಣೆಯಲ್ಲೂ ಭ್ರಷ್ಟಾಚಾರದ ಕೂಗು ಕೇಳಿ ಬರುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸರಕಾರ ಶಿಕ್ಷಕರಿಗೆ ಜಾರಿಗೆ ತಂದಿರುವ ಕೌನ್ಸೆಲಿಂಗ್ ಮಾದರಿ ಯಲ್ಲಿಯೇ ಇತರ ಇಲಾಖೆಯ ಸಿಬ್ಬಂದಿ ವರ್ಗಾವಣೆ ನಡೆಯುವ ಅಗತ್ಯವಿದೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರ ನಡುವೆ ಇರುವ ವೇತನ ತಾರತಮ್ಯವನ್ನು ನೀಗಿಸಲು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನೇಮಿಸಿದ್ದ ಅಧಿಕಾರಿಗಳ ವೇತನ ಸಮಿತಿಯ ವರದಿಯ ಆಧಾರದಲ್ಲಿ ಕೂಡಲೇ ಶೇ. 30ರಷ್ಟು ಮಧ್ಯಂತರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

English summary
C P Yogeshwar, the new Forest Minister in DV Sadanand Gowda cabinet has come up with a lame excuse for corruption in givernment. He has said that vacancies in departments is the root cause of corruption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X