ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಟರ್ ನೆಟ್ ಸಿಗಲಿಲ್ಲ, ಬಾಲಕಿ ನೇಣಿಗೆ ಶರಣು

By Mahesh
|
Google Oneindia Kannada News

Sharada Vidyala Student Commits suicide, Mangalore
ಮಂಗಳೂರು, ಆ.22: ಇಂಟರ್‌ನೆಟ್ ಸಂಪರ್ಕ ಕಲ್ಪಿಸಲಿಲ್ಲ ಎಂಬ ಅಪ್ಪನ ಮೇಲಿನ ಕೋಪವನ್ನು ಹಗ್ಗದ ಮೇಲೆ ತೋರಿಸಿದ ವಿದ್ಯಾರ್ಥಿನಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಡೊಂಗರಕೇರಿಯಲ್ಲಿ ನಡೆದಿದೆ.

ಡೊಂಗರಕೇರಿ ನಿವಾಸಿ ಪ್ರವೀಣ್ ವಾಲ್ಕೆ ಎಂಬವರ ಪುತ್ರಿ ನಿಧಿ (16), ಶಾರದಾ ವಿದ್ಯಾಲಯದ ವಿದ್ಯಾರ್ಥಿನಿ. ಇತ್ತೀಚೆಗೆ ಇಂಟರ್ ನೆಟ್, ವೆಬ್ ಸೈಟ್ ಎಂದು ಮಗಳು ಮನೆಯಲ್ಲಿ ಹೇಳುತ್ತಿದ್ದಳು.

ಕಂಪ್ಯೂಟರ್ ಗೆ ಇಂಟರ್ ನೆಟ್ ಬೇಕು, ಇಷ್ಟು ಖರ್ಚಾಗುತ್ತದೆ ಎಂದು ಸದಾ ಪೀಡಿಸುತ್ತಿದ್ದಳು. ಇಂಟರ್ ನೆಟ್ ಅವಶ್ಯಕತೆ ಏನಿದೆ ಸ್ವಲ್ಪ ವಿಳಂಬ ಮಾಡಿ ನಂತರ ಹಾಕಿಸಿದರೆ ಆಯಿತು ಎಂದು ಅವಳ ಅಪ್ಪ ಹೇಳಿದ್ದರು.

ಆದರೆ, ರಜಾದಿನವಾಗಿದ್ದರಿಂದ ಮನೆಯಲ್ಲೇ ಇದ್ದ ನಿಧಿ, ಮತ್ತೆ ಇಂಟರ್ ನೆಟ್ ಸಂಪರ್ಕಕ್ಕಾಗಿ ಪೀಡಿಸಿದ್ದಾಳೆ. ಅಪ್ಪ ಸರಿಯಾಗಿ ಪ್ರತಿಕ್ರಿಯಿಸದೆ ಬೈದಿದ್ದಾರೆ. ಇದರಿಂದ ಕೋಪಗೊಂಡ ನಿಧಿ, ಮನೆಯಲ್ಲಿ ಎಲ್ಲರೂ ಇರುವಾಗಲೇ ಮಲಗುವ ಕೋಣೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಡೆತ್ ನೋಟ್ ಏನು ಬರೆದಿಟ್ಟಿಲ್ಲ. ಆದರೆ, ಇಂಟರ್ ನೆಟ್ ಸಂಪರ್ಕ ಸಿಗಲಿಲ್ಲ ಎಂಬುದು ಸಾವಿನ ಹಿಂದಿನ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಬಂದರು ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ.

English summary
A 9th student of Sharada Vidyalya has committed suicide at her home Dogarakeri. According to sources she was frustrated by not getting internet connection to home pc which her father refused to provide amount said Bandar police station, Mangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X