ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಪಟ್ಟಕ್ಕೆ ಮೋದಿಯೇ ಸೂಕ್ತ ಅಭ್ಯರ್ಥಿ

By Mahesh
|
Google Oneindia Kannada News

Narendra Modi
ನವದೆಹಲಿ, ಆ.22: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಗೆ ನೆಚ್ಚಿನ ಅಭ್ಯರ್ಥಿಯಾಗಿ ಬಿಜೆಪಿ ಆಯ್ಕೆ ಮಾಡಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ಸಾರಥ್ಯದಲ್ಲಿ ಕಣಕ್ಕಿಳಿಯಲಿದ್ದು, ಈ ಬಗ್ಗೆ ಎನ್ ಡಿಎ ಮಿತ್ರಪಕ್ಷಗಳು ಕೂಡಾ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ.

ಇದು 'ಕೂಸು ಹುಟ್ಟುವುದಕ್ಕೂ ಮುನ್ನ ಕುಲಾವಿ ಹೊಲೆಸಿದಂತೆ' ಎಂಬ ರೀತಿ ಎನಿಸಿದರೂ ಬಿಜೆಪಿ ಪಕ್ಷದಲ್ಲಿ ಮೋದಿ ಪರ ಒಲವು ಹೆಚ್ಚುತ್ತಿದೆ. ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ, ಸಂಸತ್ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಅವರಿಗಿಂತ ಮೋದಿ ರೇಸ್ ನಲ್ಲಿ ಮುಂದಿರುವುದು ಸ್ಪಷ್ಟವಾಗಿದೆ.

ಲೋಕಸಭೆಯಲ್ಲಿ 180ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಪಕ್ಷ ಸೇರಿದಂತೆ ಸಂಘ ಪರಿವಾರದಲ್ಲಿ ಮೋದಿ ಹೆಚ್ಚಿನ ಒಲವಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಟ್ಟರೆ ಇನ್ಯಾರೂ ಮೋದಿ ಆಯ್ಕೆಗೆ ವಿರೋಧಿಸುವ ಲಕ್ಷಣಗಳು ಕಂಡು ಬಂದಿಲ್ಲ. ಎನ್ ಡಿಎ ಮೈತ್ರಿಕೂಟವನ್ನು ಸಮರ್ಥವಾಗಿ ಮುನ್ನೆಡೆಸಬಲ್ಲ ನಾಯಕನಿಗಾಗಿ ಈಗಿಂದಲೇ ಬಿಜೆಪಿ ತಯಾರಿ ನಡೆಸಿದೆ.

English summary
BJP has favoured Gujarat CM Narendra Modi as PM candidate for upcoming Lok Sabha Election. This decision by BJP may stir Nitin Kumar and others, but Modi is leading Gadkari, Sushma Swaraj and Arun jaitley in the race.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X