ಮಂಗಳೂರಲ್ಲಿ ಜಾಗತಿಕ ಕೊಂಕಣಿ ಸಂಘಟನೆಗೆ ಚಾಲನೆ

International Konkani Association inaugurated
ಮಂಗಳೂರು, ಆ.22 : ಜಗತ್ತಿನಾದ್ಯಂತ ನೆಲೆಸಿರುವ ಕೊಂಕಣಿಗರನ್ನು ಒಂದೇ ಸೂರಿನಡಿ ತರುವ ಮೂಲ ಉದ್ದೇಶದೊಂದಿಗೆ ಜಾಗತಿಕ ಕೊಂಕಣಿ ಸಂಘಟನೆ' ಅಸ್ತಿತ್ವಕ್ಕೆ ಬಂದಿದ್ದು ಮಂಗಳೂರಲ್ಲಿ ಶನಿವಾರ ಕೊಂಕಣಿ ದಿನಾಚರಣೆ ಸಂದರ್ಭದಲ್ಲಿ ಈ ಸಂಘಟನೆಗೆ ಚಾಲನೆ ನೀಡಲಾಯಿತು.

ಸೈಂಟ್ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ವೈದ್ಯ ಹಾಗೂ ಲೇಖಕ ಡಾ.ಅಶೋಕ್ ಪೈ ಅವರು ಈ ಸಂಘಟನೆಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು. ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಕೊಂಕಣಿ ಭಾಷೆ, ಸಾಹಿತ್ಯ, ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸುವಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮಾಂಡ್ ಸೋಬಾಣ್ ಸಂಸ್ಥೆ ಜಾಗತಿಕ ಕೊಂಕಣಿ ಸಂಘಟನೆಯನ್ನು ಹುಟ್ಟುಹಾಕಲು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದೆ. ಮಾಂಡ್ ಸೋಬಾಣ್ ಹುಟ್ಟಿಗೆ ಕಾರಣರಾದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎರಿಕ್ ಒಝಾರಿಯೋ ಜಾಗತಿಕ ಕೊಂಕಣಿ ಸಂಘಟನೆ ಅಸ್ತಿತ್ವಕ್ಕೆ ಬರಲು ಕಾರಣರಾಗಿದ್ದಾರೆ.

ಎರಿಕ್ ಒಝಾರಿಯೋ ಹೇಳಿದ್ದು :
ನಾವು ಕೊಂಕಣಿ ಲಿಪಿ ವಾದಿಗಳಲ್ಲ, ಕೊಂಕಣಿವಾದಿಗಳು. ಕೊಂಕಣಿಯ ಎಲ್ಲ ವೈವಿಧ್ಯಗಳಿಗೂ ಪ್ರಾಮುಖ್ಯತೆ ನೀಡುತ್ತಾ ವಿವಿಧತೆಯಲ್ಲಿ ಏಕತೆ ಮೆರೆಯುತ್ತಿದ್ದೇವೆ. ಲಿಪಿ ಮತ್ತಿ ಉಪ ಭಾಷೆಗಳು ಬೇರೆ ಬೇರೆ ಆಗಿದ್ದರೂ ನಮ್ಮೆಲ್ಲರ ಮಾತೆ ಒಬ್ಬರೇ ಆಗಿದ್ದಾರೆ, ಅವರೇ ಕೊಂಕಣಿ ಮಾತೆ'.

ಈ ಜಾಗತಿಕ ಕೊಂಕಣಿ ಸಂಘಟನೆಯಲ್ಲಿ 13 ದೇಶಗಳ 127 ಸಂಘಟನೆಗಳು ನೊಂದಾಯಿಸಿದ್ದು, ಈ ಪೈಕಿ 70 ಸಂಘಟನೆಗಳ ಪ್ರತಿನಿಧಿಗಳು ಉದ್ಘಾಟನಾ ಸಂದರ್ಭದಲ್ಲಿ ಹಾಜರಿದ್ದರು.

ಪದಾಧಿಕಾರಿಗಳು : ಗೋವಾದ ಟೊಮೊಝಿನೋ ಕಾರ್ಡೋಝಾ (ಅಧ್ಯಕ್ಷರು), ಕೇರಳದ ಕೆ.ಕೆ.ಉತ್ತಾರ್ (ಉಪಾಧ್ಯಕ್ಷರು), ಕುವೈಟ್ ನ ಪಾಸ್ಕಲ್ ಪಿಂಟೋ (ಕೊಲ್ಲ್ಲಿ ರಾಷ್ಟ್ರಗಳ ಉಪಾಧ್ಯಕ್ಷರು), ಇಂಗ್ಲೆಂಡ್ ನ ರೆನೆ ಬ್ರೆಟ್ಟೋ (ಇತರ ದೇಶಗಳ ಉಪಾಧ್ಯಕ್ಷರು), ಎರಿಕ್ ಒಝಾರಿಯೋ ಮಂಗಳೂರು (ಪ್ರಧಾನ ಕಾರ್ಯದರ್ಶಿ), ಲಾರೆನ್ಸ್ ಡಿಸೋಝಾ ಮುಂಬೈ (ಸಹ ಕಾರ್ಯದರ್ಶಿ), ಮಂಗಳೂರಿನ ರಾಯ್ ಕ್ಯಾಸ್ಟಲಿನೋ (ಕೋಶಾಧಿಕಾರಿ), ಆನ್ಸಿ ಡಿಸೋಝಾ ಮುಂಬೈ (ಸಾರ್ವಜನಿಕ ಸಂಪರ್ಕಾಧಿಕಾರಿ).

ಕಾರ್ಯಕಾರಿ ಸಮಿತಿ : ಕ್ಯಾನೆಟ್ ಮಿನೇಜಸ್ (ಮುಂಬೈ), ಎಡ್ವಿನ್ ಜೆ.ಎಫ್.ಡಿಸೋಝಾ, ಸಿಂದೂದುರ್ಗ, ರಮಾನಂದ ರಾಯ್ಕರ್ (ಗೋವಾ), ಮೈಕೆಲ್ ಗ್ರೇಸಿಯಸ್ (ಗೋವಾ), ಥೋಮಸ್ ಸಿ ಫೆರ್ನಾಂಡಿಸ್ (ಗೋವಾ), ಪ್ರೇಮಾನಂದ ಲೋತಿಲ್ಕರ್ (ಗೋವಾ), ಎಂ.ಎಸ್.ಕಾಮತ್ (ಬೆಂಗಳೂರು), ವಸಂತ್ ಭಂಡಾರ್ಕರ್ (ಕಾರವಾರ), ವೆಲೇರಿಯನ್ ಡಿಸೋಝಾ (ಮೈಸೂರು, ವಿಜಯನ್ (ಕೇರಳ)), ವಿನ್ಸೆಂಟ್ ಮಿನೇಜಸ್ (ದೆಹಲಿ), ಸಿಧಾನಾಥ ಬಯ್ಯು (ಗೋವಾ), ವಾಸುದೇವ್ ಶ್ಯಾನುಭೋಗ್ (ಸಿರ್ಸಿ), ರಿಚ್ಚಾರ್ಡ್ ಮೊರಾಸ್ (ಬಹರೈನ್), ಅರುಣ್ ಡಿಸೋಝಾ (ಪಲಿಮಾರ್), ಡಾ.ಆಸ್ಟಿನ್ ಪ್ರಭು (ಯು.ಎಸ್.ಎ), ರೊನಾಲ್ಡ್ ಫೆರ್ನಾಂಡಿಸ್ (ಕೆನಡಾ), ಜೇಮ್ಸ್ ಮೆಂಡೋನ್ಸಾ (ದುಬೈ), ಸ್ಟ್ಯಾನ್ಲಿ ಫೆರ್ನಾಂಡಿಸ್ (ಒಮಾನ್) ಮತ್ತು ಜೋನ್ಸನ್ ಡಿಸೋಝಾ (ಇಸ್ರೇಲ್).

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+