ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈಕೋ ಚಾರ್ಲ್ಸ್ ಖುಲಾಸೆಗೆ ಮುಳುವಾದ ಇಂಗ್ಲೀಷ್

By Mahesh
|
Google Oneindia Kannada News

Charles Sobhraj
ಕಠ್ಮಂಡು, ಆ.22: ಬಿಕಿನಿ ಕಿಲ್ಲರ್ ಎಂದೇ ಕುಖ್ಯಾತಿ ಹೊಂದಿರುವ ಚಾರ್ಲ್ಸ್ ಶೋಭರಾಜ್ ಗೆ 1975ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ ಮೇಲ್ಮನವಿ ಮತ್ತೆ ತಿರಸ್ಕಾರಗೊಂಡಿದೆ. ಕೋರ್ಟ್ ಅರ್ಜಿ ತಿರಸ್ಕರಿಸುವುದು ಮಾಮೂಲಿನ ಸಂಗತಿಯಾದರೂ, ಚಾರ್ಲ್ಸ್ ಅರ್ಜಿ ಇಂಗ್ಲೀಷ್ ನಲ್ಲಿದ್ದರಿಂದ ತಿರಸ್ಕಾರಗೊಂಡಿದೆ.

ಅಮೆರಿಕದ ಪ್ರವಾಸಿ ಕೊನ್ನಿ ಜೊ ಬ್ರೊನ್ಜಿಕ್ ಅವರನ್ನು ನೇಪಾಳದಲ್ಲಿ 2004ರಲ್ಲಿ ಕೊಲೆಗೈದ ಆರೋಪ ಹೊತ್ತಿರುವ ಶೋಭರಾಜ್ , 2006 ರಲ್ಲಿ ನೇಪಾಳ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಮನವಿ ತಿರಸ್ಕಾರಗೊಂಡ ಮೇಲೆ ಜೈಲಿನಲ್ಲೇ ಕಾಲದೂಡುತ್ತಿದ್ದ ಶೋಭರಾಜ್ ಸಿಕ್ಕ ಸಮಯದಲ್ಲಿ ಅಲ್ಪಸ್ವಲ್ಪ ನೇಪಾಳಿ ಭಾಷೆ ಕಲಿತ್ತಿದ್ದಾರೆ ಉಪಯೋಗಕ್ಕೆ ಬರುತ್ತಿತ್ತು.

ಆದರೆ, ನೇಪಾಳಿ ಕಲಿಯದ ಶೋಭರಾಜ್ ಗೆ ಕೋರ್ಟ್ ಭಾರಿ ದಂಡ ವಿಧಿಸಿದೆ. ಶೋಭರಾಜ್ ಪರ ನಿಂತಿರುವ ಆತನ ಪ್ರೇಯಸಿ ನಿಹಿತಾ ಬಿಸ್ವಾಸ್ ತಾಯಿ ವಕೀಲೆ ಶಕುಂತಲಾ ಥಾಪಾ, ಚಾರ್ಲ್ಸ್ ಜೈಲಿನಿಂದ ಹೊರತರಲು ಶಕ್ತಿ ಮೀರಿ ಯತ್ನಿಸಿ ವಿಫಲರಾಗಿದ್ದಾರೆ

ಭಾಷಾ ಸಮಸ್ಯೆ: ಭಾರತೀಯ ತಂದೆ, ವಿಯಟ್ನಾಂ ತಾಯಿಗೆ ಜನಸಿದ ಫ್ರೆಂಚ್ ನಿವಾಸಿ ಚಾರ್ಲ್ಸ್ ಒಟ್ಟು 20 ವರ್ಷದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಭಾಷೆ ಗೊತ್ತಿಲ್ಲ ಎಂದು ನೇಪಾಳದ ಪೊಲೀಸರು, ಕೋರ್ಟ್ ಅನ್ಯಾಯವಾಗಿ ನನ್ನನ್ನು ಜೈಲಿಗೆ ದೂಡಿಗೆ ನನ್ನನ್ನು ರಕ್ಷಿಸಿ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗಕ್ಕೆ ಅಧಿಕೃತವಾಗಿ ದೂರು ನೀಡಿದ್ದಾನೆ.

ಇದಲ್ಲದೆ ನೇಪಾಳದಿಂದ 7 ಮಿಲಿಯನ್ ಯುರೋ ಮಾನನಷ್ಟ ಮೊತ್ತ ಕಕ್ಕಿಸಲು ಚಾರ್ಲ್ಸ್ ಯೋಜಿಸಿದ್ದಾನೆ.ದ್ವಿಭಾಷಿ, ಅನುವಾದಕರನ್ನು ನೇಮಿಸದ ನೇಪಾಳದ ಕಾನೂನಿಗೆ ಧಿಕ್ಕಾರ ಎಂದಿರುವ ಚಾರ್ಲ್ಸ್, ನೇಪಾಳಿಯಲ್ಲಿ ಮರುಅರ್ಜಿ ಸಲ್ಲಿಸದೇ ಇಂಗ್ಲೀಷ್ ಕಾಪಿಯನ್ನೇ ಓದಿಕೊಂಡು ನ್ಯಾಯಕೊಡಿ ಎಂದಿದ್ದಾನೆ.

ಜಗತ್ತನ್ನೇ ನಡುಗಿಸಿದ ಕುಖ್ಯಾತ ಸೈಕೋಪಾಥ್ ಶೋಭರಾಜ್ ಗೆ ನೇಪಾಳ ಭಾಷಾ ಕದಂಕದಲ್ಲಿ ಕಟ್ಟಿ ಹಾಕಿದೆ. ನೇಪಾಳದ ಭಕ್ತಪುರಜಿಲ್ಲೆಯಲ್ಲಿ ಕೆನಡಾದ ಪ್ರವಾಸಿ ಕೊಲೆ ಕೇಸ್ ಶೋಭರಾಜ್ ಕೊರಳಿಗೆ ಸುತ್ತಿಕೊಂಡಿದೆ. ಅಕಸ್ಮಾತ್ ನೇಪಾಳದಿಂದ ಚಾರ್ಲ್ಸ್ ಹೊರಬಿದ್ದರೂ ತಿಹಾರ್ ಜೈಲ್ ಆತನನ್ನು ಸ್ವಾಗತಿಸಲು ಸದಾ ಸಿದ್ಧವಿದೆ.

English summary
Nepal Suprme Court has denied Charles Gurumukh Sobhraj's appeal for reviewing his murder conviction. Charles has been convicted and his spending more than eight years in Neapl Jail. But his petition appeal failed because it was in English.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X