ತಿಹಾರ್ ನಿಂದ ರಾಮಲೀಲಾದತ್ತ ಅಣ್ಣಾ ಹೆಜ್ಜೆ

ತ್ರಿವರ್ಣ ಧ್ವಜ ಹಿಡಿದು ಈ ಐಕ್ಯತೆ, ಶಕ್ತಿ ಎಂದೂ ಕುಂದದಿರಲಿ, ರಾಮಲೀಲಾ ಮೈದಾನದಲ್ಲಿ ಎಲ್ಲರೂ ಒಟ್ಟಿಗೆ ಹೋರಾಟ ನಡೆಸೋಣ ಎಂದು ಜೈಲಿನ ಹೊರಗಡೆ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಹೇಳಿದರು.
ತಿಹಾರ್ ಜೈಲಿನಿಂದ ಮಾಯಾಪುರಿ ಚೌಕದ ಕಡೆಗೆ ತೆರೆದ ಟ್ರಕ್ ನಲ್ಲಿ ಅಣ್ಣಾ ಅವರ ಮೆರವಣಿಗೆ ಸಾಗಿದೆ. ರಾಮಲೀಲಾ ಮೈದಾನದ ಸಿದ್ಧತೆಗಳು ಸಮರ್ಪಕವಾಗಿದೆ. ಸಾರ್ವಜನಿಕರು ಶಾಂತಿಯುವವಾಗಿ ಮೈದಾನದಲ್ಲಿ ವರ್ತಿಸಬೇಕು ಎಂದು ಕಿರಣ್ ಬೇಡಿ ಅವರು ಮನವಿ ಮಾಡಿದ್ದಾರೆ.
ಅಣ್ಣಾ ಹಾಗೂ ಸಂಗಡಿಗರ ಭ್ರಷ್ಟಾಚಾರ ವಿರುದ್ಧದ ಮೆರವಣಿಗೆ ಧೋನಿ ತಂಡ ವಿಶ್ವಕಪ್ ಗೆದ್ದು ಬಂದಾಗ ನಡೆದ ಮೆರವಣಿಗೆಯನ್ನು ನೆನಪಿಸುವಂತಿದೆ.
ರಾಮ ಲೀಲಾದಲ್ಲಿ ಅಣ್ಣಾ ಲೀಲೆ: ಅಣ್ಣಾ ಬರುವಿಕೆಗಾಗಿ ಕಾದಿರುವ ಅಭಿಮಾನಿಗಳು ದೇಶಭಕ್ತಿ ಗೀತೆಗಳನ್ನು ಹಾಡುತ್ತಾ, ಯುಪಿಎ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಅಬಾಲ ವೃದ್ಧರಾದಿಯಾಗಿ ಎಲ್ಲರೂ ಅಣ್ಣಾ ಅವರಿಗಾಗಿ ಕಾತುರದಿಂದ ಕಾದಿದ್ದಾರೆ.
ಅಣ್ಣಾ ಸೇನೆ ರಾಜ್ ಘಾಟ್ ಗೆ ಭೇಟಿ ನೀಡಿ ಬಾಪು ಗೆ ನಮಿಸಿ, ಇಂಡಿಯಾ ಗೇಟ್ ಮೂಲಕ ಮೈದಾನ ಪ್ರವೇಶಿಸಲಿದೆ. ಶಾಂತಿಯುತ್ತ ಪ್ರತಿಭಟನೆ ನಡೆಸುವ ಭರವಸೆಯನ್ನು ದೆಹಲಿ ಪೊಲೀಸರಿಗೆ ನೀಡಲಾಗಿದೆ ಎಂದು ಕಿರಣ್ ಬೇಡಿ ಹೇಳಿದ್ದಾರೆ.












Click it and Unblock the Notifications