• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಕಾಯುಕ್ತ ಪಾಟೀಲರ ಮಗ ಶ್ರೀರಾಮುಲು ಪರ ವಕೀಲ

By Mahesh
|
ಬೆಂಗಳೂರು ಆ.18 : ಕರ್ನಾಟಕದ ನೂತನ ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರ ಪುತ್ರ ಬಸವಪ್ರಭು ಪಾಟೀಲ್ ಅವರು ರೆಡ್ಡಿ ಸೋದರರು ಹಾಗೂ ಶ್ರ್ರೀರಾಮುಲು ಅವರ ಪರ ಸುಪ್ರೀಂಕೋರ್ಟ್ ನಲ್ಲಿ ವಕಾಲತ್ತು ನಡೆಸಲಿದ್ದಾರೆ.

2007 ರಿಂದಲೂ ರೆಡ್ಡಿ ಸಹೋದರರ ಪರವಾಗಿ ರಾಜ್ಯ ಹೈಕೋರ್ಟಿನಲ್ಲಿ ವಾದಿಸುತ್ತಿದ್ದಾರೆ. ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗಡೆ ಅವರು ಸಲ್ಲಿಸಿದ ಅಕ್ರಮ ಗಣಿಗಾರಿಕೆ ಕುರಿತ ಎರಡನೇ ವರದಿಯಲ್ಲಿ ರೆಡ್ಡಿ ಸೋದರರ ಹೆಸರು ಪ್ರಸ್ತಾಪಿಸಲಾಗಿತ್ತು.

ಬಸವಪ್ರಭು ಪಾಟೀಲ್ ಸುಪ್ರೀಂ ಮತ್ತು ಹೈಕೋರ್ಟಿನ ಎ ದರ್ಜೆ ವಕೀಲರಾಗಿದ್ದಾರೆ. ಅವರು ಕರ್ನಾಟಕ ಹೈಕೋರ್ಟಿನಲ್ಲಿ ಜನಾರ್ದನ ರೆಡ್ಡಿ , ಅವರ ಸಹೋದರ ಕರುಣಾಕರ ರೆಡ್ಡಿ ಮತ್ತು ಆಪ್ತ ಶ್ರೀರಾಮುಲು ಪರವಾಗಿ ವಾದಿಸುತ್ತಿದ್ದಾರೆ.

ಯಾವ ಕೇಸು?: ಜನಾರ್ದನ ರೆಡ್ಡಿಯ ವಿರುದ್ಧ ದಾಖಲಾಗಿರುವ ಅರಣ್ಯ ಲೂಟಿ ಕೇಸು (ಸಿಆರ್‌ಎಲ್‌ಪಿ 3775/2007), ಕರುಣಾಕರ ರೆಡ್ಡಿ ವಿರುದ್ಧ ಚುನಾವಣೆಗೆ ಸಂಬಂಧಿಸಿದ ಆಯ್ಕೆ ಅಮಾನ್ಯ' ಕೇಸು ಮತ್ತು ಶ್ರೀರಾಮುಲುವಿನ ಕ್ರಿಮಿನಲ್ ಪ್ರಕರಣವೊಂದರಲ್ಲಿ ವಾದಿಸುತ್ತಿದ್ದಾರೆ.

ಅರಣ್ಯಾಧಿಕಾರಿ ರಾಜಶೇಖರನ್‌ಗೆ ಕೊಲೆ ಬೆದರಿಕೆಯೊಡಿದ್ದ ಬಗ್ಗೆ ಶ್ರಿ ರಾಮುಲು ವಿರುದ್ಧ ಹೈಕೋರ್ಟಿನಲ್ಲಿ ಕೇಸೊಂದು ದಾಖಲಾಗಿದೆ. ಈ ಎಲ್ಲ ಕೇಸುಗಳು 2007 ಆಸುಪಾಸಿನಲ್ಲಿ ದಾಖಲಾಗಿವೆ. ಇದನ್ನು ಹೊರತುಪಡಿಸಿ ಹೊಸ ಕೇಸುಗಳ ಬಗ್ಗೆ ಪಾಟೀಲ್ ವಾದಿಸುವುದಿಲ್ಲ ಎಂದಿದ್ದಾರೆ ಬಸವಪ್ರಭು ಪಾಟೀಲ್.

'ನಾನು ರೆಡ್ಡಿಗಳ ಪರವಾಗಿ ವಾದಿಸುತ್ತಿದ್ದೇನೆ. ಆದರೆ ಭವಿಷ್ಯದಲ್ಲಿ ಇಲ್ಲಿ ಹೊಸ ಕೇಸುಗಳನ್ನು ತೆಗೆದುಕೊಳ್ಳಲಾರೆ'' ಎಂದು ಬಸವಪ್ರಭು ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಪಾಟೀಲ್ ಕುಟುಂಬ : ಶಿವರಾಜ್ ಪಾಟೀಲ್ ಅವರ ಹಿರಿಯ ಮಗ ಡಾ ಶರಣ್ ವಿ ಪಾಟೀಲ್ ಅವರು ಸ್ಪರ್ಶ್ ಆಸ್ಪತ್ರೆ ಸಮೂಹದ ಅಧ್ಯಕ್ಷರಾಗಿದ್ದು, ಶಾಮನೂರು ಶಿವಶಂಕರಪ್ಪ ಅವರ ಪುತ್ರಿಯನ್ನು ವರಿಸಿದ್ದಾರೆ.

ಕಿರಿಯ ಮಗ ಬಸವಪ್ರಭು ವಿ ಪಾಟೀಲ್ ಅವರು ಪಂಜಾಬ್ ಹಾಗೂ ಹಿಮಾಚಲದ ರಾಜ್ಯಪಾಲ, ಮಾಜಿ ಕೇಂದ್ರ ಗೃಹಸಚಿವ ಶಿವರಾಜ್ ಪಾಟೀಲ್ ಅವರ ಪುತ್ರಿ ಸಪ್ನಾ ಅವರನ್ನು ವಿವಾಹವಾಗಿದ್ದಾರೆ. ಸಪ್ನಾ ಅವರು 2002ರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. 15 ವರ್ಷದ ಪುತ್ರಿ ಹಾಗೂ 19 ವರ್ಷದ ಪುತ್ರನನ್ನು ಪಾಟೀಲ್ ಹೊಂದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Lokayukta Shivaraj Patil's younger son Basavaprabhu V Patil, a Supreme Court advocate has taken Scam Hit Reddy Brothers and B Sri Ramulu's criminal case. But Patil said he may not defend Reddy Brothers after all pending cases over.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more