ಸ್ನಾನ ಮಾಡ್ತಿದ್ದ ಮಹಿಳೆ ವಿಡಿಯೋ ತೆಗೆದು ಜೈಲು ಪಾಲಾದ

ನೀವು ಸ್ನಾನ ಮಾಡುತ್ತಿರುವುದನ್ನು ವಿಡಿಯೋ ಮಾಡಿದ್ದೇನೆ. ಅದನ್ನು ಬಹಿರಂಗಪಡಿಸುತ್ತೇನೆ. ಹಾಗೆ ಮಾಡಬಾರದು ಎಂದರೆ ಮೊದಲು ಐದು ಸಾವಿರ ರುಪಾಯಿ ನೀಡಬೇಕು ಎಂದು ಮಹಿಳೆಯ ಬೆನ್ನು ಹತ್ತಿದ್ದ ವಾಂಗ್ ಚೋ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.
ಏನಾಯಿತೆಂದರೆ... ಅದೊಂದು ವಠಾರ. ಮಹಿಳೆಯ ಮನೆಗೆ ಅಂಟಿಕೊಂಡಿದ್ದ ಮನೆಯಲ್ಲೇ ಇವನೂ ಬಾಡಿಗೆಗೆ ಇದ್ದ. ಎರಡೂ ಕುಟುಂಬಗಳಿಗೆ ಒಂದೇ ಬಾತ್ ರೂಮ್ ಇತ್ತು. ನಗ್ನ ಚಿತ್ರ ತೆಗೆದು ಬ್ಲ್ಯಾಕ್ ಮೇಲ್ ಮಾಡುವ ಬಗ್ಗೆ ಪತ್ರಿಕೆಗಳಲ್ಲಿ ಓದಿಕೊಂಡಿದ್ದ. ಅದನ್ನೇ ಸ್ವತಃ ಮಾಡಿರುವುದಾಗಿ ಆಪಾದಿತ ತಪ್ಪೊಪ್ಪಿಕೊಂಡಿದ್ದಾನೆ.
ಯಾರೂ ಇಲ್ಲದಾಗ ಬಾತ್ ರೂಮಿನೊಳಕ್ಕೆ ಸೇರಿಕೊಂಡ ಚೋ, ಶವರ್ ಸುರಿಯುತ್ತಿರುವ ದಿಕ್ಕಿನಲ್ಲಿ ಮುಖ ಮಾಡಿ ತನ್ನ ಮೊಬೈಲನ್ನು ಇಟ್ಟಿದ್ದ. ನಂತರ ಅಲ್ಲಿಂದ ವಾಪಸಾಗಿದ್ದ. ಸ್ವಲ್ಪ ಸಮಯದ ಮೇಲೆ ಮಹಿಳೆ ಸ್ನಾನಕ್ಕೆ ಹೋಗಿರುವುದನ್ನು ಖಾತರಿಪಡಿಸಿಕೊಂಡಿದ್ದ. ಮಹಿಳೆ ಸ್ನಾನ ಮುಗಿಸಿಕೊಂಡು ವಾಪಸಾಗುತ್ತಿದ್ದಂತೆ ಬಾತ್ ರೂಮಿನೊಳಕ್ಕೆ ಹೋಗಿ ತನ್ನ ಮೊಬೈಲನ್ನು ತೆಗೆದುಕೊಂಡು ಬಂದಿದ್ದ.
ಮೊಬೈಲಿನಲ್ಲಿದ್ದ ವಿಡಿಯೋವನ್ನು ಸಿ.ಡಿ. ಗೆ ಇಳಿಸಿದ್ದ. ಅದರಲ್ಲೊಂದು ಕಾಪಿಯನ್ನು ಮಹಿಳೆಗೆ ಕಳಿಸಿ, 5,000 ರುಪಾಯಿ ಕೊಡು ಎಂದು ಪೀಡಿಸುತ್ತಿದ್ದ.












Click it and Unblock the Notifications