ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಟ್ಟಾ ಇಟಾಸ್ಕಾ ಗಳಿಕೆ: ಶೋಭಾ ಕರಂದ್ಲಾಜೆಗೂ ಋಣ ಸಂದಾಯ

By Srinath
|
Google Oneindia Kannada News

katta-subramanya-itaska-shobha-gets-share
ಬೆಂಗಳೂರು, ಆಗಸ್ಟ್ 16 : ಇಟಾಸ್ಕಾ ಕಂಪನಿಯಿಂದ ಕಟ್ಟಾ ಸುಬ್ರಮಣ್ಯ ನಾಯ್ಡುಗೆ (ಖೈದಿ ನಂಬರ್ 7801) ಬಂದಿದ್ದ 87 ಕೋಟಿ ರೂ ಲಂಚದಲ್ಲಿ ಸಚಿವೆ ಶೋಭಾ ಕರಂದ್ಲಾಜೆಗೆ 70 ಲಕ್ಷ ರೂ ಋಣ ಸಂದಾಯವಾಗಿದೆ ಎಂಬ ಕುತೂಹಲಕಾರಿ ಸಂಗತಿ ಲೋಕಾಯುಕ್ತ ಆರೋಪಪಟ್ಟಿಯಲ್ಲಿ ದಾಖಲಾಗಿದೆ. ಈ ರೀತಿ ಹಣ ಸಂದಾಯ ಆಗಿರುವ ಬಗ್ಗೆ ಶೋಭಾ ಅವರಿಂದ ವಿವರಣೆಯನ್ನೂ ಪಡೆಯಲಾಗಿದೆ.

ಸಚಿವೆ ಶೋಭಾ ಕರಂದ್ಲಾಜೆಗೆ ಕಟ್ಟಾ ಸುಬ್ರಹ್ಮಣ್ಯ 70 ಲಕ್ಷ ರೂಪಾಯಿ ಸಾಲ ನೀಡಿದ್ದರು. ಈ ಹಣ ಕೂಡ ಇಟಾಸ್ಕಾ ಕಂಪನಿಯಿಂದ ಲಂಚದ ರೂಪದಲ್ಲಿ 'ಇಂದು ಬಿಲ್ಡರ್ಸ್‌ ಸಂಸ್ಥೆ'ಗೆ ಬಂದಿದ್ದ ಮೊತ್ತವೇ ಆಗಿತ್ತು ಎಂಬುದು ಆರೋಪಪಟ್ಟಿಯಲ್ಲಿ ದಾಖಲಾಗಿದೆ. ಮುಂದುವರಿದ ಭಾಗವಾಗಿ, ಶೋಭಾಗೆ 70 ಲಕ್ಷ ರುಪಾಯಿ ಸಾಲ ಮಾಡುವ ಪ್ರಮೇಯವೇನಿತ್ತು ಎಂಬುದು ತಕ್ಷಣಕ್ಕೆ ತಿಳಿದುಬದಿಲ್ಲ.

ಫೆಡರಲ್ ಬ್ಯಾಂಕ್ ಚೆಕ್ ಮೂಲಕ ಸಂದಾಯ: 'ಇಂದು ಬಿಲ್ಡರ್ಸ್ ಖಾತೆಯಿಂದ ಹಣ ಸಂದಾಯ ಆಗಿರುವ ಬಗ್ಗೆ ಶೋಭಾ ಅವರಿಂದ ವಿವರಣೆ ಪಡೆಯಲಾಗಿದೆ. ತಮ್ಮ ಕೋರಿಕೆಯಂತೆ ಕಟ್ಟಾ ಅವರು ರೂ 70 ಲಕ್ಷ ಮೊತ್ತಕ್ಕೆ ಚೆಕ್ ನೀಡಿದ್ದರು. ಅದನ್ನು ಆರ್.ಟಿ. ನಗರದ ಫೆಡರಲ್ ಬ್ಯಾಂಕ್ ಶಾಖೆಯಲ್ಲಿ ನಗದೀಕರಿಸಲಾಗಿತ್ತು. ಕೆಲ ದಿನಗಳ ಬಳಿಕ ತಾವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಲ ಪಡೆದಿದ್ದು, ಕಟ್ಟಾ ಅವರ ಸೂಚನೆಯಂತೆ ಜಿ.ವಿ. ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿಯ ಹೆಸರಿಗೆ 70 ಲಕ್ಷ ರೂಪಾಯಿ ಮರುಪಾವತಿ ಮಾಡಿರುವುದಾಗಿ ದಾಖಲೆ ಸಮೇತ ಉತ್ತರ ನೀಡಿದ್ದಾರೆ' ಎಂದು ಆರೋಪಪಟ್ಟಿಯಲ್ಲಿ ವಿವರಿಸಲಾಗಿದೆ.

English summary
According to Lokayukta Charge Sheet Katta Subramanya Naidu who was paid 87 crores in Itaska case has given Rs. 70 lakh to Minister Shobha Karandlaje towards a loan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X