ಆ.18, 19ರಂದು ಯಾದಗಿರಿಯಲ್ಲಿ ಉದ್ಯೋಗ ಮೇಳ

Job fair in Yadgir
ಯಾದಗಿರಿ, ಆ. 16 : ನಗರದ ಜವಾಹರ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ದಿನಾಂಕ 18 ಮತ್ತು 19ರಂದು ನಡೆಯಲ್ಲಿರುವ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಮೇಳಕ್ಕೆ ಭರದ ಸಿದ್ಧತೆ ನಡೆದಿದೆ. ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಉದ್ಯೋಗ ಹಾಗೂ ಕೌಶಲ್ಯ ತರಬೇತಿ ನೀಡುವ ಸಲುವಾಗಿ ಮೇಳವನ್ನು ಯಾದಗಿರಿಯಲ್ಲಿ ಆಯೋಜಿಸಲಾಗಿದೆ.

ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಖಾಸಗಿ ಉದ್ಯಮದಾರರೊಂದಿಗೆ ಸಂದರ್ಶನಕ್ಕೆ ಕಳಿಸಲಾಗುವುದು. ಉದ್ಯೋಗಕ್ಕೆ ಆಯ್ಕೆಯಾಗದ ಅಭ್ಯರ್ಥಿಗಳಿಗೆ ಉಚಿತ ಕೌಶಲ್ಯ ತರಬೇತಿ ನೀಡಿ ಪ್ರಮಾಣಪತ್ರ ನೀಡುವುದು ಮತ್ತು ಖಾಸಗಿ ರಂಗದಲ್ಲಿ ಸೂಕ್ತವಾದ ಉದ್ಯೋಗ ಕಲ್ಪಿಸಿಕೊಡುವುದು.

ಈ ಉದ್ಯೋಗ ಮೇಳದಲ್ಲಿ ಸುಮಾರು 70ಕ್ಕಿಂತ ಹೆಚ್ಚು ಖಾಸಗಿ ರಂಗದ ಕಂಪನಿಗಳು ಭಾಗವಹಿಸಿ, ಸುಮಾರು 3,000ಕ್ಕಿಂತ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಅದರಲ್ಲಿ ಪ್ರಮುಖವಾಗಿ ಜಿಂದಾಲ್, ಟಾಟಾ ಜಾನ್ಸನ್ ಆಟೊಮೋಟಿವ್, ಸೊಡೆಕ್ಸೊ ಫುಡ್ ಫೆಸಿಲಿಟೀಸ್, ಟಿ. ಡಿ. ಪಾವರ್ ಸಿಸ್ಟಮ್ಸ್, ಎಚ್.ಡಿ.ಎಫ್.ಸಿ. ಬ್ಯಾಂಕ್, ರಕ್ಷಾ ಸೆಕ್ಯೂರಿಟಿ, ಅರವಿಂದ್ ಲಿಮಿಟೆಡ್, ನವತಾ ರೋಡ್ ಟ್ರಾನ್ಸ್ ಪೊರ್ಟ್, ಓಪೆಕ್ ಆಸ್ಪತ್ರೆ, ಶಿಲ್ಪಾ ಮೆಡಿಕೇರ್, ಸುರಾನಾ ಇಂಡಸ್ಟ್ರಿ, ಮೆಡ್ ಪ್ಲಸ್ ಹೆಲ್ತ್ ಸರ್ವಿಸಸ್, ಪಾಟೀಲ ಗ್ರೂಪ್ ಆಫ್ ಕಂಪನಿ, ಯುರೇಕಾ ಫೋರ್ಬ್ಸ್, ಮಣಿಪಾಲ ಗ್ರೂಪ್, ಉಗಾರ ಶುಗರ್, ಇಂಡೋ ಯು ಎಸ್ ಮಿಮ್, ಮಾಣಿಕಭಾಗ ಅಟೋಮೊಬೈಲ್ಸ್ ಮುಂತಾದ ಉದ್ಯೋಗದಾತರು ಭಾಗವಹಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ಮುಂಚಿತ ನೋಂದಣಿಗಾಗಿ Helpline : 080-23441212/23441717. Website: www.jobraiser.com ಸಂಪರ್ಕಿಸಬಹುದು ಎಂದು ಕರ್ನಾಟಕ ವೃತ್ತಿ ತರಬೇತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+