ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣಾ ಉಪವಾಸಕ್ಕೆ ಅನುಮತಿ ನಿರಾಕರಿಸಿದ ಪೊಲೀಸರು

|
Google Oneindia Kannada News

Anna Hazare fast
ನವದೆಹಲಿ, ಅ 15: ಅಣ್ಣಾ ಹಜಾರೆ ನಾಳೆ ನಡೆಸಲು ಉದ್ದೇಶಿತ ನಿರಶನ ಸತ್ಯಾಗ್ರಹ ಹೊಸ ತಿರುವು ಪಡೆದಿದೆ. ನಾಳೆ ನವದೆಹಲಿಯಲ್ಲಿ ನಡೆಯಬೇಕಿದ್ದ ಉಪವಾಸ ಸತ್ಯಾಗ್ರಹಕ್ಕೆ ಅನುಮತಿಯನ್ನು ದೆಹಲಿ ಪೊಲೀಸ್ ಇಲಾಖೆ ನಿರಾಕರಿಸಿದೆ.

ಆಗಸ್ಟ್ 16ರಂದು 74 ವರ್ಷದ ಗಾಂಧಿವಾದಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ನಡೆಸಲು ಉದ್ದೇಶಿಸಿದ್ದರು. ಆದರೆ ಇದಕ್ಕೆ ದೆಹಲಿ ಪೊಲೀಸರು 22 ಷರತ್ತುಗಳನ್ನು ವಿಧಿಸಿದ್ದರು. ಆದರೆ ಇದರಲ್ಲಿ 16 ಷರತ್ತುಗಳನ್ನು ಮಾತ್ರ ಒಪ್ಪಲು ಸಾಧ್ಯವೆಂದು ಅಣ್ಣಾ ಟೀಮ್ ಹೇಳಿತ್ತು. ಹೀಗಾಗಿ ದೆಹಲಿ ಪೊಲೀಸ್ ಇಲಾಖೆ ನಿರಶನ ನಡೆಸಲು ಒಪ್ಪಿಗೆ ನೀಡಿಲ್ಲ.

ಮೂರೇ ದಿನ ನಿರಶನ ಮಾಡಬೇಕು ಮತ್ತು 5 ಸಾವಿರಕ್ಕಿಂತ ಹೆಚ್ಚು ಜನರು ಭಾಗವಹಿಸಬಾರದು ಸೇರಿದಂತೆ ಕೆಲವು ಷರತ್ತುಗಳನ್ನು ಅಣ್ಣಾ ಟೀಂ ಬಿಲ್ ಕುಲ್ ನಿರಾಕರಿಸಿದೆ.

ಸುಪ್ರಿಂಕೋರ್ಟ್ ಮತ್ತು ಹೈಕೋರ್ಟ್ ನಿರ್ದೇಶನವನ್ನು ಆಧಾರವಾಗಿಟ್ಟುಕೊಂಡು ದೆಹಲಿ ಪೊಲೀಸರು ನಿರಶನಕ್ಕೆ ಅನುಮತಿ ನೀಡಲು ನಿರಾಕರಿಸಿದೆ ಎಂದು ದೆಹಲಿ ಪೊಲೀಸ್ ಮೂಲಗಳು ಹೇಳಿವೆ.

ಮುಂದಿನ ತೀರ್ಮಾನವನ್ನು ಶೀಘ್ರದಲ್ಲಿ ಚರ್ಚಿಸಿ ಕೈಗೊಳ್ಳಲಾಗುವುದು ಎಂದು ಅಣ್ಣಾ ಟೀಂ ಹೇಳಿದೆ. ಆದರೆ ನಿರಶನದ ಮಹತ್ವವನ್ನು ಸಾರಲು ನ್ಯಾಯಾಂಗ ಬಂಧನಕ್ಕೂ ಹೇಸುವುದಿಲ್ಲ ಎಂದು ಅಣ್ಣಾ ಹಜಾರೆ ಟೀ ದೃಢವಾಗಿ ಹೇಳಿದೆ.

English summary
Delhi Police has rejected permission for Anna Hazare proposed indefinite fast on August 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X