ಮೊಬೈಲ್‌ಗೆ ಅಶ್ಲೀಲ ವೀಡಿಯೊ: ಟೆಕ್ನಿಷಿಯನ್ ಬಂಧನ

ಸಿಕಂದರಾಬಾದಿನ ಕಾರ್ಖಾನಾ ಲೇ ಔಟ್ ನಲ್ಲಿ 'ಯಂಗ್ ಸೀಸನ್ಸ್ ಗಿಫ್ಟ್ಸ್' ಎಂಬ ಮೊಬೈಲ್ ಶಾಪ್ ಹೊಂದಿರುವ 29 ವರ್ಷದ ಮೊಹಮದ್ ಹಫೀಜಾ ಎಂಬ ಆರೋಪಿ ಮೊಬೈಲ್‌ಗಳಿಗೆ ಅಶ್ಲೀಲ ವೀಡಿಯೊಗಳನ್ನು ತುಂಬಿಸಿಕೊಡುವುದನ್ನು ಕಾಯಕ ಮಾಡಿಕೊಂಡಿದ್ದ.
ಹಫೀಜಾ, 2008ರಲ್ಲಿ ಯಂಗ್ ಸೀಸನ್ಸ್ ಗಿಫ್ಟ್ಸ್ ಮಳಿಗೆಯಲ್ಲಿ ಟೆಕ್ನಿಷಿಯನ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಇತ್ತೀಚೆಗೆ ಅಂಗಡಿಯ ಮಾಲೀಕರು ದುಬೈಗೆ ಹೋಗಿದ್ದು, ಅಂಗಡಿಯಲ್ಲಿ ಇವನದೇ ಪಾರುಪತ್ಯ ನಡೆದಿತ್ತು. ಇಂಟರ್ನೆಟ್ ನಿಂದ ಲೈಂಗಿಕ ಚಿತ್ರಾವಳಿಗಳನ್ನು ನೀರಿನ್ನೂರು ರೂಪಾಯಿಗೆ ಅಂಗಡಿಯ ಕಾಯಂ ಗ್ರಾಹಕರಿಗೆ ಅಪ್ ಲೋಡ್ ಮಾಡಿಕೊಡುತ್ತಿದ್ದ.
ಖಚಿತ ಸುಳಿವಿನ ಮೇರೆ ಗ್ರಾಹಕರ ಸೋಗಿನಲ್ಲಿ ಅಂಗಡಿ ಪ್ರವೇಶಿದ ಪೊಲೀಸರು ಹಫೀಜಾನನ್ನು ಬಂಧಿಸಿದ್ದಾರೆ. ಅಂಗಡಿಯಲ್ಲಿದ್ದ ಸಿಪಿಯು, ಕಂಪ್ಯೂಟರ್, ಕಾರ್ಡ್ ರೀಡರ್ ಮತ್ತಿತರ ಸಾಧನ, ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಹಫೀಜಾ ಹೆಚ್ಚಾಗಿ ಹೈಸ್ಕೂಲು ಮತ್ತು ಕಾಲೇಜು ಹುಡುಗುರಿಗೆ ಈ ಸೇವೆ ಒದಗಿಸುತ್ತಿದ್ದ. ಆದ್ದರಿಂದ ತಮ್ಮ ತಮ್ಮ ಹುಡುಗರ ಮೊಬೈಲ್‌ಗಳನ್ನು ಒಮ್ಮೆ ಚೆಕ್ ಮಾಡಿಸುವಂತೆ ಸುತ್ತಮುತ್ತಲ ಪ್ರದೇಶದ ನಿವಾಸಿಗಳಿಗೆ ಪೊಲೀಸರು ಸಂದೇಶ ರವಾನಿಸಿದ್ದಾರೆ.












Click it and Unblock the Notifications