ರಾಜಕೀಯ ಹದಗೆಟ್ಟು ಹೊಲಸಾಗಿದೆ : ಶ್ರೀರಾಮುಲು

12 ವರ್ಷಗಳ ಹಿಂದೆ ಸಾಮೂಹಿಕ ವಿವಾಹಗಳನ್ನು ಪ್ರಾರಂಭಿಸಿದಾಗ ರಾಜಕೀಯ ಅಧಿಕಾರ ಇರಲಿಲ್ಲ. ಸುಷ್ಮಾ ಸ್ವರಾಜ್ ಅವರು 1999ರಲ್ಲಿ ಬಳ್ಳಾರಿಯಲ್ಲಿ ಸ್ಪರ್ಧಿಸಿದಾಗ ಶ್ರೀವರಮಹಾಲಕ್ಷ್ಮಿ ಹಬ್ಬದ ಜೊತೆ ಜೊತೆಯಲ್ಲಿ ಸಾಮೂಹಿಕ ವಿವಾಹಗಳನ್ನು ನಡೆಸಲು ತಿಳಿಸಿದ್ದರು. ಸಾಮೂಹಿಕ ವಿವಾಹಗಳು ನನ್ನ ಕೊನೆಯ ಉಸಿರು ಇರುವವರೆಗೂ ನಡೆಯುತ್ತವೆ. ಹೀಗೆಯೇ ಮುಂದುವರಿಸಿ ಗಿನ್ನಿಸ್ ದಾಖಲೆಯನ್ನು ನಿರ್ಮಿಸುವೆ ಎಂದು ಅವರು ಹೇಳಿದರು.
ನವದಂಪತಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ಅಥವಾ ಎರಡು ಮಕ್ಕಳನ್ನು ಮಾತ್ರ ಪಡೆಯಬೇಕು. ಪ್ರತಿಯೊಬ್ಬರೂ ಕೂಡ ನಿಮ್ಮ ಮಕ್ಕಳನ್ನು ದೊಡ್ಡ ದೊಡ್ಡ ಐಎಎಸ್ - ಐಪಿಎಸ್ ಅಧಿಕಾರಿಗಳನ್ನಾಗಿ ಮಾಡುವ ಕನಸು ಕಾಣಬೇಕು. ರೆಡ್‌ಲೈಟ್ ಕಾರಲ್ಲಿ ಮಕ್ಕಳು ತಿರುಗಾಡುವಂತಾಗಬೇಕು. ರಾಜಕೀಯಕ್ಕೆ ಮಾತ್ರ ನಿಮ್ಮ ಮಕ್ಕಳನ್ನು ಕಳುಹಿಸಬೇಡಿ. ರಾಜಕೀಯ ಸಂಪೂರ್ಣ ಹದಗೆಟ್ಟು ಹೊಲಸಾಗಿದೆ ಎಂದರು.
ಉತ್ತರ ಕರ್ನಾಟಕದಲ್ಲಿ ಶ್ರೀರಾಮುಲು ಮನೆ ಮಾತು. ನಿಮ್ಮ ಪ್ರೀತಿ - ಗೌರವ, ಅಭಿಮಾನಕ್ಕೆ ನಾನು ಖುಣಿ. ದೇವರು ಮನಸ್ಸು ಮಾಡಿದ್ರೆ ಏನಾದರೂ ಆಗುತ್ತದೆ. ಬಡವ ಶ್ರೀಮಂತನಾಗುತ್ತಾನೆ. ಶ್ರೀಮಂತ ಬಡವನಾಗುತ್ತಾನೆ. ಬಡವನಾದ ನಾನು ಹೆಲಿಕಾಪ್ಟರ್‌ನಲ್ಲಿ ಹಾರಾಡುತ್ತಿರುವುದಕ್ಕೆ ಅನೇಕರಿಗೆ ಅಸೂಯೆ ಇದೆ. ನನಗೆ ಅಧಿಕಾರ, ಅಂತಸ್ತು ಮತ್ತು ಹಣಕ್ಕಿಂತಲೂ ಬಡವರ ಸೇವೆಯೇ ಮುಖ್ಯ ಎಂದು ಹೇಳಿದರು.












Click it and Unblock the Notifications