ಹಗರಣ ಸರದಾರ ಬಿಎಸ್ ವೈಗೆ ಜೈಲು ಖಚಿತ: ಉಮಾಶ್ರೀ

bsy-will-be-definitely-jailed-actress-umasri
ಮಹಾಲಿಂಗಪುರ, ಆಗಸ್ಟ್ 12: ಹಗರಣಗಳ ಸರದಾರ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಲೋಕಾಯುಕ್ತ ವರದಿ ಪ್ರಕಾರ ಜೈಲು ಸೇರುವುದು ಖಚಿತ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಹಿರಿಯ ನಟಿ ಉಮಾಶ್ರೀ ಹೇಳಿದ್ದಾರೆ.

ರೈತರ ಅನುಕೂಲಕ್ಕಾಗಿ ಅನುಷ್ಠಾನಗೊಳಿಸಿದ ಭದ್ರಾ ಮೇಲ್ದಂಡೆ ಕಾಮಗಾರಿ ಗುತ್ತಿಗೆ ಅವ್ಯವಹಾರದಲ್ಲಿ ಯಡಿಯೂರಪ್ಪ ಸಿಲುಕಿರುವುದರಿಂದ 153 (6) ಅಡಿ ಹಗರಣವನ್ನು ತನಿಖೆ ನಡೆಸುವಂತೆ ನ್ಯಾಯಾಲಯ ಲೋಕಾಯುಕ್ತರಿಗೆ ಆದೇಶ ನೀಡಿದೆ.

ಲೋಕಾಯುಕ್ತರ ವರದಿ ಬಳಿಕ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡುರಂತೆ ಅಧಿಕಾರ ದುರ್ಬಳಕೆ ಮತ್ತು ಭ್ರಷ್ಟಾಚಾರ ಎಸಗಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಜೈಲು ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಜಾತ್ಯತೀತ ನಾಯಕರ ಅವಶ್ಯಕತೆ ಇದೆ. ಅಧಿಕಾರದಲ್ಲಿರುವ ಬಿಜೆಪಿ ಮಂತ್ರಿಗಳು ಕೇವಲ ದುಡ್ಡಿನ ದುರಾಸೆಯಲ್ಲಿ ಮುಳುಗಿರುವುದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಆರೋಪಿಸಿದರು. ಪಟ್ಟಣದ 1 ಮತ್ತು 4ನೇ ವಾರ್ಡ್‌ನಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ನಡಿಗೆ ಜನರ ಬಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಧುರೀಣ ಸಂಗಪ್ಪ ಹಲ್ಲಿ ಮಾತನಾಡಿ, ಬಿಜೆಪಿ ಸರಕಾರದ ಎಲ್ಲ ಸಚಿವರು, ಶಾಸಕರು ಜೇಬು ತುಂಬಿಕೊಳ್ಳುವ ಕಾಯಕದಲ್ಲಿ ನಿರತರಾಗಿದ್ದಾರೆ. ಪಕ್ಷದ ಆಂತರಿಕ ಕಚ್ಚಾಟದಲ್ಲಿ ಕಾಲ ಹರಣ ಮಾಡುತ್ತಿದ್ದಾರೆಂದು ಆರೋಪಿಸಿದರು.

ಮಹಾಲಿಂಗಪ್ಪ ಕೊಳಿಗುಡ್ಡ, ಬಸಿರ ಸೌದಾಗರ, ಜಾವೇದಅಲಿ ಬಾಗವಾನ, ಶ್ರೀಶೈಲಪ್ಪ ವಜ್ಜರಮಟ್ಟಿ, ಯಲ್ಲನಗೌಡ ಪಾಟೀಲ, ಮಹಾಂತೇಶ ಪಟ್ಟಣಶೆಟ್ಟಿ, ಹಸನಅಲಿ ಸಾಂಗಲಿಕರ, ಎಸ್‌.ಎಂ.ಯಾದವಾಡ, ಉಸ್ಮಾನ ಪೆಂಡಾರಿ, ಸುರೇಶ ಜಾಧವ, ರಾಮಣ್ಣ ಬಂಡಿವಡ್ಡರ, ಹೊಳೆಪ್ಪ ಬಾಡಗಿ, ಅನೀಲ ದೇಸಾಯಿ, ಗಜಾನನ ಹಾಸಿಲಕರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಈಶ್ವರ ಚಮಕೇರಿ ಸ್ವಾಗತಿಸಿ, ನಿರೂಪಿಸಿದರು. ನಾನಾ ಜೋಶಿ ವಂದಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+