ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟರ ವಿರುದ್ಧ ಕೇಸ್ ಜಡಿದ ಹೊಸ ಲೋಕಾಯುಕ್ತ

By Mahesh
|
Google Oneindia Kannada News

Lokayukta Shivaraj Patil
ಬೆಂಗಳೂರು ಆ.9: ಸೋಮವಾರ ಸಂಜೆ ಕಡತ ಪರಿಶೀಲನೆ ನಡೆಸಿದರೂ ಅಕ್ರಮಗಳ ಲೆಕ್ಕ ಸಿಗದ ಕಾರಣ, ಇಂದು ಕೂಡಾ ಬೆಂಗಳೂರು ಗ್ರಾಮಾಂತರ ಭಾಗದ ಉಪ ನೋಂದಣಿ ಕಚೇರಿಗಳ ಪರಿಶೀಲನೆಯಲ್ಲಿ ನಿರತರಾಗಿದ್ದ ಹೊಸ ಲೋಕಾಯುಕ್ತ ಶಿವರಾಜ್ ಪಾಟೀಲ್ ಅವರು ಹಲವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ದೊಡ್ಡಬಳ್ಳಾಪುರ, ಆನೇಕಲ್, ದೇವನಹಳ್ಳಿ, ಹೊಸಕೋಟೆ, ಜಿಗಣಿ ಹಾಗೂ ನೆಲಮಂಗಲ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಶಿರಾಜ್ ಪಾಟೀಲ್ ತಂಡದ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದೆ. ಸುಮಾರು 10ಕ್ಕೂ ಅಧಿಕ ದಲ್ಲಾಳಿಗಳ ಮೇಲೆ ಸ್ವಯಂಪ್ರೇರಿತರಾಗಿ(suo moto) ಪ್ರಕರಣವನ್ನು ದಾಖಲಿಸಲಾಗಿದೆ.

ನೆಲಮಂಗಲದ ದಲ್ಲಾಳಿಯಿಂದ 46 ಸಾವಿರ ರು, ಹೊಸ ಕೋಟೆ ಎಸ್ ಡಿಎ ವಿಶ್ವನಾಥ ಬಳಿ ಇದ್ದ 11,450 ರು, ಸಬ್ ರಿಜಿಸ್ಟ್ರರ್ ಪಾಪಣ್ಣ ಬಳಿ ಇದ್ದ ಹೆಚ್ಚುವರಿ ಹಣ 15,260 ರು ಅನ್ನು ವಶಪಡಿಸಿಕೊಳ್ಳಲಾಗಿದೆ. ಲೋಕಾಯುಕ್ತ ಡಿವೈಎಸ್ಪಿ ಪ್ರಸನ್ನ ರಾಜು ನೇತೃತ್ವದ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

ಕೆಲವು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಬ್ರೋಕರ್ ಗಳು, ಸಬ್ ರಿಜಿಸ್ಟ್ರಾರ್ ಗಳು, ಎಸ್ ಡಿಎ, ಎಫ್ ಡಿಎಗಳು ಅಗತ್ಯಕ್ಕಿಂತ ಹೆಚ್ಚು ಹಣ ಪಡೆಯುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಉಪ ನೋಂದಣಿ ಕಚೇರಿಗಳಲ್ಲಿ ಆನ್ ಲೈನ್ ನೋಂದಣಿ, ಸಿಸಿ ಕೆಮೆರಾ ಅಳವಡಿಕೆ ಮಾಡಲು ಚಿಂತನೆ ನಡೆದಿದೆ ಎಂದು ಶಿವರಾಜ್ ಪಾಟೀಲ್ ಹೇಳಿದ್ದಾರೆ.

English summary
Karnataka Lokayukta sleuths raids six Sub Registrar offices in outskirts of Bangalore. Lokayukta surprise check in Hoskote, Doddaballapur, Jigani, Devanahalli, Anekal and Nelamangala office. Later Lokayukta Shivaraj Patil booked suo moto cases against corrupt officials
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X