ಅಧಿಕಾರ ಕೈತಪ್ಪುವ ಭೀತಿ, ಆತಂಕದ ಗುಂಡಿ ಒತ್ತಿದ ರೆಡ್ಡಿತ್ರಯರು

ಅಲ್ಲದೆ, ಗಣಿ ರೆಡ್ಡಿಗಳ ಬಣದ ನಾಯಕನಾಗಿರುವ ಗಾಲಿ ಜನಾರ್ದನರೆಡ್ಡಿ ಸಂಜೆಯೇ ನಾಗಪುರಕ್ಕೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದರು. ನಂತರ ದೆಹಲಿಗೆ ತೆರಳಿ ಇತರ ವರಿಷ್ಠರನ್ನು ಭೇಟಿ ಮಾಡಿದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಲೋಕಾಯುಕ್ತರ ಗಣಿ ವರದಿಯಲ್ಲಿ ನಾಲ್ವರು ಸಚಿವರ ಹೆಸರುಗಳನ್ನೂ ಪ್ರಸ್ತಾಪಿಸಲಾಗಿತ್ತು. ಗಾಲಿ ಜನಾರ್ದನರೆಡ್ಡಿ, ಗಾಲಿ ಕರುಣಾಕರರೆಡ್ಡಿ, ಬಿ.ಶ್ರೀರಾಮುಲು ಮತ್ತು ವಿ.ಸೋಮಣ್ಣ.
ಆದರೆ, ಈ ಬಗ್ಗೆ ವರದಿ ಬಗ್ಗೆ ಪಕ್ಷದ ಹಿರಿಯ ನಾಯಕರು ಮತ್ತು ಸಂಘ ಪರಿವಾರದ ಮುಖಂಡರು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಸೋಮಣ್ಣ ಅವರನ್ನು ಸಂಪುಟದಲ್ಲಿ ಸೇರ್ಪಡೆ ಮಾಡುವ ಕುರಿತು ನಿರ್ಧಾರ ಕೈಗೊಂಡರು. ವರದಿಯಲ್ಲಿ ಸೋಮಣ್ಣ ಅವರ ಮಕ್ಕಳು ಎಂದಷ್ಟೇ ಪ್ರಸ್ತಾಪಿಸಲಾಗಿದೆ. ಸೋಮಣ್ಣನವರಿಗೂ ಮತ್ತು ಆ ಕಂಪನಿಗೂ ಯಾವುದೇ ಸಂಬಂಧವಿಲ್ಲ. ಪಾಲುದಾರಿಕೆಯೂ ಇಲ್ಲ ಎಂಬ ಕಾರಣಕ್ಕಾಗಿ ಸಂಪುಟಕ್ಕೆ ಅವಕಾಶ ಕಲ್ಪಿಸಲಾಯಿತು ಎನ್ನಲಾಗಿದೆ.
ಸೋಮವಾರ ಮಧ್ಯಾಹ್ನ ಸೋಮಣ್ಣ ಹೆಸರು ನೂತನ ಮಂತ್ರಿಗಳ ಪಟ್ಟಿಯಲ್ಲಿರುವ ಬಗ್ಗೆ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಬಿಜೆಪಿಯಲ್ಲೇ ಸಾಕಷ್ಟು ಅಚ್ಚರಿ ಉಂಟು ಮಾಡಿತು. ಇದೇ ವೇಳೆ ಗಣಿ ರೆಡ್ಡಿಗಳ ಹೆಸರನ್ನು ನೂತನ ಮಂತ್ರಿಗಳ ಪಟ್ಟಿಯಿಂದ ಕೈಬಿಟ್ಟಿರುವುದು ಮತ್ತಷ್ಟು ಆಶ್ಚರ್ಯ ತಂದಿತು.
ಸೋಮಣ್ಣ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬಹುದಾದರೆ ತಮಗೇಕೆ ಇಲ್ಲ ಎಂದು ಗಣಿ ರೆಡ್ಡಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ರಚಿಸಲು ತಮ್ಮ ನೆರವು ಬೇಕಾಗುತ್ತದೆ ಹೊರತು ಸಂಪುಟಕ್ಕೆ ಅಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಜನಾರ್ದನ ರೆಡ್ಡಿ ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications