ಅಣ್ಣಾ ಹಜಾರೆ ತಾಲಿಬಾನ್ ಗಾಂಧಿ: ಶಿವಸೇನಾ

ಹಜಾರೆ ಕೂಡಾ ಭ್ರಷ್ಟಾಚಾರಿ ಆದರೆ, ಸಂತನ ಮುಖವಾಡ ಧರಿಸಿ ಚಳವಳಿ ನಡೆಸುತ್ತಿದ್ದಾರೆ ಎಂದು ಜೈನ್ ಹೇಳಿದ್ದಾರೆ.
ಸರ್ಕಾರ ಮಂಡಿಸಿದ ಲೋಕಪಾಲ ಮಸೂದೆ ವಿರುದ್ಧ ಚಳವಳಿ ನಡೆಸುವ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಸಶಕ್ತ ಜನ ಲೋಕಪಾಲ ಮಸೂದೆಗೆ ಆಗ್ರಹಿಸಿ ಅಣ್ಣಾ ಹಜಾರೆ ಅವರು ಆಗಸ್ಟ್ 16ರಿಂದ ಪ್ರತಿಭಟನೆ ನಡೆಸುತ್ತಿರುವುದು ಬ್ಲಾಕ್ ಮೇಲ್ ತಂತ್ರದ ಹಾಗಿದೆ. ಎಂದು ಜೈನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಣ್ಣಾ ಹಜಾರೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದ ಜೈನ್ ಜಲಗಾಂವ್‌ನ ಕೋರ್ಟ್ ವಿಚಾರಣೆಗೆ ಬಂದ ಸಂದರ್ಭದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಣ್ಣಾ ಹಜಾರೆ, ಸುರೇಶ್ ಜೈನ್ ಯಾರು, ಅಣ್ಣಾ ಯಾರು ಎಂದು ಇಡೀ ಪ್ರಪಂಚಕ್ಕೆ ಗೊತ್ತಿದೆ. ಚಳವಳಿ ಮಾಡಲಾಗದವರು, ಈ ರೀತಿ ನಿಂದನೆ ಮಾಡಿ ಜನಪ್ರಿಯತೆ ಗಳಿಸುತ್ತಾರೆ ಎಂದರು.
2003ರಲ್ಲಿ ಎನ್‌ಸಿಪಿ ಮುಖಂಡ ಹಾಗೂ ಸಚಿವರಾಗಿದ್ದ ಸುರೇಶ್ ಜೈನ್ ಅವರ ಭ್ರಷ್ಟಾಚಾರ ಆರೋಪ ಹೊರೆಸಿದ್ದ ಅಣ್ಣಾ ಹಜಾರೆ, ದೊಡ್ಡ ಆಂದೋಲನವನ್ನು ನಡೆಸಿದ್ದರು. ಸುರೇಜ್ ಜೈನ್ ಹಾಗೂ ನವಾಬ್ ಮಲಿಕ್, ಪದಂ ಸಿನ್ಹಾ ಪಾಟೀಲ್ ಅವರ ವಿರುದ್ಧ ನ್ಯಾ. ಪಿವಿ ಸಾವಂತ್ ಆಯೋಗ ತನಿಖೆ ನಡೆಸುತ್ತಿದೆ.












Click it and Unblock the Notifications