ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರವಿಶಂಕರ್ ಗುರೂಜಿ ಸಲಹೆಗೆ ಗುರ್ ಎಂದ ಶೆಟ್ಟರ್ ಬಣ

By Mahesh
|
Google Oneindia Kannada News

Set back to Ravishankar Guruji
ಬೆಂಗಳೂರು ಆ.5: ವಿದೇಶ ಪ್ರವಾಸಕ್ಕೆ ಅಣಿಯಾಗುತ್ತಿರುವ ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿಗೆ ತೀವ್ರ ಮುಖಭಂಗವಾಗಿದೆ. ಬಿಜೆಪಿ ಬಿಕ್ಕಟ್ಟು ಬಗೆಹರಿಸಲು ಸಂಧಾನ ಸೂತ್ರ ಹಿಡಿದು ಶೆಟ್ಟರ್ ಬಣ ಓಲೈಕೆ ಮುಂದಾಗಿದ್ದ ಗುರೂಜಿಗೆ ಆರಂಭದಲ್ಲೇ ಹಿನ್ನೆಡೆ ಉಂಟಾಗಿದೆ.

ಡಿವಿ ಸದಾನಂದ ಗೌಡರ ಸರ್ಕಾರಕ್ಕೆ ಪೂರ್ಣ ಬೆಂಬಲ ನೀಡಿ, ಭಿನ್ನಮತವನ್ನು ಕೈಬಿಡುವಂತೆ ರವಿಶಂಕರ್ ಗುರೂಜಿ ಮನವಿ ಮಾಡಿದ್ದರು. ಆದರೆ, ಗುರೂಜಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ಶೆಟ್ಟರ್ ಬಣ, ಗುರೂಜಿ ಮೊದಲು ತಮ್ಮ ಮೇಲಿರುವ ಭೂ ಒತ್ತುವರಿ ಆರೋಪವನ್ನು ಬಗೆ ಹರಿಸಿಕೊಳ್ಳಲ್ಲಿ, ಎಲ್ಲರೂ ರಾಜಕೀಯ ಸಂಧಾನಕ್ಕೆ ಇಳಿದರೆ ಅಷ್ಟೇ ಗತಿ. ಗುರೂಜಿ ಉಪದೇಶ ನಮಗೆ ಬೇಕಿಲ್ಲ. ಯಾವ ಸಂಧಾನಕ್ಕೂ ಸಿದ್ಧವಿಲ್ಲ ಎಂದಿದ್ದರು.

ಇದಕ್ಕೂ ಮುನ್ನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿದ್ದ ಮಾಜಿ ಸಿಎಂ ಯಡಿಯೂರಪ್ಪ, ಮುರುಗೇಶ್ ನಿರಾಣಿ ಹಾಗೂ ರೇಣುಕಾಚಾರ್ಯ ಅವರು ಮಹತ್ವದ ಮಾತುಕತೆ ನಡೆಸಿದ್ದರು. ಆಶ್ರಮ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ರವಿಶಂಕರ್ ಗುರೂಜಿ ಅವರ ಬೋಧನೆ ಸರ್ಕಾರಕ್ಕೆ ಅಗತ್ಯವಿದೆ. 3-4 ದಿನಗಳಲ್ಲಿ ಬಿಕ್ಕಟ್ಟು ಸರಿ ಹೋಗಲಿದೆ. ಸಚಿವ ಸಂಪುಟ ರಚನೆ ಹೈಕಮಾಂಡ್ ಸೂಚನೆಯಂತೆ ನಡೆಯಲಿದೆ. ನಾನು ಯಾವುದೆ ಒತ್ತಡ ಹೇರುತ್ತಿಲ್ಲ ಎಂದು ಸ್ಪಷ್ಪಪಡಿಸಿದರು.

English summary
Karnataka BJP Government Crisis: BJP dissidence leaders of Shettar gang have opposed interference of Art of Living fame Ravishankar Guruji in political matter. Ravishankar Guruji tried to advise followers of Shettar not quarrel and support DV Sadananda government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X