ಹೈಹೀಲ್ಡ್ ಚಪ್ಪಲಿಯಲ್ಲೇ ಇನಿಯನನ್ನು ಕೊಂದ ಚಾಮುಂಡಿ!
ಲಂಡನ್,
ಆಗಸ್ಟ್ 3: ಹೇಳಿ ಕೇಳಿ ಮಹಿಳೆಯರು ಧರಿಸುವ ಹೈಹೀಲ್ಡ್ ಚಪ್ಪಲಿಯ ಮೂಲ ಸ್ವರೂಪ ಕತ್ತಿಯ ಆಕಾರದ್ದಾಗಿದೆ. ಮಹಿಳೆ ತನ್ನ ಆತ್ಮಗೌರವಕ್ಕೆ ಚ್ಯುತಿಬಂದಾಗ ಅದನ್ನು ಕತ್ತಿ ಗುರಾಣಿಯನ್ನಾಗಿ ಬಳಸಲಿ ಎಂದು ಪುಣ್ಮಾತ್ಮ ಯಾರೋ ಅದನ್ನು ಅಭಿವೃದ್ಧಿಪಡಿಸಿರಬೇಕು. ಏಕೆಂದರೆ... id="toptextpromo">ಲಂಡನ್ನಿನಲ್ಲಿ
ಏನಾಯಿತೆಂದರೆ 46 ವರ್ಷದ ಮಹಿಳೆಯೊಬ್ಬಳು ತಾನು ತೊಟ್ಟಿದ್ದ ಹೈಹೀಲ್ಡ್ ಚಪ್ಪಲಿಯನ್ನೇ ಅಸ್ತ್ರವಾಗಿಸಿಕೊಂಡು ತನ್ನ ಬಾಯ್ ಫ್ರೆಂಡ್ ಅನ್ನು ಸಾಯಿಸಿ ಬಿಸಾಕಿದ್ದಾಳೆ. ಮೊನ್ನೆ ಸಂಡೆ ಸಂಜೆ ಇಬ್ಬರ ನಡುವೆ ಬರ್ಜರಿಯಾಗಿಯೇ ಜಗಳ ತಲೆಹಾಕಿದೆ. ಸರಿ, ಥೆಲ್ಮಾ ಕಾರ್ಟರ್ ಎಂಬ ಮಹಿಳೆಯೊಬ್ಬಳು ತನ್ನ 48 ವರ್ಷದ ಇನಿಯ ರಾಬರ್ಟ್ ಎಫ್. ಹಿಗ್ಡನ್ ತಲೆಗೆ ತನ್ನ ಹೈಹೀಲ್ಡ್ ಚಪ್ಪಲಿಯಲ್ಲಿ ರಪ್ಪರಪ್ಪಾಂತ ಗುದ್ದಿದ್ದಾಳೆ. id='are-slot-1' class='oiad oi-axt oiadv'> id='top-searched-articles'>ತಕ್ಷಣ
ಜಾಗ ಖಾಲಿ ಮಾಡಿದ್ದಾಳೆ. ಆದರೆ ಬೇಸರ ಇನ್ನೂ ಹೆಚ್ಚಾಗಿದೆ. ಅವಯ್ಯ ಏನಾದನೋ ಎಂದು ನೋಡಲು ಬಂದಿದ್ದಾಳೆ. ಪೊಲೀಸರು ಅವಳಿಗಾಗಿಯೇ ಕಾಯುತ್ತಿದ್ದರು. 'ಅಮ್ಮಿ, ನಿನ್ನ ಚಪ್ಪಲಿ ಸೇವೆ ಬರ್ಜರಿಯಾಗಿಯೇ ಇತ್ತು. ನಿನ್ನ ಲವರ್ ಆಸ್ಪತ್ರೇಲಿ ಗೊಟಕ್ ಅಂದ' ಎಂದು ಹೇಳಿ ಅವಳನ್ನು ಎತ್ತಾಕ್ಕೊಂಡು ಸ್ಟೇಷನ್ನತ್ತ ಹೊರಟರು.











Click it and Unblock the Notifications