Get Updates
Get notified of breaking news, exclusive insights, and must-see stories!

ಇವರೇ ದೇವರಗುಂಡ ವೆಂಕಪ್ಪಗೌಡ ಸದಾನಂದ ಗೌಡ!

DV Sadananda Gowda Profile
ಕರ್ನಾಟಕ ಮುಖ್ಯಮಂತ್ರಿ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಿ ಗುರುತಿಸಿಕೊಂಡಿರುವ ಸದಾನಂದಗೌಡರ ಈವರೆಗಿನ ಬದುಕಿನ ಸಂಪೂರ್ಣ ಚಿತ್ರಣ ಇಲ್ಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡ ಕುಟುಂಬದ ಸಾಮಾನ್ಯ ಮನೆತನಕ್ಕೆ ಸೇರಿದ ವೆಂಕಪ್ಪಗೌಡ ಮತ್ತು ಕಮಲ ದಂಪತಿಗಳ ಸುಪುತ್ರನಾಗಿ 18 ಮಾರ್ಚ್ 1953 ರಲ್ಲಿ ಸದಾನಂದ ಗೌಡರು ಜನಿಸಿದರು.
ಶಿಕ್ಷಣ:
* ಪುತ್ತೂರು ತಾಲೂಕಿನ ಕೆಯ್ಯೂರು ಮತ್ತು ಸುಳ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ.
* ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಿಂದ ಬಿ.ಎಸ್ಸಿ. ಪದವಿ.
* ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾ ವಿದ್ಯಾಲಯದಲ್ಲಿ ಕಾನೂನು ಶಿಕ್ಷಣ
* ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಅವಿಭಜಿತ ದಕ್ಷಿಣಕನ್ನಡ ಜಿಲ್ಲಾ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯದರ್ಶಿಯಾಗಿದ್ದರು.

ವೃತ್ತಿ:
* 1976 ರಲ್ಲಿ ಸುಳ್ಯ ಮತ್ತು ಪುತ್ತೂರು ನಗರಗಳಲ್ಲಿ ವಕೀಲ ವೃತ್ತಿ ಆರಂಭ.
* ಸದಾನಂದ ಗೌಡರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸರಕಾರಿ ಅಭಿಯೋಜಕರಾಗಿಯೂ ಅಲ್ಪ ಅವಧಿ ಕಾರ್ಯನಿರ್ವಹಿಸಿದ್ದರು.

ಕುಟುಂಬ, ಆಸಕ್ತಿ: ಉತ್ತಮ ಖೋ ಖೋ ಆಟಗಾರ.ಶಟ್ಲ್ ಬ್ಯಾಡ್ಮಿಂಟನ್, ಟೆನ್ನಿಸ್ ಅಂದ್ರೆ ಸದಾನಂದಗೌಡರಿಗೆ ಇಷ್ಟ. ಕರಾವಳಿ ಊಟ ತಿಂಡಿ, ಯಕ್ಷಗಾನ ಪಂಚಪ್ರಾಣ. ನಗುನಗುತಾ ನಲಿ ಏನೇ ಆಗಲಿ ಎಂಬುದು ಇರುವ ಧ್ಯೇಯವಾಕ್ಯ. 1981 ರಲ್ಲಿ ಡಾಟಿಯವರನ್ನು ವಿವಾಹವಾದ ಸದಾನಂದ ಗೌಡರ ಪುತ್ರ ಕಾರ್ತಿಕ್ ತಾಂತ್ರಿಕ ಶಿಕ್ಷಣ ಪೂರೈಸಿದ್ದಾರೆ.

ಸಂಪರ್ಕ ವಿಳಾಸ: II, 332/1, 'ವಾಸುಕಿ', ರೈಲ್ವೇ ಕ್ವಾಟ್ರಸ್ ರಸ್ತೆ, ಪಡೀಲ್, ಪುತ್ತೂರು– 574 201
ದೂರವಾಣಿ: (0824) 2448888(O),(08251)233249(R), 098681 80269
ಇಮೇಲ್ ವಿಳಾಸ: [email protected]

ಸಹಕಾರಿ ರಂಗ:
* ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾಗಿ, ಎಸ್.ಕೆ.ಎ.ಸಿ.ಎಂ. ಸೊಸೈಟಿಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
* ಸುಳ್ಯದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ
* ಮಂಡೆಕೋಲು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ
* ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
* ರಾಜ್ಯದ ಭೂ ಅಡಮಾನ ಬ್ಯಾಂಕ್‌ಗಳ ಸಿಬಂಧಿ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+