ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದಾ ಹಸನ್ಮುಖಿ ಗೌಡರಿಗೆ ಒಲಿಯುವುದೆ ಜಾಕ್ ಪಾಟ್?

By Mahesh
|
Google Oneindia Kannada News

DV Sadananda Gowda profile
ಶ್ರಮಿಕ ವರ್ಗದ ನ್ಯಾಯೋಚಿತ ಹೋರಾಟಗಳಿಗೆ ನೇತೃತ್ವ ನೀಡುವ ಮೂಲಕ ಕಾರ್ಮಿಕ ವರ್ಗದ ಅಚ್ಚುಮೆಚ್ಚಿನ ನೇತಾರರಾಗಿ ಸದಾನಂದ ಗೌಡರು ಗುರುತಿಸಿಕೊಂಡಿದ್ದಾರೆ.

* ಭಾರತೀಯ ಮಜ್ದೂರ್ ಸಂಘದ ಪುತ್ತೂರು ವಿಭಾಗದ ಪ್ರಧಾನ ಕಾರ್ಯದರ್ಶಿ
* ಸುಳ್ಯ ತಾಲೂಕು ಬೀಡಿ ಮಜ್ದೂರರ ಸಂಘದ ಅಧ್ಯಕ್ಷ 1977 ರಿಂದ 1982
* ಸುಳ್ಯ ತಾಲೂಕು ಆಟೋ ರಿಕ್ಷಾ ಮಾಲಕರ ಮತ್ತು ಚಾಲಕರ ಸಂಘದ ಅಧ್ಯಕ್ಷ
* ಕರ್ನಾಟಕ ಕೈಗಾರಿಕೆಗಳ ಸಿಬ್ಬಂದಿ ಯೂನಿಯನ್ ಅಧ್ಯಕ್ಷ

ರಾಜಕಾರಣ:
* ಜನಸಂಘದ ಪ್ರಾಥಮಿಕ ಸದಸ್ಯನಾಗಿ ರಾಜಕಾರಣಕ್ಕೆ ಧುಮುಕಿದವರು.
* ಭಾರತೀಯ ಜನತಾ ಪಾರ್ಟಿಯ ಸುಳ್ಯ ಕ್ಷೇತ್ರ ಸಮಿತಿಯ ಅಧ್ಯಕ್ಷ
* ದಕ್ಷಿಣಕನ್ನಡ ಜಿಲ್ಲಾ ಬಿ.ಜೆ.ಪಿ. ಯುವ ಮೋರ್ಚಾದ ಅಧ್ಯಕ್ಷ
* ದ.ಕ. ಜಿಲ್ಲಾ ಜಿ.ಜೆ.ಪಿ. ಉಪಾಧ್ಯಕ್ಷ
* ಯುವ ಮೋರ್ಚಾದ ರಾಜ್ಯ ಸಮಿತಿಯ ಕಾರ್ಯದರ್ಶಿ
* ರಾಜ್ಯ ಬಿ.ಜೆ.ಪಿ. ಕಾರ್ಯದರ್ಶಿ, ರಾಷ್ಟ್ರೀಯ ಕಾರ್ಯದರ್ಶಿ
* 2006 ರಿಂದ ರಾಜ್ಯ ಬಿ.ಜೆ.ಪಿ.ಯ ಚುಕ್ಕಾಣಿ ಹಿಡಿದು 2008 ರಲ್ಲಿ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಪೂರ್ಣ ಪ್ರಮಾಣದ ಬಿ.ಜೆ.ಪಿ. ಸರ್ಕಾರವನ್ನು ಅಧಿಕಾರಕ್ಕೇರಿಸುವಲ್ಲಿ ಗಣನೀಯ ಪಾತ್ರ.

ಶಾಸಕನಾಗಿ:
* 1989 ರಲ್ಲಿ ಪ್ರಪ್ರಥಮ ಬಾರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ
* ಸದಾನಂದ ಗೌಡರು 1994 ರಲ್ಲಿ ಮೊತ್ತ ಮೊದಲ ಬಾರಿಗೆ ಶಾಸಕನಾಗಿ ಚುನಾಯಿತರಾಗಿ 1999ರಲ್ಲಿ ಪುನರಾಯ್ಕೆಯಾದರು.
* ಶಾಸಕನಾಗಿ ದ್ವಿತೀಯ ಅವಧಿಯಲ್ಲಿ ರಾಜ್ಯ ವಿಧಾನಸಭೆಯಲ್ಲಿ ಬಿ.ಜೆ.ಪಿ. ಶಾಸಕಾಂಗ ಪಕ್ಷದ ಉಪನಾಯಕನಾಗಿ ಆಯ್ಕೆ

* ಮಹಿಳಾ ದೌರ್ಜನ್ಯ ತಡೆಯ ಮೇಲಣ ಕರಡು ಮಸೂದೆ ರೂಪಿಸುವ ಸಮಿತಿಯ ಸದಸ್ಯ
* ಶಕ್ತಿ, ಇಂಧನ ಮತ್ತು ವಿದ್ಯುಚ್ಛಕ್ತಿಯ ಕುರಿತಾದ ವಿಧಾನಸಭೆಯ ಸ್ಪೀಕರ್‌ರವರಿಂದ ರಚಿಸಲ್ಪಟ್ಟ ಸಮಿತಿಯ ಸದಸ್ಯ 2001-02
* ರಾಜ್ಯ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ರಂಗದ ಉದ್ದಿಮೆಗಳ ಸಮಿತಿಯ ಸದಸ್ಯ 2002-03
* ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸದಸ್ಯನಾಗಿ ನಾಮನಿರ್ದೇಶನ 2003-04
* ಪುತ್ತೂರು ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷನಾಗಿ ಹತ್ತು ವರ್ಷಗಳಲ್ಲಿ ಸುಮಾರು 3500ಕ್ಕೂ ಮಿಕ್ಕಿದ ಆಶ್ರಯ ಮನೆಗಳ ವಿತರಣೆ ಮಾಡಿರುತ್ತಾರೆ.

* ಪುತ್ತೂರು ತಾಲೂಕಿನ ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷನಾಗಿ ಹತ್ತು ವರ್ಷಗಳಲ್ಲಿ 1700 ಕಡತಗಳನ್ನು ವಿಲೇವಾರಿ ಮಾಡಿ ಬಡ ಅರ್ಹ ಜನತೆಗೆ ಭೂಮಿಯನ್ನು ಸಕ್ರಮೀಕರಣಗೊಳಿಸಿದ್ದಾರೆ.
* ಪುತ್ತೂರು ತಾಲೂಕು ಪಂಚಾಯತ್ ಉತ್ತಮ ಆಡಳಿತಕ್ಕಾಗಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆಯಲು ತನ್ನ ಶಾಸಕತ್ವದ ಅವಧಿಯಲ್ಲಿ ಯೋಗ್ಯ ಹಾಗೂ ಸಮರ್ಥ ಮಾರ್ಗದರ್ಶನ ಮಾಡಿರುತ್ತಾರೆ.
* ಅಡಿಕೆಗೆ ಬೆಂಬಲ ಬೆಲೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡು ಚಿಂತಾಕ್ರಾಂತರಾಗಿದ್ದ ನಾಡಿನ ಅಡಿಕೆ ಬೆಳೆಗಾರರಿಗೆ ದಕ್ಷ ನೇತೃತ್ವ ನೀಡಿದ್ದಾರೆ.

ಸಂಸದನಾಗಿ:
* 2004 ರಲ್ಲಿ ಅವರು ಮಂಗಳೂರು ಸಂಸದರಾಗಿ ಆಯ್ಕೆಯಾದರು.
* ಸಂಸದರಾದ ಬಳಿಕ ಇವರನ್ನು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯದರ್ಶಿಯನ್ನಾಗಿ ನೇಮಕ.
* ಗೋವಾ ರಾಜ್ಯದ ಪಕ್ಷ ವ್ಯವಹಾರಗಳ ಉಸ್ತುವಾರಿ ವಹಿಸಿದಾಗ ಸದಾನಂದ ಗೌಡರು ರಾಷ್ಟ್ರ ಮಟ್ಟದಲ್ಲಿಯೂ ಗುರುತಿಸಲ್ಪಟ್ಟರು.
* ಭಾರತ ಸರಕಾರ ಸದಾನಂದ ಗೌಡರನ್ನು 2005ರಲ್ಲಿ ಕೇಂದ್ರ ಕಾಫಿ ಬೋರ್ಡಿನ ನಿರ್ದೇಶಕರಾಗಿ ನಾಮನಿರ್ದೇಶನ ಮಾಡಿತು.
* ಭಾರತೀಯ ಜನತಾ ಪಾರ್ಟಿಯ ವರಿಷ್ಠರು ಸದಾನಂದ ಗೌಡರ ಕೈಗೆ 2006 ರಾಜ್ಯ ಬಿ.ಜೆ.ಪಿ. ಘಟಕದ ಚುಕ್ಕಾಣಿಯನ್ನು ನೀಡಿದರು.
* 2007 ರಲ್ಲಿ ಇವರು ರಾಜ್ಯ ಬಿ.ಜೆ.ಪಿ. ಅಧ್ಯಕ್ಷರಾಗಿ ಪುರಾಯ್ಕೆಯಾದರು.
* 2008ರಲ್ಲಿ ರಾಜ್ಯದಲ್ಲಿ ಮೊತ್ತಮೊದಲ ಪೂರ್ಣ ಪ್ರಮಾಣದ ಬಿ.ಜೆ.ಪಿ. ಸರ್ಕಾರವನ್ನು ಅಧಿಕಾರಕ್ಕೇರಿಸುವಲ್ಲಿ ಹೊಣೆಯರಿತು ಕೆಲಸ ಮಾಡಿ ಪಕ್ಷದ ಹಿರಿಯರ ಮೆಚ್ಚುಗೆಗೆ ಪಾತ್ರರಾದರು.
* ಈ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ.ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅತ್ಯಧಿಕ ಮತಗಳ ಅಂತರದಿಂದ ಗೆದ್ದು ಬಂದು ಕರಾವಳಿ ಮತ್ತು ಮಲೆನಾಡಿನ ಜನರ ಸೇವೆಗೆ ಕಟಿಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ.

* ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಮಂಜೂರು ಮಾಡಿಸಿದರು.
* ಇಂದಿರಾಗಾಂಧಿಯವರ ಕಾಲದಿಂದಲೇ ನನೆಗುದಿಗೆ ಬಿದ್ದಿದ್ದ ಕಡೂರು-ಚಿಕ್ಕಮಗಳೂರು-ಸಕಲೇಶಪುರ ರೈಲ್ವೇ ಲೈನಿನ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸಿದರು.
* ಕರಾವಳಿಯ ಜೀವನಾಡಿ ರಾಷ್ಟ್ರೀಯ ಹೆದ್ದಾರಿ 17 ರ ಚತುಷ್ಪಥೀಕರಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಿದರು.
* ಮೀನುಗಾರಿಕೆಗೆ ಕೇಂದ್ರದಿಂದ ಮಂಜೂರಾಗಲು ಬಾಕಿಯಿದ್ದ ಪ್ರೋತ್ಸಾಹಕ ಕ್ರಮಗಳನ್ನು ತ್ವರಿತ ಮಂಜೂರಾತಿ.
* ಬಿಎಸ್ ಯಡಿಯೂರಪ್ಪ ಅವರ ಸರ್ಕಾರ ಪತನ ನಂತರ ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದಾರೆ.

English summary
DV Sadananda Gowda hails from Mandekolu village in Sulia Taluk of Dakshina Kannada. Village boy turns a politician, a profile and brief history on his career as a BJP leader. After M Veerappa Moily, who ruled Karnataka from 1992 to 1994, Dakshina district is set to welcome second CM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X