ಬಿಜೆಪಿ ಹೈಕಮಾಂಡ್ ಪಾಪಕ್ಕೆ ಬಲಿಯಾದ ಯಡಿಯೂರಪ್ಪ

'ಲೋಕಾಯುಕ್ತ ವರದಿ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊರಬೇಕಾಗಿರುವುದು ಬಿಜೆಪಿ ಹೈಕಮಾಂಡ್. ಅಕ್ರಮ ಗಣಿಗಾರಿಕೆ ಹೆಸರಲ್ಲಿ ನಡೆದಿರುವ ಎಲ್ಲ ಅಕ್ರಮಗಳ ನಿಜವಾದ ಫಲಾನುಭವಿಗಳು ಆ ಪಕ್ಷದ ವರಿಷ್ಠರು' ಎಂದು ಹರಿಪ್ರಸಾದ್ ಗುಡುಗಿದ್ದಾರೆ.
'ಬಿಜೆಪಿ ಹೈಕಮಾಂಡ್ ಕೂಡಾ ಅಕ್ರಮ ಗಣಿಗಾರಿಕೆ ಫಲಾನುಭವಿಗಳಾಗಿರುವುದರಿಂದ ಭ್ರಷ್ಟಾಚಾರದ ವಿರುದ್ಧ ಮಾತನಾಡುವುದನ್ನು ತಕ್ಷಣ ನಿಲ್ಲಿಸಬೇಕು' ಎಂದೂ ಅವರು ಸಲಹೆ ಮಾಡಿದರು.
'ಎರಡು ವರ್ಷಗಳ ಹಿಂದೆಯೇ ಯಡಿಯೂರಪ್ಪ ಅಕ್ರಮ ಗಣಿಗಾರಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಅವ್ಯವಹಾರದಲ್ಲಿ ಭಾಗಿಯಾಗಿದ್ದ ಭ್ರಷ್ಟ ಅಧಿಕಾರಿಗಳನ್ನು ಬಳ್ಳಾರಿ ಜಿಲ್ಲೆಯಿಂದ ವರ್ಗ ಮಾಡಿದ್ದರು. ಆದರೆ, ಬಳ್ಳಾರಿ ರೆಡ್ಡಿಗಳು ತಿರುಗಿ ಬಿದ್ದರು. ಬಿಜೆಪಿ ಹೈಕಮಾಂಡ್ ಗಣಿ ಧಣಿಗಳ ಪರ ನಿಂತಿತು. ಮುಖ್ಯಮಂತ್ರಿ ಕೈ ಕಟ್ಟಿಹಾಕಿತು' ಎಂದು ರಾಜ್ಯಸಭೆ ಮಾಜಿ ಸದಸ್ಯರೂ ಆದ ಹರಿಪ್ರಸಾದ್ ವ್ಯಾಖ್ಯಾನ ಮಾಡಿದ್ದಾರೆ.












Click it and Unblock the Notifications