215 ಕೋಟಿ ತೆರಿಗೆ ವಂಚಿಸಿದ ಬಳ್ಳಾರಿ ಗಣಿಧಣಿಗಳು

ಆದರೆ ಈ ಹಣ ಸ್ವಿಸ್ ಬ್ಯಾಂಕ್ ಅಥವಾ ತೆರಿಗೆ ವಂಚಕರಿಗೆ ಧಾರಾಳ ಅವಕಾಶವಿರುವ ಬ್ರಿಟಿಷ್ ವರ್ಜಿನ್ ಐಲ್ಯಾಂಡುಗಳಲ್ಲಿ ಹೂಡಿಕೆಯಾಗಿರುವ ಸಂದೇಶ ನಿಜವಾಗುತ್ತಿದೆ. ಬಳ್ಳಾರಿ ರೆಡ್ಡಿ ಸೋದರರು ಹೊಸಪೇಟೆಯ ವಿಕಾಸ್ ಸೌಹಾರ್ದ ಬ್ಯಾಂಕ್ ಅನ್ನು ಕರ್ನಾಟಕದ ಸ್ವಿಸ್ ಬ್ಯಾಂಕ್ ಮಾಡಿಕೊಂಡಿದ್ದಾರೆ. ಜೊತೆಗೆ ವಿದೇಶಿ ಬ್ಯಾಂಕುಗಳಲ್ಲಿ ಗಣಿಧಣಿಗಳ ಹಣ ಹೂಡಿಕೆ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿದೆ.
ತೆರಿಗೆ ವಂಚನೆ: ಲೋಕಾಯುಕ್ತ ವರದಿ ಪ್ರಕಾರ, ಬಳ್ಳಾರಿ ರೆಡ್ಡಿ ಸೋದರರು ಮತ್ತು ಶ್ರೀರಾಮುಲು ತಮ್ಮ ಅಕ್ರಮ ಗಣಿಗಾರಿಕೆ ಮೂಲಕ 215.12 ಕೋಟಿ ರೂಪಾಯಿ ತೆರಿಗೆ ವಂಚಿಸಿದ್ದಾರೆ.
ಓಬಳಾಪುರಂ ಗಣಿ ಕಂಪೆನಿ ಜತೆಗೆ ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ರೆಡ್ಡಿ ಸೋದರರು ರಾಜ್ಯದಲ್ಲಿ ಗಣಿ ಕಂಪನಿ ನಡೆಸುತ್ತಿದ್ದಾರೆ. ಡಾ ಯು ವಿ ಸಿಂಗ್ ನೇತೃತ್ವದ ತಂಡ ನೀಡಿರುವ ವರದಿಯಂತೆ ಚೀನಾ ಹಾಗೂ ಸಿಂಗಾಪುರಕ್ಕೆ ನಿರಂತರವಾಗಿ ಅದಿರು ರಫ್ತು ಮಾಡಲಾಗಿದೆ.
ಓಬಳಾಪುರಂ ಗಣಿ ಈ ಬಗ್ಗೆ ದಾಖಲೆಗಳು ಬರಬೇಕಾದ ರಾಯಧನ ನಯಾಪೈಸವೂ ಬಂದಿಲ್ಲ. ಜಿಎಲ್‌ಎ 2007ರ ನವಂಬರ್ 27ರಂದು ಸ್ಥಾಪನೆಗೊಂಡಿದೆ. ಇದರ ನಿರ್ದೇಶಕರ ಮಂಡಳಿಯಲ್ಲಿ
ಜನಾರ್ದನ ರೆಡ್ಡಿಯೂ ಇದ್ದಾರೆ. ಜಿಎಲ್‌ಎ ಕಂಪೆನಿಯು ಸಿಂಗಾಪುರ, ದುಬೈ ಮತ್ತು ಬ್ರಿಟಿಷ್ ವರ್ಜಿನ್ ಐಲ್ಯಾಂಡುಗಳಲ್ಲಿ ತನ್ನ ವಹಿವಾಟು ನಡೆಸುತ್ತ ಬಂದಿದೆ.












Click it and Unblock the Notifications