ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೊಬೆಲ್ ಆಕಾಂಕ್ಷಿ ಯಡಿಯೂರಪ್ಪ ರಾಜಿನಾಮೆಯ ಷರತ್ತು

By Srinath
|
Google Oneindia Kannada News

B S Yeddyurappa
ಬೆಂಗಳೂರು, ಜುಲೈ 29: ರಾಜ್ಯದಲ್ಲಿ ಗಣಿಗಾರಿಕೆಯನ್ನು ತಹಬಂದಿಗೆ ತಂದ ತಮಗೆ ನೊಬೆಲ್ ಪ್ರಶಸ್ತಿಯನ್ನು ಕೊಡುವುದನ್ನು ಬಿಟ್ಟು ಇದೇನಿದು ಈ ರೀತಿ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದೀರಿ ಎಂದು ಯಡಿಯೂರಪ್ಪ ಇತ್ತೀಚೆಗೆ ಗೋಳಾಡಿದ್ದರು. ಅವರೀಗ ರಾಜಿನಾಮೆ ಹಂತಕ್ಕೆ ಬಂದಿದ್ದು, ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ. ಅವು ಹೀಗಿವೆ:

ಅ. ರಾಜಿನಾಮೆ ನೀಡುವುದಕ್ಕೆ ಅಭ್ಯಂತರವಿಲ್ಲ. ಆದರೆ ಈ ತಿಂಗಳ 30ರವರೆಗೆ ಅಂದರೆ, ಅಮವಾಸ್ಯೆ ಕಳೆಯುವವರೆಗೆ ರಾಜಿನಾಮೆ ನೀಡುವುದಿಲ್ಲ. ಅಂದರೆ ಇನ್ನೂ ನಾಲ್ಕು ದಿನ ಕಾಲಾವಕಾಶ ನೀಡಿ.

ಆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನನಗೆ ನೀಡಬೇಕು. ನಾನು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟಿಸುತ್ತೇನೆ. ಮುಂದಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ತಂದುಕೊಡುತ್ತೇನೆ.

ಇ. ನಾನು ಸೂಚಿಸುವವರನ್ನು ಮುಖ್ಯಮಂತ್ರಿಯಾಗಿಸಬೇಕು. ಇತರರಿಗೂ ಸಮ್ಮತವಾಗುವ ಹೆಸರನ್ನೇ ಸೂಚಿಸುತ್ತೇನೆ.

ಈ. ನನ್ನ ಯಾವ ಬೇಡಿಕೆಯನ್ನೂ ಈಡೇರಿಸದಿದ್ದರೆ ನನ್ನ ಬೆಂಬಲಿಗ ಸಚಿವರು ಹಾಗೂ ಶಾಸಕರ ಸಲಹೆಯಂತೆ ನಾನು ಮುಂದಿನ ಯಾವುದೇ ರೀತಿಯ ನಿರ್ಧಾರ ಕೈಗೊಳ್ಳಬಹುದು.

English summary
As Bjp High command mounts pressure on BSY, Yeddyurappa puts forth some conditions for his resignation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X