ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿ ಅಕ್ರಮ: ಐಎಎಸ್, ಐಪಿಎಸ್ ಅಧಿಕಾರಿಗಳ ಗತಿಯೇನು?

By Mahesh
|
Google Oneindia Kannada News

Lokayukta report on mining
ಬೆಂಗಳೂರು ಜು 29: ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳು ಮಾತ್ರವಲ್ಲದೆ ಆವರಿಗೆ ಸಹಕರಿಸಿದ 787 ಅಧಿಕಾರಿಗಳನ್ನು ವರದಿಯಲ್ಲಿ ಲೋಕಾಯುಕ್ತರು ಹೆಸರಿಸಿದ್ದಾರೆ.

2008ರ ಮಧ್ಯಂತರ ವರದಿಯಲ್ಲಿ ಕೇವಲ 8 ಐಎಎಸ್ ಹಾಗೂ 1 ಐಪಿಎಸ್ ಅಧಿಕಾರು ಮಾತ್ರ ಅಕ್ರಮದಲ್ಲಿ ಭಾಗಿಗಳಾಗಿದ್ದರು. ಆದರೆ ಈ ಸಂಖ್ಯೆ ಈಗ ಗಣನೀಯವಾಗಿ ಹೆಚ್ಚಾಗಿದೆ.

ಲೋಕಾಯುಕ್ತರ ಎರದನೇ ವರದಿಯಂತೆ ಪ್ರಮುಖವಾದ16 ಮಂದಿ ಐಎಎಸ್‌, 8 ಮಂದಿ ಐಪಿಎಸ್‌ ಹಾಗೂ 8 ಮಂದಿ ಐಎಫ್ಎಸ್‌ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದರ ಲೋಕಾಯುಕ್ತ ಇಲಾಖೆಯಲ್ಲೇ ಕೆಲಸ ಮಾಡುತ್ತಿದ್ದ ಡಿವೈಎಸ್‌ಪಿ ಹಾಗೂ ಎಸ್‌ಪಿ ದರ್ಜೆ ಅಧಿಕಾರಿಗಳು ಕೂಡಾ ಆರೋಪಿಗಳಾಗಿದ್ದಾರೆ.

ಅಕ್ರಮದಲ್ಲಿ ತೊಡಗಿದ್ದ ಲೋಕಾಯುಕ್ತ ಇಲಾಖೆ ಅಧಿಕಾರಿಗಳ ಹೆಸರನ್ನು ಲೋಕಾಯುಕ್ತರು ತಮ್ಮ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಲು ಇಚ್ಚಿಸಿಲ್ಲ. ವರದಿಯಲ್ಲೂ ಸ್ಪಷ್ಟವಾಗಿ ಪ್ರಸ್ತಾಪಿಸಿಲ್ಲ. ಆದರೆ, ಅಕ್ರಮದಲ್ಲಿ ಭಾಗಿಯಾಗಿರುವ ಐಎಎಸ್‌, ಐಪಿಎಸ್‌ ಮತ್ತು ಐಎಫ್ಎಸ್‌ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ.

ಈ ಅಧಿಕಾರ ವಿರುದ್ಧ ಕ್ರಮ ಕೈಗೊಳ್ಳಲು ಲೋಕಾಯುಕ್ತರು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿರುವ ಬಗ್ಗೆ ವರದಿಯಲ್ಲಿ ಉಲ್ಲೇಖವಿಲ್ಲ. ಆದರೆ, ಕೇಂದ್ರ ಸರ್ಕಾರ ನೇರವಾಗಿ ಕಾನೂನು ಕ್ರಮ ಜರುಗಿಸುವ ಅವಕಾಶವಿರುತ್ತದೆ.

ಪ್ರಮುಖವಾಗಿ ಮೈಸೂರು ಮಿನರಲ್ಸ್‌ ಲಿಮಿಟೆಡ್‌ನ‌ಲ್ಲಿ ಕರ್ತವ್ಯ ನಿರ್ವಹಿಸಿದ ಐಎಎಸ್‌ ಅಧಿಕಾರಿಗಳಾದ ವಿ. ಉಮೇಶ್‌, ಐ.ಆರ್‌. ಪೆರುಮಾಳ್‌, ಡಿ.ಎಸ್‌. ಅಶ್ವಥ್‌, ಶಿವಪ್ಪ, ಮಹೇಂದ್ರ ಜೈನ್‌ , ಕೆ.ಎಸ್‌. ಮಂಜುನಾಥ್‌, ಎನ್‌. ಬಸಪ್ಪ ರೆಡ್ಡಿ, ನಿವೃತ್ತ ಅಧಿಕಾರಿ ಗಂಗಾರಾಂ ಬಡೇರಿಯಾ, ಸೇರಿದಂತೆ 16 ಮಂದಿ ಐಎಎಸ್‌ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಉಳಿದಂತೆ ವಿಜಯನಗರ ಮಿನಿರಲ್ಸ್ ಲಿ.ತಿಪ್ಪಗೊಂಡನಹಳ್ಳಿ ಅದಿರು ಸಂಸ್ಥೆ ಸೇರಿದ ಅಧಿಕಾರಿಗಳು ಸೇರಿದ್ದಾರೆ.

ಈ ಅಧಿಕಾರಿಗಳಿಗೆ ಸೆಲ್ಯೂಟ್ :ಕರ್ನಾಟಕ ಕಾನೂನು ಇಲಾಖೆ ಮಾಜಿ ಕಾರ್ಯದರ್ಶಿ ಕೆಆರ್ ಚಾಮಯ್ಯ, ಅರಣ್ಯಾಧಿಕಾರಿ, ಕೆರೆ ಅಭಿವೃದ್ಧಿ ಪ್ರಾಧಿಕಾರ ಸಂರಕ್ಷಕರು ಯು.ವಿ.ಸಿಂಗ್, ಅರಣ್ಯಾಧಿಕಾರಿಗಳು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ,

ಬಿಶ್ವಜೀತ್ ಮಿಶ್ರಾ, ಕೆಸ್ವಾನ್, ಇ ಆಡಳಿತಾಧಿಕಾರಿ, ಐಎಎಫ್ ಎಸ್ ವಿಪಿನ್ ಸಿಂಗ್, ಅರಣ್ಯಾಧಿಕಾರಿ, ಕೆರೆ ಅಭಿವೃದ್ಧಿ ಪ್ರಾಧಿಕಾರ ಸಂರಕ್ಷಕರು ಉದಯಕುಮಾರ್, ಲೋಕಾಯುಕ್ತ್ರ ಮಧುಕರ್ ಶೆಟ್ಟಿ ಸೇರಿದಂತೆ ಅನೇಕ ಅಧಿಕಾರಿಗಳು ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ಸಂತೋಷ್ ಹೆಗ್ಡೆ ವರದಿ ತಯಾರಿಕೆಯಲ್ಲಿ ಸಹಕರಿಸಿದ ಸಮರ್ಥ ಅಧಿಕಾರಿಗಳಾಗಿದ್ದಾರೆ.

English summary
Apart from politicians Lokayukta Report on Illegal Mining also inducted over 787 IAS, IPS, IFS Officers. Number of accused officers increased compared to interim report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X