ನಾಯಕರೆಲ್ಲ ಅಶೋಕದಲ್ಲಿ, ಚಕ್ರವರ್ತಿ ಮಾತ್ರ ಮನೆಯಲ್ಲಿ

ಯಡಿಯೂರಪ್ಪನವರನ್ನು ಕೆಳಗಿಳಿಸಲೇಬೇಕೆಂಬ ಕಠಿಣ ನಿರ್ಧಾರಕ್ಕೆ ಬಂದಿರುವ ಬಿಜೆಪಿ ವರಿಷ್ಠರಾದ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ವೆಂಕಯ್ಯ ನಾಯ್ಡು, ಧರ್ಮೇಂದ್ರ ಪ್ರಧಾನ್ ಬಿಜೆಪಿ ಶಾಸಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
ಅಶೋಕ್ ಹೊಟೇಲ್ ನಲ್ಲಿ ಕೆಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್, ಅನಂತ್ ಕುಮಾರ್, ಆರ್ ಅಶೋಕ್, ವಿಎಸ್ ಆಚಾರ್ಯ, ಸುರೇಶ್ ಕುಮಾರ್ ಮುಂತಾದವರ ಜೊತೆ ವರಿಷ್ಠರು ಮಾತುಕತೆ ನಡೆಸುತ್ತಿದ್ದಾರೆ. ಯಡಿಯೂರಪ್ಪ ಮಾತ್ರ ಕರೆದರೆ ಮಾತ್ರ ಬರುತ್ತೇನೆ ಎಂಬ ಧೋರಣೆ ತಳೆದಿದ್ದಾರೆ.
ಯಡಿಯೂರಪ್ಪ ಭ್ರಷ್ಟಾಚಾರದಲ್ಲಿ ತೊಡಗಿಲ್ಲ, ಅವರು ನಿರಪರಾಧಿ, ಅವರೇ ನಮ್ಮ ನಾಯಕ ಎಂಬೆಲ್ಲ ಹೇಳಿಕೆಗಳನ್ನು ಬಹಿರಂಗವಾಗಿ ನೀಡುತ್ತಿರುವ ನಾಯಕರ ಮೇಲೆ ಬಿಜೆಪಿ ವರಿಷ್ಠರು ಕೆಂಡಾಮಂಡಲವಾಗಿದ್ದಾರೆ. ಕಗ್ಗಂಟು ಬಿಡಿಸುವವರೆಗೆ ಯಾರೂ ಯಾವರೀತಿಯ ಹೇಳಿಕೆಗಳನ್ನೂ ನೀಡಬಾರದು ಎಂದು ಆದೇಶಿಸಿದೆ.
ಇಷ್ಟೆಲ್ಲದರ ನಡುವೆ, ಹಿಟ್ ವಿಕೆಟ್ ಆಗಿದ್ದರೂ ತಾನೇ ಬ್ಯಾಟಿಂಗ್ ಮಾಡಬೇಕು, ಇಲ್ಲದಿದ್ದರೆ ಶೋಭಾಗೆ ಮಾತ್ರ ಬ್ಯಾಟಿಂಗ್ ಮಾಡಲು ಅವಕಾಶ ನೀಡಿ ಎಂದು ಯಡಿಯೂರಪ್ಪ ಕ್ಯಾತೆ ತೆಗೆದಿದ್ದಾರೆ. ಮೈದಾನಕ್ಕೆ ಇಳಿದಿರುವ ಅಂಪೈರ್ ಗಳು ಏನು ನಿರ್ಣಯ ನೀಡುತ್ತಾರೋ?












Click it and Unblock the Notifications