ಬಿಎಸ್ಎನ್ಎಲ್ ವೆಬ್ ಸೈಟ್ ಗೆ ಪಾಕ್ ಕಳ್ಳರ ಕನ್ನ
ಬೆಂಗಳೂರು
ಜು 28 : ಪಾಕಿಸ್ತಾನ ಮೂಲದ ಸೈಬರ್ ಆರ್ಮಿ ತನ್ನ ಕೈಚಳಕವನ್ನು ಮತ್ತೆ ತೋರಿದ್ದು ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿ(ಬಿಎಸ್ ಎನ್ ಎಲ್) ವೆಬ್ ಸೈಟ್ ಅನ್ನು ಹ್ಯಾಕ್ ಮಾಡಿದೆ.ನಿಮ್ಮ ಬಿಎಸ್ಸೆನ್ನೆಲ್ ಖಾತೆಯುಳ್ಳ ಗ್ರಾಹಕರು ತಕ್ಷಣ ತಮ್ಮ ಖಾತೆಯನ್ನು ರಕ್ಷಿಸಿಕೊಳ್ಳುವುದು ಒಳಿತು. id="toptextpromo"> ಹ್ಯಾಕರ್ ನ್ಯೂಸ್ ಪ್ರಕಟಿಸಿರುವಂತೆ ಸುಮಾರು 10,000 ಬಿಎಸ್ ಎನ್ ಎಲ್ ಬಳಕೆದಾರರ ಖಾಸಗಿ ವಿವರಗಳನ್ನು ಪಾಕಿಸ್ತಾನ ಸೈಬರ್ ಆರ್ಮಿ ದೋಚಿದ್ದಾರೆ. ಬಳಕೆ ದಾರರ ಹೆಸರು, ಇಮೇಲ್ ವಿಳಾಸ, ದೂರವಾಣಿ ಸಂಖ್ಯೆ, ಮನೆವಿಳಾಸ ಎಲ್ಲವನ್ನು ಹ್ಯಾಕರ್ ಗಳು ಕದ್ದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಿಎಸ್
ಎನ್ ಎಲ್ ಸಂಸ್ಥೆಯ ಆಂತರಿಕ (Virtual Private Network)VPNಗೂ ಕನ್ನ ಹಾಕಿರುವ ಸೈಬರ್ ಅತಿಕ್ರಮಿಗಳು, ಹಲವು ತಾಂತ್ರಿಕ ಮಾಹಿತಿಯನ್ನು ಕದ್ದಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಈಗ ಎಲ್ಲಾ ಸುರಕ್ಷಿತವಾಗಿದೆ. ಬಳಕೆದಾರರು ಆತಂಕ ಪಡಬೇಕಾಗಿಲ್ಲ ಎಂದು ಬಿಎಸ್ ಎನ್ ಎಲ್ ಸಂಸ್ಥೆ ಪ್ರಕಟಿಸಿದೆ. ಕಳ್ಳರು ದೋಚಿರುವ ಮಾಹಿತಿ ಬಗ್ಗೆ ಮಾತ್ರ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಹಿಂದೆ ಇದೇ ಗುಂಪು ಸಿಬಿಐ ವೆಬ್ ತಾಣಕ್ಕೂ ಕನ್ನ ಹಾಕಿತ್ತು.











Click it and Unblock the Notifications