ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಮ್ಮಪ್ಪನ ಅನುಗ್ರಹಕ್ಕೆ ಟಿಸಿಎಸ್‌, ವಿಪ್ರೊ ಪೈಪೋಟಿ

By Srinath
|
Google Oneindia Kannada News

TCS- Wipro fighting for divine blessings at Tirupati,
ಹೈದರಾಬಾದ್‌, ಜುಲೈ 22: ತಿರುಪತಿ ದೇವಸ್ಥಾನದ 'ಶ್ರೀ ಸೇವಾ ಯೋಜನೆ'ಗೆ ಸಂಬಂಧಿಸಿದಂತೆ ಅತ್ಯಾಧುನಿಕ ಸಾಫ್ಟ್ ವೇರ್ ವ್ಯವಸ್ಥೆ ರಚಿಸಿಕೊಡಲು ಟಿಸಿಎಸ್‌ ಮತ್ತು ವಿಪ್ರೊ ತಹತಹಿಸುತ್ತಿವೆ.

ಪ್ರಸ್ತುತ ಟಿಟಿಡಿ ನಾಲ್ಕು ಇ-ಸರ್ವೀಸ್‌ಗಳನ್ನು ಹೊಂದಿದೆ. ಇದರಲ್ಲಿ ಇ- ಸೇವಾ, ಇ- ವಾಸ್ತವ್ಯ, ಇ- ಸುದರ್ಶನಂ ಮತ್ತು ಇ- ಹುಂಡಿ ಕೂಡ ಸೇರಿದೆ. ಶ್ರೀ ಸೇವಾ ಯೋಜನೆಯು ಕೇಶ ಮುಂಡನ, ಲಾಡು ಪ್ರಸಾದ ವಿತರಣೆ ಮೊದಲಾದ ಅಂಶಗಳನ್ನು ಹೊಂದಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

'ದೇವಸ್ಥಾನದಲ್ಲಿ ಸುಮಾರು 48 ವಿಭಿನ್ನ ವಿಭಾಗಗಳಿದ್ದು, ಅವೆಲ್ಲವನ್ನೂ ಒಂದೇ ಸೂರಿನಡಿ ತಂದು ಭಕ್ತರಿಗೆ ಉತ್ತಮ ಸೇವಾ ಸೌಲಭ್ಯ ಕಲ್ಪಿಸುವ ಗುರಿ ತಮ್ಮದು. ಇದಕ್ಕೆ ಸುಮಾರು 30ರಿಂದ 35 ಕೋಟಿ ಖರ್ಚಾಗಲಿದೆ. ಮೊದಲ ಹಂತದಲ್ಲಿ, ಪ್ರತಿ ವರ್ಷ ಇದರ ನಿರ್ವಹಣೆಗಾಗಿ 12 ಕೋಟಿ ಖರ್ಚಾಗಲಿದೆ' ಎಂದು ಟಿಟಿಡಿ ಮೂಲಗಳು ತಿಳಿಸಿವೆ.

'ಅಂತಿಮ ಪಟ್ಟಿಯಲ್ಲಿ ಟಿಸಿಎಸ್‌, ವಿಪ್ರೊ ಮತ್ತು ಇನ್‌ಫಿನೆಟ್‌ ಕಂಪ್ಯೂಟರ್ ಸಲ್ಯೂಷನ್ಸ್‌ - ಹೀಗೆ ಮೂರು ಕಂಪನಿಗಳ ಹೆಸರುಗಳಿವೆ. ಮುಂದಿನ ಹಂತ ಆರ್ಥಿಕ ಅಂಶಗಳನ್ನು ಪರಿಗಣಿಸಿ ಟೆಂಡರ್ ಅನ್ನು ಅಂತಿಮಗೊಳಿಸುವುದು. ಡಿಸೆಂಬರ್ ಹೊತ್ತಿಗೆ ಯೋಜನೆಯನ್ನು ಅನುಷ್ಠಾನಕ್ಕೆ ತರುವುದು ನಮ್ಮ ಉದ್ದೇಶ' ಎಂದು ಟಿಟಿಡಿ ಮೂಲಗಳು ತಿಳಿಸಿವೆ.

ದೇವರ ದರ್ಶನದ ಟಿಕೆಟ್‌ಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದನ್ನು ತಪ್ಪಿಸಲು ಮತ್ತು ಭಕ್ತರಿಗೆ ವಾಸ್ತವ್ಯದ ತೊಂದರೆಯಾಗುವುದನ್ನು ತಪ್ಪಿಸಲು ಟಿಟಿಡಿ ಈಗಾಗಲೇ ಐಟಿ ತಂತ್ರಜ್ಞಾನ ವ್ಯವಸ್ಥೆಯನ್ನೇ ಅವಲಂಬಿಸುತ್ತಿದೆ. ಇದೀಗ ಅನುಷ್ಠಾನಗೊಳ್ಳಲಿರುವ ಶ್ರೀ ಸೇವಾ ಯೋಜನೆಯ ಮೊದಲ ಹಂತದ ಕಾರ್ಯ ಮುಗಿದ ಬಳಿಕ ಟಿಟಿಡಿ ಎರಡನೆ ಹಂತದ ಕಾರ್ಯ ಕೈಗೆತ್ತಿಕೊಳ್ಳಲಿದೆ.

ಸದ್ಯ ಪ್ರತಿನಿತ್ಯ ತಿರುಪತಿಗೆ ಸರಾಸರಿ 50 ಸಾವಿರ ಭಕ್ತರು ಭೇಟಿ ನೀಡುತ್ತಿದ್ದು, ಉತ್ಸವ ಮತ್ತು ವಿಶೇಷ ದಿನಗಳಲ್ಲಿ ಭಕ್ತರ ಸಂಖ್ಯೆ ಲಕ್ಷವನ್ನೂ ಮೀರುತ್ತಿದೆ.

English summary
TCS and Wipro are among three companies vying to bag the prestigious Sri Seva Project of the Tirumala Tirupati Devasthanam (TTD) to provide IT solutions that will help devotees. Currently TTD offers four main e-services such as e-seva, e-accommodation, e-sudarshanam and e-hundi to the devotees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X