ಮಧ್ಯಂತರ ಚುನಾವಣೆ ಗ್ಯಾರಂಟಿ ಅಂತು ಭವಿಷ್ಯವಾಣಿ

ಧಾರವಾಡದಲ್ಲಿ ಶ್ರೀಗಳು ಮಾಧ್ಯಮದರೊಂದಿಗೆ ಮಾತನಾಡುತ್ತಾ, ಯಡಿಯೂರಪ್ಪ ನಂತರ ಅಧಿಕಾರಕ್ಕೆ ಬರುವವರು ಬಹಳ ದಿನ ಉಳಿಯುವುದಿಲ್ಲ. ಫೆಬ್ರವರಿ ಬಳಿಕ ಮಧ್ಯಂತರ ಚುನಾವಣೆ ನಡೆಯಲಿದೆ ಎಂದಿದ್ದಾರೆ.
ರಾಜ್ಯ ಮತ್ತು ದೇಶದ ರಾಜಕಾರಣದಲ್ಲಿ 2012ರವರೆಗೂ ರಾಜಕೀಯ ಅಸ್ಥಿರತೆ ಕಾಡುತ್ತದೆ. ಏಕಪಕ್ಷದ ಅಧಿಕಾರ ಸಾಧ್ಯವಿಲ್ಲ. ಸಮ್ಮಿಶ್ರ ಸರ್ಕಾರ ಅಧಿಕಾರ ನಡೆಸಲಿದೆ. ನವೆಂಬರ್, ಡಿಸೆಂಬರ್ ವೇಳೆಗೆ ದೇಶದ ರಾಜಕಾರಣದಲಿ ಕೌತುಕ ಕಾದಿದ್ದು ವಿಪ್ಲವ ನಡೆಯಲಿದೆ.
ರಾಜ್ಯದಲ್ಲಿ ಉಗ್ರರ ಕಾಟ ಹೆಚ್ಚಾಗಲಿದೆ. ಸಮುದ್ರ ಮತ್ತು ನದಿ ತೀರದ ನಗರಗಳ ಮೇಲೆ ಉಗ್ರರು ದಾಳಿ ನಡೆಸಲಿದ್ದಾರೆ. ಭಾದ್ರಪದ ಹಾಗೂ ಶ್ರಾವಣ ಮಾಸದಲ್ಲಿ ಮಳೆ ಅಧಿಕವಾಗಿ ಜಲಪ್ರಳಯ ಸಂಭವಿಸಲಿದೆ ಎಂದು ಶ್ರೀಗಳು ಹೇಳಿ ಮೌನಕ್ಕೆ ಶರಣಾಗಿದ್ದಾರೆ. (ದಟ್ಸ್‌ಕನ್ನಡ ವಾರ್ತೆ)












Click it and Unblock the Notifications