ಯಡಿಯೂರಪ್ಪ ಕುರ್ಚಿ ಉಳಿಯುವುದು ಕಷ್ಟ; ಕೋಡಿಮಠ
ಬೆಂಗಳೂರು,
ಜು.28: ರಾಜ್ಯದಲ್ಲಿ ಆಗಾಗ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾದಾಗ ಕೋಡಿಮಠದಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭವಿಷ್ಯ ನುಡಿಯುವುದು ಸಾಮಾನ್ಯ. ಈ ಬಾರಿ ಅವರ ಭವಿಷ್ಯ ಬಹುತೇಕ ನಿಜವಾಗುವಂತಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಧಿಕಾರ ಉಳಿಸಿಕೊಳ್ಳುವುದು ಕಷ್ಟ ಎಂದಿದ್ದಾರೆ ಸ್ವಾಮೀಜಿಗಳು. id="toptextpromo"> ಕರ್ನಾಟಕ ಸರ್ಕಾರಕ್ಕೆ ಕಂಟಕವಿದೆ ಎಂದು ಕೋಡಿಮಠದ ಸ್ವಾಮೀಜಿ ಸ್ಪಷ್ಟವಾಗಿ ಭವಿಷ್ಯ ನುಡಿದಿದ್ದಾರೆ.ಸಚಿವ ವಿ ಸೋಮಣ್ಣ ಕೋಡಿಮಠದ ಸ್ವಾಮೀಜಿಯನ್ನು ಬುಧವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಉಗ್ರರ ಕಾಟವಿದೆ ಎಂದೂ ಎಚ್ಚರಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಶ್ರಾವಣ ಮಾಸದ ನಂತರ ರಾಜ್ಯದಲ್ಲಿ ಜನಪ್ರಳಯ ಆಗಲಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಲಿದೆ ಎಂದು ಸ್ವಾಮೀಜಿ ಹೇಳಿದ್ದಾರೆ. ಸ್ವಾಮೀಜಿಗಳು ರಾಜಕೀಯ ಭವಿಷ್ಯ ನುಡಿದಾಗಲೆಲ್ಲಾ ವಿಧಾನಸೌಧದ ಮೊಗಸಾಲೆಯಲ್ಲಿ ಏನೋ ಒಂಥರಾ ಮಂಕು ಕವಿದ ಉದಾಹರಣೆಗಳು ಸಾಕಷ್ಟು ಇವೆ. (ದಟ್ಸ್‌ಕನ್ನಡ ವಾರ್ತೆ)











Click it and Unblock the Notifications