ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತಿಯ ನಿವೃತ್ತಿಯನ್ನೇ ಕಾಯುತ್ತಿರುವ ಹೆಂಡತಿ ಮತ್ತು ಸಾಕುನಾಯಿ

By Mahesh
|
Google Oneindia Kannada News

Lokayukta Santosh Hegde
ಬೆಂಗಳೂರು ಜು 27: ಲೋಕಕ್ಕೆ ಅವರು ನ್ಯಾಯ ದೇವರು, ಮನೆಯಲ್ಲಿ ಎಲ್ಲರ ಪ್ರೀತಿಯ ದೇವರು, ಲೋಕಾಯುಕ್ತರಾಗಿ ಸಂತೋಷ್ ಹೆಗ್ಡೆ ಅವರು ತಮ್ಮ ಅವಧಿ ಪೂರೈಸಿ ಮನೆಗೆ ಬರುವುದನ್ನೇ ಕಾಯುತ್ತಿದ್ದೇವೆ ಎಂದು ಅವರ ಪತ್ನಿ ಶಾರದಾ ಹೆಗ್ಡೆ ಅವರು ಹೇಳಿದ್ದಾರೆ.

ಆಗಸ್ಟ್ 2 ರಂದು ಸಂತೋಷ್ ಹೆಗ್ಡೆ ಅವರನ್ನು ಸಂಭ್ರಮದಿಂದ ಸ್ವಾಗತಿಸಲು ಅವರ ಮುದ್ದು ನಾಯಿ ಮರಿ ಸ್ನೋವಿ ಜೊತೆ ನಾವೆಲ್ಲರೂ ಸಿದ್ಧತೆ ನಡೆಸುತ್ತಿದ್ದೇವೆ. ಆರು ವರ್ಷಗಳಿಂದ ಒಂದು ಕ್ಷಣ ಕೂಡಾ ಬಿಡುವಿಲ್ಲದೆ ದುಡಿದಿದ್ದರೆ, ಇನ್ಯಾದರೂ ಸ್ವಲ್ಪ ಕಾಲ ವಿಶ್ರಾಂತಿ ಪಡೆಯುವ ಅಗತ್ಯವಿದೆ ಎಂದಿದ್ದಾರೆ.

ಸದಾಶಿವನಗರದ ಅಧಿಕೃತ ನಿವಾಸದಿಂದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಹೊಸ ಅಪಾರ್ಟ್ಮೆಂಟ್ ಗೆ ಹೋಗಲು ಮನಸ್ಸು ಕಾತುರದಿಂದ ಕಾದಿದೆ. ಈ ತಿಂಗಳಲ್ಲೆ ಶಿಫ್ಟ್ ಮಾಡಲು ಮುಂದಾಗಿದ್ದೆವು. ಆಮೇಲೆ ಆಷಾಢ ಮಾಸದಲ್ಲಿ ಏಕೆ ಎಂದು ಸುಮ್ಮನಾದೆವು. 2005 ರಲ್ಲಿ ದೆಹಲಿಯಿಂದ ಇಲ್ಲಿಗೆ ಬಂದಾಗಿನಿಂದ ಸ್ನೋವಿ ಅವರ ಮುದ್ದಿನ ಕೂಸಾಗಿದೆ.

ಅಕ್ರಮ ಗಣಿಗಾರಿಕೆ ಬಗ್ಗೆ ಮನೆಯಲ್ಲಿ ಎಂದೂ ಚರ್ಚಿಸಿಲ್ಲ. ಕಚೇರಿ ಟೆನ್ಷನ್ ಗಳನ್ನು ಎಂದಿಗೂ ಮನೆಗೆ ತಂದವರಲ್ಲ. ಆಗಾಗ ಜೀವ ಬೆದರಿಕೆ ಕರೆಗಳು ಬಂದರೂ ಎಲ್ಲವನ್ನೂ ಶಾಂತವಾಗಿ ನಿಭಾಯಿಸುತ್ತಿದ್ದರು. ನಮಗೆಲ್ಲ ಅವರ ಮೇಲಿರುವ ಒತ್ತಡದ ಅರಿವಾಗುತ್ತಲೇ ಇರಲಿಲ್ಲ. ಮಂಗಳವಾರ ಅವರ ಫೇರ್ ವೆಲ್ ಪಾರ್ಟಿಗೆ ಖಂಡಿತಾ ಹೋಗಿಬರ್ತೇನೆ.

ಮನೆಗೆ ಬಂದ ಮೇಲೆ ಅವರ ನೆಚ್ಚಿನ ಹಳೆ ಹಿಂದಿ, ಕನ್ನಡ ಹಾಡುಗಳನ್ನು ಹಾಕಿ ಅವರಿಗೆ ಒಂದಿಷ್ಟು ನೆಮ್ಮದಿ ನೀಡುವ ಬಯಕೆ ಇದೆ. ಆದರೆ, ವಿಶ್ರಾಂತಿಗೂ ಅವರಿಗೂ ಯಾಕೋ ಹೊಂದಾಣಿಕೆಯಾಗುವುದೇ ಇಲ್ಲ, ಸದಾ ಕೆಲಸದಲ್ಲಿ ಮಗ್ನರಾಗಿರುತ್ತಾರೆ.

ಸಂತೋಷ್ ಅವರ ಮುಂದಿನ ನಡೆ ಬಗ್ಗೆ ನನಗೂ ಕುತೂಹಲವಿದೆ ಎಂದು ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರ ಪತ್ನಿ ಶಾರದಾ ತಮ್ಮ ಮನದಾಳದ ಮಾತುಗಳನ್ನು ಸ್ಥಳೀಯ ಪತ್ರಿಕೆಯೊಡನೆ ಹಂಚಿಕೊಂಡಿದ್ದಾರೆ.

English summary
Justice Lokayukta Santosh Hegde wife Sharada Hegde has finally having sigh of relief. Santosh Hegde is due to retire on Aug first week. Sharada wants are hubby to spare more time with family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X