ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿಗಾರಿಕೆ ವರದಿ: ಆರ್ ಟಿಐಗೆ ಮಾಧ್ಯಮಗಳ ಮೊರೆ

By Srinath
|
Google Oneindia Kannada News

ಬೆಂಗಳೂರು, ಜುಲೈ 27: ಲೋಕಾಯುಕ್ತರ 'ಗಣಿಗಾರಿಕೆ' ವರದಿಯನ್ನು ಔಪಚಾರಿಕವಾಗಿ ಇಂದು ಮಧ್ಯಾಹ್ನ ಸಲ್ಲಿಕೆಯಾಗಲಿದ್ದು, ಅದೇ ವರದಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಸಾಧ್ಯತೆ ಇಲ್ಲವಾಗಿದೆ. ಇದರಿಂದ ಮಹಾಜನತೆ ತಮ್ಮ ಘನ ನಾಯಕರ 'ಗಣಿಗಾರಿಕೆ' ಬಗ್ಗೆ ತಿಳಿದುಕೊಳ್ಳುವುದು ಸದ್ಯಕ್ಕೆ ಸಾಧ್ಯವಾಗದೇ ಇರಬಹುದು. ಆದರೆ ಲೋಕಾಯುಕ್ತ ಹೆಗ್ಡೆ ಅವರು ಸುಪ್ರೀಂಕೋರ್ಟಿಗೆ ತಮ್ಮ ವರದಿಯ ಒಂದು ಪ್ರತಿ ಸಲ್ಲಿಸುವುದಾಗಿ ಖಚಿತಪಡಿಸಿದ್ದಾರೆ.

ಈ ಮಧ್ಯೆ, ಗಣಿಗಾರಿಕೆ ವರದಿ ಪಡೆಯಲು ಮಾಧ್ಯಮಗಳು ಹರಸಾಹಸಪಡುತ್ತಿದ್ದು, ಮಾಹಿತಿ ಹಕ್ಕು ಕಾಯಿದೆಯಡಿ (ಆರ್ ಟಿಐ) ವರದಿ ಪಡೆಯಲು ಸುದ್ದಿಗಾರರು ಸನ್ನದ್ದರಾಗಿದ್ದಾರೆ.

ಸ್ವತಃ ಲೋಕಾಯುಕ್ತ ಸಂತೋಷ್ ಹೆಗಡೆ ಅವರೇ ಈ ವಿಷಯವನ್ನು ಖಚಿತಪಡಿಸಿದ್ದು, ವರದಿ ತಿರಸ್ಕರಿಸುವುದಕ್ಕೆ ಸರಕಾರ ಎಲ್ಲ ಮಾರ್ಗಗಳನ್ನು ಅನುಸರಿಸುತ್ತಿದೆ. ಆದ್ದರಿಂದ ಅನಗತ್ಯವಾಗಿ ಯಾವುದೇ ಅಡ್ಡಿಯನ್ನು ಮೈಮೇಲೆ ಎಳೆದುಕೊಳ್ಳುವುದಿಲ್ಲ. ಮಾಧ್ಯಮಗಳಿಗೆ ನಿಧಾನವಾಗಿ ವರದಿ ಕೊಟ್ಟರಾಯಿತು ಎಂಬ ನಿಲುವು ತಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗೋಷ್ಠಿ ನಡೆಸುವ ಬಗ್ಗೆಯೂ ಕಾನೂನು ಸಲಹೆ ಪಡೆಯಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಾಸ್ತವಾಗಿ, ಲೋಕಾಯುಕ್ತರ 'ಗಣಿಗಾರಿಕೆ' ವರದಿ ಈ ಹಿಂದೆಯೇ ಸರಕಾರಕ್ಕೆ ಸಲ್ಲಿಕೆಯಾಗಬೇಕಿತ್ತು. ಆದರೆ ಧಾರವಾಡದ ಸಮಾಜ ಪರೊವರ್ತನ ಸಮುದಾಯ ಎಂಬ ಸರಕಾರೇತರ ಸಂಸ್ಥೆಯು (ಎನ್ ಜಿಒ) ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅದರಂತೆ ಸುಪ್ರೀಂಕೋರ್ಟ್ ಉನ್ನತಮಟ್ಟದ ಸಮಿತಿ (ಸಿಇಸಿ) ರಚಿಸಿ, ಸಮೀಕ್ಷಾ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಇದು ಲೋಕಾಯುಕ್ತ ವರದಿ ವಿಳಂಬಕ್ಕೆ ಸಕಾರಣವಾಯಿತು.

ವರದಿ ಮಂಡನೆಯಾದ ನಂತರವೂ ಅದನ್ನು ಶೈತ್ಯಾಗಾರದಲ್ಲಿಡುವ ದುರಾಲೋಚನೆಯಲ್ಲಿ ಸರಕಾರ, ವರದಿ ಅಧ್ಯಯನಕ್ಕಾಗಿ ಉನ್ನತ ಸಮಿತಿ ರಚಿಸಿ ವಿಳಂಬ ಧೋರಣೆ ಹೊಂದುವ ಸಾಧ್ಯತೆಯೂ ಇದೆ ಎಂದು ವಿಶ್ಲೇಷಿಸಲಾಗಿದೆ.

English summary
Lokayukta Hegde has said that a copy of the final report would not be released to the media on the day of its submission to the Government. The report will be given to the media only after Wednesday and that too after examining the legality of such a disclosure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X