ನ್ಯಾ. ಶಿವರಾಜ್ ಪಾಟೀಲ್ ಕರ್ನಾಟಕ ನೂತನ ಲೋಕಾಯುಕ್ತ
ಬೆಂಗಳೂರು,
ಜುಲೈ26: ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿರೂಪಣ್ಣ ಪಾಟೀಲ್ ಕರ್ನಾಟಕ ನೂತನ ಲೋಕಾಯುಕ್ತರಾಗಿ ಮಂಗಳವಾರ ನೇಮಕಗೊಂಡಿದ್ದಾರೆ. ಈ ಸಂಬಂಧ ರಾಜ್ಯ ಸರಕಾರ ಕಳಿಸಿದ್ದ ಶಿಫಾರಸನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅಂಗೀಕರಿಸಿದ್ದಾರೆ. id="toptextpromo">ಹಾಲಿ
ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರ ಕಾರ್ಯಾವಧಿ ಆಗಸ್ಟ್ 2ರಂದು ಮುಕ್ತಾಯವಾಗಲಿದೆ. ಉಪ ಲೋಕಾಯುಕ್ತರಾಗಿ ನ್ಯಾಯಮೂರ್ತಿ ಎಸ್.ಬಿ. ಮಜಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಪ್ರಕರಣಗಳ ಸಂಖ್ಯೆ ಹೆಚ್ಚಿರುವುದರಿಂದ ಮತ್ತೊಬ್ಬ ಉಪ ಲೋಕಾಯುಕ್ತರ ನೇಮಕಾತಿಗೆ ಸರ್ಕಾರ ಪ್ರಸ್ತಾವ ಸಲ್ಲಿಸಿತ್ತು. ಅದಕ್ಕೂ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅಂಕಿತ ಹಾಕಿದ್ದಾರೆ. 2ನೇ ಲೋಕಾಯುಕ್ತರಾಗಿ ಆರ್. ಗುರುರಾಜನ್ ನೇಮಕಗೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆಗಸ್ಟ್
2ರಂದು ಸಂತೋಷ್ ಹೆಗ್ಡೆ ನಿವೃತ್ತರಾಗುತ್ತಿದ್ದಾರೆ. ಅದೇ ದಿನ ಶಿವರಾಜ್ ಪಾಟೀಲ್ ಮತ್ತು ಗುರುರಾಜನ್ ಅವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. 2 ಜಿ ಹಗರಣದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆಗಾಗಿ ಕೇಂದ್ರ ಸರಕಾರಕ್ಕೆ ನೇಮಿಸಿದ್ದ ಏಕ ಸದಸ್ಯ ಸಮಿತಿಯ ನೇತೃತ್ವ ವಹಿಸಿದ್ದ ನ್ಯಾ. ಶಿವರಾಜ್ ಪಾಟೀಲ್ ವರದಿಯನ್ನು ಈ ಹಿಂದೆಯೇ ಒಪ್ಪಿಸಿದ್ದಾರೆ.











Click it and Unblock the Notifications