ಶುಕ್ರವಾರ ಬೆಂಗಳೂರಿನಲ್ಲಿ ಆಟೋರಿಕ್ಷ ಮುಷ್ಕರ ಇಲ್ಲ

Auto rickshaw strike called off
ಬೆಂಗಳೂರು, ಜು. 20 : ಹೊಗೆ ಉಗುಳುವ ಹಳೆ ಆಟೋಗಳನ್ನು ಗುಜರಿಗೆ ಹಾಕುವ ಸರಕಾರದ ಸಲಹೆಯನ್ನು ಆಟೋ ರಿಕ್ಷಾ ಚಾಲಕ ನರಸಿಂಹಯ್ಯ (42) ಸ್ವಾಗತಿಸಿದ್ದಾರೆ. ಸ್ವತಃ ಹಸುರು ಆಟೋ ಓಡಿಸುತ್ತಿರುವ ಅವರು ಯಡಿಯೂರು ನಿವಾಸಿ.

2000 ಇಸವಿಯ ಹಿಂದೆ ನೊಂದಾವಣೆ ಮಾಡಿದ 2-ಸ್ಟ್ರೋಕ್ ಆಟೋಗಳನ್ನು ಜಂಕ್ ಮಾಡುವುದು ಮತ್ತು ಆ ಆಟೋ ಚಾಲಕರಿಗೆ 15 ಸಾವಿರ ಪ್ರೋತ್ಸಾಹಧನ ಹಾಗೂ ಹೊಸ ಆಟೋ ಸಾಲಕ್ಕೆ ವ್ಯವಸ್ಥೆ ಮಾಡುವ ಸಾರಿಗೆ ಸಚಿವ ಆರ್ ಅಶೋಕ ಅವರ ಪೇಪರ್ ಸ್ಟೇಟ್ ಮೆಂಟಿಗೆ ಪ್ರತಿಕ್ರಯಿಸಿ ಅವರು ಮಾತನಾಡುತ್ತಿದ್ದರು.

ಹಳೇ ಆಟೋಗಳನ್ನು ಬದಿಗೊತ್ತಿ 40 ಸಾವಿರ ಹೊಸ ಆಟೋಗಳಿಗೆ ಪರವಾನಗಿ ನೀಡುವ ಪ್ರಸ್ಥಾವನೆ ಸರಕಾರದ ಮುಂದಿದೆ. ಹಳೆ ಆಟೋ ಕಳೆದುಕೊಳ್ಳುವ ಮಾಲಿಕನಿಗೆ 15 ಸಾವಿರ ಪರಿಹಾರ ಸಿಗತ್ತೆ. ಅದಕ್ಕೆ ಆತ 20 ಸಾವಿರ ಸೇರಿಸಬೇಕು. ತನ್ಮೂಲಕ ಹೊಸ ಆಟೋ ಸಾಲ 1.60,000 ಪಡೆಯಬಹುದು ಎಂದು ನರಸಿಂಹಯ್ಯ ವಿವರಿಸಿದರು.

ಈ ಹಳೇ ಆಟೋ ಮಟಾಶ್ ವಿರೋಧಿಸಿ ಕೆಲವು ಆಟೋ ಸಂಘಟನೆಗಳು ನೀಡಿದ್ದ ಬಂದ್ ಕರೆ ವಾಪಸ್ ಪಡೆಯಲಾಗಿದೆ. ಹಾಗಾಗಿ, ಜುಲೈ 22ರ ಉದ್ದೇಶಿತ ಮುಷ್ಕರ ರದ್ದಾಗಿದೆ. ಮಂಗಳವಾರ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಿದ ಸಚಿವರು ಸರಕಾರದ ಹೊಸ ನೀತಿಯ ಲಾಭ ಮತ್ತು ಪ್ರಯೋಜನಗಳನ್ನು ಬಿಡಿಸಿ ಬಿಡಿಸಿ ಹೇಳಿದ್ದಾರೆ.

ಸರಕಾರದ ಹೊಸ ನೀತಿ ಆಶಾದಾಯಕವಾಗಿದೆ ಎಂದು ಭುವನೇಶ್ವರಿ ಆಟೋ ಸಂಘದ ಅಧ್ಯಕ್ಷ ಶ್ರೀನಿವಾಸ್ ಬುಧವಾರ ದಟ್ಸ್ ಕನ್ನಡಕ್ಕೆ ತಿಳಿಸಿದರು. ಚಾಲಕ ಮತ್ತು ಮಾಲಿಕ ನರಸಿಂಹಯ್ಯ ಅವರು ಹಸುರು ಆಟೋ ಖರೀದಿಸಿ 3 ತಿಂಗಳಾಗಿದೆ. 60 ಸಾವಿರ ಬಂಡವಾಳ ಹೂಡಿ ಕೊಂಡ ಆಟೋ ಅದು. ಉಳಿದ 1 ಲಕ್ಷ ರೂಗಳನ್ನು ಪಟ್ಟಾಭಿರಾಮನಗರದ ಶ್ರೀ ರಾಮ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಕಂಪನಿ ಕೊಟ್ಟಿದೆ. ಪ್ರತಿ ತಿಂಗಳ ಕಂತು 3200 ರೂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+