ದೆಹಲಿಯಲ್ಲಿ ವಿದೇಶಿ ಬೆಲೆವೆಣ್ಣುಗಳ ವೇಶ್ಯಾವಾಟಿಕೆ ಪತ್ತೆ
ನವದೆಹಲಿ,
ಜುಲೈ 19: ವೇಶ್ಯಾವಾಟಿಕೆಗಳು ದೇಶದ ಮೂಲೆ ಮೂಲೆಗಳಲ್ಲೂ ಬ್ರಹ್ಮಾಂಡವಾಗಿ ನಡೆಯುತ್ತಿದೆ. ರಾಜಧಾನಿ ದೆಹಲಿಯೂ ಇದಕ್ಕೆ ಹೊರತಾಗಿಲ್ಲ. ಪೊಲೀಸರು ಮೊನ್ನಯಷ್ಟೇ ದುಬೈ ಮೂಲದ ಬೃಹತ್ ವೇಶ್ಯಾವಾಟಿಕೆ ಜಾಲವನ್ನು ಬೇಧಿಸಿದ್ದರು. ಇಂದು (ಜುಲೈ 19) ವಿದೇಶೀಯರೇ ನಡೆಸುವ ಮತ್ತೊಂದು ವೇಶ್ಯವಾಟಿಕೆ ಮೇಲೆ ದಾಳಿ ನಡೆಸಿ, ಬೆಲೆವೆಣ್ಣುಗಳನ್ನು ಬಂಧಿಸಿದ್ದಾರೆ. id="toptextpromo">'ಟಾಪ್
ಹಾಟ್' ಎಂಬ ವೆಬ್‌ಸೈಟ್ ಮೂಲಕ ಕಜಕಿಸ್ತಾನ, ತಜಕಿಸ್ತಾನ ಮತ್ತು ನೇಪಾಳದ ಯುವತಿಯರೇ ಇಲ್ಲಿ ಬೆಲೆವೆಣ್ಣುಗಳಾಗಿ ದುಡಿಯುತ್ತಿದ್ದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ದೀಪಕ್ ವರ್ಮಾ ಎಂಬ ವಿಟಪುರುಷ, ಒಬ್ಬಳು ಘರ್ ವಾಲಿ ಮತ್ತು 6 ಯುವತಿಯರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವೇಶ್ಯಾವಾಟಿಕೆಯ ಸೂತ್ರಧಾರ ಆಶಿಶ್ ಎಂಬ ವ್ಯಕ್ತಿ ಪರಾರಿಯಾಗಿದ್ದಾನೆ. id='are-slot-1' class='oiad oi-axt oiadv'> id='top-searched-articles'>ದಕ್ಷಿಣ
ದೆಹಲಿಯ ಪ್ರತಿಷ್ಠಿತ, ಶ್ರೀಮಂತ ಬಡಾವಣೆಯಲ್ಲಿ ಫ್ಲ್ಯಾಟ್ ಅನ್ನು ಬಾಡಿಗೆಗೆ ಪಡೆದು ಅದರಲ್ಲಿ ಆಶಿಶ್ ವೇಶ್ಯಾವಾಟಿಕೆ ನಡೆಸುತ್ತಿದ್ದ. ಸಮಾಜದ ಗಣ್ಯ ವ್ಯಕ್ತಿಗಳು ಇಲ್ಲಿ ಗ್ರಾಹಕರಾಗಿದ್ದರು. ಇಲ್ಲಿನ ಯುವತಿಯರು ರಾಜಧಾನಿಯ ಸುತ್ತಮುತ್ತಲ ಭಾಗಗಳಲ್ಲೂ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.











Click it and Unblock the Notifications