ಮೈಸೂರು ವಿವಿ: ನ್ಯಾಯ ಕೇಳಿದ ಸರಿತಾಗೆ ನೋಟಿಸ್

Student Saritha
ಬೆಂಗಳೂರು ಜು 19: ಪುರುಷರೇ ಹೆಚ್ಚಾಗಿರುವ ಸಮಿತಿ ಎದುರು ಹಾಜರಾಗಿ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೆ ನೀಡಲಿ ಎಂದಿದ್ದ ಪಿಎಚ್ ಡಿ ವಿದ್ಯಾರ್ಥಿನಿ ಸರಿತಾಳಿಗೆ ವಿಶ್ವವಿದ್ಯಾಲಯ ನೋಟಿಸ್ ನೀಡಿದೆ. ಸರಿತಾ ಅಸಭ್ಯ ನಡವಳಿಕೆ, ನಿಯಮಬಾಹಿರ ಕೃತ್ಯದಿಂದ ಕಾಲೇಜಿನ ವಾತಾವರಣ ಹದಗೆಡುತ್ತಿದೆ ಎಂದು ವಿವಿ ದೂರಿದೆ.

ವಿಶ್ವವಿದ್ಯಾಲಯದ ತನಿಖಾ ಸಮಿತಿ ಮುಂದೆ ಹಾಜಾರಾಗುವುದಿಲ್ಲ ಎಂದು ಹೇಳಿರುವ ಸರಿತಾ, ಮಾಧ್ಯಮಗಳ ಮುಂದೆ ವಿವಿಯ ಮಾನ ಹರಾಜಾಗುತ್ತಿದ್ದಾರೆ. ಈಕೆಗೆ ನೀಡಿರುವ ಫೆಲೋಶಿಪ್ ಏಕೆ ಹಿಂದಕ್ಕೆ ಪಡೆಯಬಾರದು ಎಂದು ನೋಟಿಸ್ ನಲ್ಲಿ ಕೇಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೊ ಶಿವಬಸವಯ್ಯ ಅವರಿಗೂ ನೋಟಿಸ್ ನೀಡಲಾಗಿದೆ ಎಂದು ವಿವಿ ರಿಜಿಸ್ಟ್ರಾರ್ ಎಸ್ ಎನ್ ನಾಯಕ್ ಹೇಳಿದ್ದಾರೆ.

ಈ ನಡುವೆ ವಿವಿಯ ನೋಟಿಎಸ್ ನಿಂದ ಮನನೊಂದಿರುವ ಸರಿತಾ ತನ್ನ ಪತಿ ವಿಜಯ್ ಕುಮಾರ್ ಅವರನ್ನು ಕರೆದುಕೊಂಡು ರಾಜಭವನದ ಮುಂದೆ ನಿಂತಿದ್ದಾರೆ. ಲೈಂಗಿಕ ಕಿರುಕುಳ ಆಗಿದೆ ಎಂದು ಹೆಣ್ಣೊಬ್ಬಳು ಸಾರ್ವಜನಿಕವಾಗಿ ಹೇಳಿದರೂ ವಿವಿಗೆ ತನ್ನ ಪ್ರತಿಷ್ಠೆಯೇ ಹೆಚ್ಚಾಗಿದೆ.

ಅನಗತ್ಯ ವಿವಾದ ತೆಗೆದು ಆರೋಪಿ ಪ್ರೊ ಶಿವಬಸವಯ್ಯ ಅವರನ್ನು ಉಳಿಸುವ ಪ್ರಯತ್ನ ನಡೆದಿದೆ. ರಾಜ್ಯಪಾಲರಲ್ಲಿ ನ್ಯಾಯ ಕೇಳುವುದೊಂದೆ ನಮಗೆ ಉಳಿದಿರುವ ದಾರಿ ಎಂದು ಸರಿತಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+