ಸಾಯಿ ಬಾಬಾ ಕೊಠಡಿಗಳಲ್ಲಿ ಮತ್ತಷ್ಟು ಧನಕನಕ ಪತ್ತೆ
ಪುಟ್ಟಪರ್ತಿ,
ಜುಲೈ 19: ಸತ್ಯ ಸಾಯಿಬಾಬಾ ಅವರ ವಾಸ ಕೊಠಡಿ ಜಯುರ್ ಮಂದಿರವನ್ನು ಜುಲೈ 18ರಂದು ತೆರೆಯಲಾಗಿದ್ದು ಇದುವರೆಗೆ 5.85 ಕೋಟಿ ರುಪಾಯಿ ಮೌಲ್ಯದ 34.43 ಕೆಜಿ ಚಿನ್ನಾಭರಣಗಳನ್ನು ಪತ್ತೆ ಹಚ್ಚಲಾಗಿದೆ. ನಾನಾ ಗಾತ್ರದ ಚೀಲಗಳಲ್ಲಿ ಇವುಗಳನ್ನು ಭದ್ರಪಡಿಸಲಾಗಿತ್ತು' ಎಂದು ಅನಂತಪುರ ಕಲೆಕ್ಟರ್ ವಿ. ಗುರುದಾಸ್ ಮಂಗಳವಾರ ಹೇಳಿದ್ದಾರೆ. id="toptextpromo">ಆಂಧ್ರ
ಸರಕಾರದ ಆದೇಶದ ಮೇರೆಗೆ ಜಯುರ್ ಮಂದಿರವನ್ನು ಮತ್ತೊಮ್ಮೆ ಅಧಿಕೃತವಾಗಿ ತೆರೆಯಲಾಗಿದ್ದು, ಇದುವರೆಗೆ 340 ಕೆಜಿ ಬೆಳ್ಳಿ, 2 ಕೋಟಿ ರು. ನಗದು ಮತ್ತು 34.43 ಕೆಜಿ ಚಿನ್ನಾಭರಣಗಳನ್ನು ಪತ್ತೆಯಾಗಿದೆ. ಇದನ್ನು ಸವಿಸ್ತಾರವಾಗಿ ಪಟ್ಟಿ ಮಾಡಲಾಗುತ್ತಿದೆ. ಇನ್ನೂ ಮೂರು ದಿನ ಈ ಕೊಠಡಿಗಳಲ್ಲಿ ತಪಾಸಣೆ ಕಾರ್ಯ ನಡೆಯಲಿದೆ. id='are-slot-1' class='oiad oi-axt oiadv'> id='top-searched-articles'>ಮೊದಲ
ಬಾರಿಗೆ ಈ ಮಂದಿರವನ್ನು ಜೂನ್ 16ರಂದು ಟ್ರಸ್ಟಿಗಳು ತೆರೆದಿದ್ದರು. ಒಟ್ಟು 12 ಕೊಠಡಿಗಳಿದ್ದು, 8 ಮಾತ್ರ ತೆರೆದು ತಪಾಸಣೆ ಮಾಡಲಾಗಿತ್ತು. ಉಳಿದ ನಾಲ್ಕು ಜೈವಿಕ ಬೀಗಗಳಿಂದ ಮಾಡಲಾಗಿದೆ. ಇದನ್ನು ಬಾಬಾ ಅವರ ಆಪ್ತ ಸಹಾಯಕ ಸತ್ಯಜಿತ್ ಮಾತ್ರ ತೆರೆಯಬಲ್ಲವರಾಗಿದ್ದಾರೆ.











Click it and Unblock the Notifications