ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ರಸಗೊಬ್ಬರ ಅಮೋನಿಯಂ ನೈಟ್ರೇಟಿಗೆ ನಿಷೇಧ?

By Mahesh
|
Google Oneindia Kannada News

Ban on Ammonium Nitrate?
ನವದೆಹಲಿ, ಜು. 17: ರಾಸಾಯನಿಕ ಗೊಬ್ಬರವಾಗಿ ಕೃಷಿ ಚಟುವಟಿಕೆಗಳಲ್ಲಿ ಬಳಕೆಯಾಗುತ್ತಿದ್ದ ಅಮೋನಿಯಂ ನೈಟ್ರೇಟ್ , ಭಯೋತ್ಪಾದಕರು ಸ್ಫೋಟಕಗಳಿಗೂ ಬಳಸುತ್ತಿರುವ ಹಿನ್ನೆಲೆಯಲ್ಲಿ, ದೇಶಾದ್ಯಂತ ನಿಷೇಧಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಅಮೋನಿಯಂ ನೈಟ್ರೇಟ್ ಬಳಕೆ ಮತ್ತು ಸಾಗಣೆ ಮೇಲೆ ಸ್ಫೋಟಕ ವಸ್ತು ಕಾಯ್ದೆಯಡಿ ನಿಯಂತ್ರಣ ಹೇರಲು ಸರಕಾರ ನಿರ್ಧರಿಸಿದ್ದು, ಈ ಸಂಬಂಧ ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಸೂದೆಯೊಂದನ್ನು ಮಂಡಿಸಲಾಗುವುದು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನಲ್ಲಿ ಜು 13ರಂದು ನಡೆದ ಸರಣಿ ಸ್ಫೋಟ ಸೇರಿದಂತೆ ದೇಶದಲ್ಲಿ ನಡೆದಿರುವ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಭಯೋತ್ಪಾದಕ ಸಂಘಟನೆಗಳು ಅಮೋನಿಯಂ ನೈಟ್ರೇಟ್ ಬಳಕೆ ಮಾಡಿರುವುದನ್ನು ಕೇಂದ್ರದ ಭದ್ರತಾ ಪಡೆಗಳು ದೃಢಪಡಿಸಿದೆ. ದೆಹಲಿ, ಅಹಮದಾಬಾದ್, ಬೆಂಗಳೂರು ಮುಂತಾದ ಕಡೆ ಸ್ಫೋಟಕ್ಕೂ ಅಮೋನಿಯಂ ನೈಟ್ರೇಟ್ ಕಚ್ಚಾ ವಸ್ತು ವಾಗಿತ್ತು.

ನಿಷೇಧ ಕೃಷಿಗೆ ಮಾರಕವಾದರೆ?: ಸದ್ಯಕ್ಕೆ ಅಮೋನಿಯಂ ನೈಟ್ರೇಟ್ ಸ್ಫೋಟಕ ವಸ್ತು ಭದ್ರತಾ ಕಾಯ್ದೆಯ ವ್ಯಾಪ್ತಿಗೆ ಸೇರಿಲ್ಲ. ನಿಷೇಧಕ್ಕೂ ಮುನ್ನ ಸ್ಫೋಟಕಗಳ ಮಾರಾಟ, ಶೇಖರಣೆ, ಸಾಗಣೆ ಹಾಗೂ ಉತ್ಪಾದನೆ ಮೇಲೆ ನಿಯಂತ್ರಣ ಹೇರಲಾಗುವುದು. ರಾಸಾಯನಿಕಗಳು ಸುಲಭವಾಗಿ ಉಗ್ರರ ಕೈ ಸೇರದಂತೆ ವ್ಯವಸ್ಥೆ ನಿರ್ಮಿಸಲಾಗುವುದು. ಅಮೋನಿಯಂ ನೈಟ್ರೇಟ್ ಬದಲಿಗೆ ಬೇರೆ ರಸಗೊಬ್ಬರಗಳನ್ನು ರೈತರು ಬಳಸಬಹುದು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

English summary
The Indian Government would impose restraint over the free movement and availability of ammonium nitrate that has been used in several terror attacks in India. In fact it might possibly come under the purview of Explosive Substances Act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X