ಗ್ರಾಮಸ್ಥರ ಮುಂದೆ ಶಿಕ್ಷಕನಿಂದ ರೇಪ್, ಯುವತಿ ನೇಣಿಗೆ

ಛಿತೊನಿಯಾ ಗ್ರಾಮದಲ್ಲಿ ಮತ್ತೊಂದು ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಕಾರಣ, ಗ್ರಾಮಸ್ಥರ ಮುಂದೆ, ಶಿಕ್ಷಕ ಆಕೆಯನ್ನು ಅತ್ಯಾಚಾರ ಮಾಡಿದ್ದು, ಈ ಬಗ್ಗೆ ಸೂಸೈಟ್ ನೋಟ್ ನಲ್ಲಿ ಆಕೆ ಸ್ಪಷ್ಟಪಡಿಸಿದ್ದಾಳೆ.
ಇಂಟರ್ ಮೀಡಿಯೇಟ್ ಓದುತ್ತಿದ್ದ ಹುಡುಗಿಯನ್ನು ಹಾಡಹಗಲೇ ಆಕೆ ಶಿಕ್ಷಕ ಹಾಗೂ ಇತರ ಐದು ಮಂದಿ ನಡು ರಸ್ತೆಯಲ್ಲಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದರು. ಇದರಿಂದ ನೊಂದ ಆಕೆ, ಮನೆಗೆ ಬಂದು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.
16 ವರ್ಷ ಹುಡುಗಿ ಮೇಲೆ ಅತ್ಯಾಚಾರ ನಡೆಸಿದ ಗ್ಯಾಂಗ್ ನಲ್ಲಿದ್ದ ಶಿಕ್ಷಕನ ಜೊತೆ ಹುಡುಗಿ ಅಫೇರ್ ಇತ್ತು ಎನ್ನಲಾಗಿದೆ. ಇದು ಮಾಜಿ ಸಂಸದ ಕಡೆ ಚೇಲಾಗಳಿಗೆ ಇಷ್ಟವಾಗಲಿಲ್ಲ. ಕೊನೆಗೆ ಆಕೆಯನ್ನು ರೇಪ್ ಮಾಡಿದ್ದಾರೆ. ಹೊಸದಾಗಿ ಪೋಸ್ಟ್ ಮಾರ್ಟಮ್ ಗೆ ಮೃತಳ ಕುಟುಂಬದವರು ಮನವಿ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಲಾಗಿದೆ. ಶಿಕ್ಷಕ ಇನ್ನೂ ನಾಪತ್ತೆಯಾಗಿದ್ದಾನೆ. ತನಿಖೆ ಮುಂದುವರೆದಿದೆ ಎಂದು ಎಸ್ಪಿ ಅಮಿತ್ ಚಂದ್ರ ಹೇಳಿದ್ದಾರೆ.
ಸರಣಿ ಅತ್ಯಾಚಾರ ಪ್ರಕರಣಗಳ ಬೀಡಾಗಿರುವ ಉತ್ತರ ಪ್ರದೇಶದ ಇದೇ ಲಖೀಂಪುರ ಭಾಗದಲ್ಲಿ 14 ವರ್ಷದ ಹುಡುಗಿ ಮೇಲೆ 10 ಜನ ಪೊಲೀಸರು ಅತ್ಯಾಚಾರ ಎಸೆಗಿದ್ದರು. ಬಳಿಕ ಸ್ಟೇಷನ್ ಆವರಣದಲ್ಲೇ ಹುಡುಗಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಳು.












Click it and Unblock the Notifications