ಮೆಟ್ರೋ ಜೆಸಿಬಿ ಯಂತ್ರಕ್ಕೆ ಸಿಲುಕಿ ಅಪರಿಚಿತ ಮಹಿಳೆ ಸಾವು
ಬೆಂಗಳೂರು,
ಜು.17: ಬಿಎಂಆರ್ ಸಿಎಲ್ ಮೆಟ್ರೋ ಮತ್ತೊಂದು ಬಲಿ ತೆಗೆದುಕೊಂಡಿದೆ. ಮೆಟ್ರೋ ಕಾಮಗಾರಿಗೆ ಸೇರಿದ ಜೆಸಿಬಿ ಯಂತ್ರಕ್ಕೆ ಅಪರಿಚಿತ ಮಹಿಳೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆ ಮಲ್ಲೇಶ್ವರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯರಾತ್ರಿ ಮೃತಳಾದ ಸುಮಾರು 55 ವರ್ಷ ವಯಸ್ಸಿನ ಮಹಿಳೆಯ ಗುರುತು ಇನ್ನೂ ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ. id="toptextpromo">ನವರಂಗ್
ಸಿನಿಮಾ ಮಂದಿರ ಜಂಕ್ಷನ್ ಬಳಿ ಜೆಸಿಬಿ ಚಾಲಕನು ಹಿಂಬಂದಿಯಿಂದ ಚಾಲನೆ ಮಾಡುತ್ತಿರುವಾಗ ಆಕಸ್ಮಿಕವಾಗಿ ಮಹಿಳೆಯ ಮೇಲೆ ಹರಿಯಿತು. ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮೃತ ಮಹಿಳೆಯ ಗುರುತು ಪತ್ತೆಯಾಗಿಲ್ಲ.ಮಹಿಳೆ ಗುರುತು ಸಿಗದಷ್ಟು ದೇಹ ಜಜ್ಜಿ ಹೋಗಿದೆ. ಆಕೆ ಬಳಿ ಮೊಬೈ ಫೋನ್, ಹ್ಯಾಂಡ್ ಬ್ಯಾಗ್ ಆಗಲಿ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಿಹಾರದ
ನೋಂದಣಿ ಇರುವ ಜೆಸಿಬಿ ಯಂತ್ರ ಬಲಿ ಹಾಕಿದ ನಂತರ, ಮೆಟ್ರೋ ಅಧಿಕಾರಿಗಳು ಎಂಎಸ್ ರಾಮಯ್ಯ ಆಸ್ಪತ್ರೆಗೆ ಭೇಟಿ ಕೊಟ್ಟು, ಮೃತಳ ಸಂಬಂಧಿಕರಿಗೆ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಆದರೆ, ಮೃತಳ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.











Click it and Unblock the Notifications