ಸಿಬಿಐ ತನಿಖೆ ಆಗ್ರಹಿಸಿ ಗೌಡರಿಂದ ರಾಜ್ಯಪಾಲರ ಭೇಟಿ

ಗೌಡರ ಕುಟುಂಬ ಅಕ್ರಮವಾಗಿ ರು.1500 ಕೋಟಿ ಸಂಪತ್ತನ್ನು ಸಂಪಾದಿಸಿದೆಯೆಂದು ಯಡಿಯೂರಪ್ಪ ಸರಕಾರ ಮಾಡಿರುವ ಆರೋಪದಿಂದ ಮುಕ್ತರಾಗಲು ದೇವೇಗೌಡ ಅಂಡ ಸನ್ಸ್ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಈ ಗಂಭೀರ ಆರೋಪದ ತನಿಖೆ ಸಿಬಿಐನಿಂದ ಆಗಬೇಕು ಎಂದು ಆಗ್ರಹಿಸಿ 78 ವರ್ಷದ ದೇವೇಗೌಡರು ತಮ್ಮ ಸಹಚರರೊಂದಿಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಆಗ್ರಹಿಸಿ ಮನವಿ ಪತ್ರವನ್ನು ಮಂಗಳವಾರ ನೀಡಿದರು.
ಗೌಡರೊಂದಿಗಿದ್ದ ಎಂಸಿ ನಾಣಯ್ಯ ಅವರು, "ಆರೋಪಗಳನ್ನು ಮಾಡಬೇಕೆಂದು ಮಾಡಲಾಗಿದೆ. ಆರೋಪ ಸಾಬೀತುಪಡಿಸಲು ಬಿಜೆಪಿ ಬಳಿ ಯಾವುದೇ ಸಾಕ್ಷಿಗಳಿಲ್ಲ. ಗೌಡರ ಕುಟುಂಬಕ್ಕೆ ಮಸಿ ಬಳಿಯಬೇಕೆಂದು ಈ ಹುನ್ನಾರ ನಡೆದಿದೆ" ಎಂದು ತಿಳಿಸಿದರು.












Click it and Unblock the Notifications