ಮೈಸೂರು ಇನ್ಫಿ ಕ್ಯಾಂಪಸ್ ಗೆ ನಾರಾಯಣಮೂರ್ತಿ ಹೆಸರು

ಮೈಸೂರು ಇನ್ಫಿ ಆವರಣಕ್ಕೆ ಮರು ನಾಮಕರಣ ಮಾಡುವ ನಿರ್ಧಾರವನ್ನು ಉನ್ನತ ಮಟ್ಟದ ಸಭೆಯಲ್ಲಿ ಕೈಗೊಳ್ಳಲಾಯಿತು. ಸ್ಥಾಪಕ ಸದಸ್ಯರು ಹಾಗೂ ಇತರೆ ಉನ್ನತ ಅಧಿಕಾರಿಗಳಿದ್ದ ಸಭೆಯಲ್ಲಿ ಎನ್ ಆರ್ ನಾರಾಯಣಮೂರ್ತಿ ಹಾಗೂ ಸಿಇಒ ಕ್ರಿಸ್ ಗೋಪಾಲಕೃಷ್ಣನ್ ಕೂಡಾ ಭಾಗವಹಿಸಿದ್ದರು.
ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಔನ್ನತ್ಯ ಸಾಧಿಸುವುದರ ಬಗ್ಗೆ ಇನ್ಫಿ ಮೂರ್ತಿ ಭಾಷಣ ಮಾಡಿದರು. ಇನ್ಫೋಸಿಸ್ ಮೈಸೂರು ಘಟಕದಲ್ಲಿ ಸುಮಾರು 7,000ಕ್ಕೂ ಉದ್ಯೋಗಿಗಳಿದ್ದಾರೆ. ಈ ಸಂತಸದ ಗಳಿಗೆಯಲ್ಲೆ ಇಂದು ಸೆನ್ಸೆಕ್ಸ್ ನಲ್ಲಿ ಇನ್ಫಿ ಷೇರುಗಳು ಶೇ 3 ರಷ್ಟು ಕುಸಿತ ಕಂಡಿದೆ.[ಸೆನ್ಸೆಕ್ಸ್ ವಿವರಗಳಿಗೆ ನೋಡಿ]
ಮೈಸೂರು ಇನ್ಫೋಸಿಸ್ ಕ್ಯಾಂಪಸ್ ಸುಮಾರು 300 ಎಕರೆ ವಿಶಾಲ ಪ್ರದೇಶ ಹೊಂದಿದೆ. ಕಂಪನಿಗೆ ಹೊಸದಾಗಿ ಆಯ್ಕೆಯಾಗಿರುವ ಉದ್ಯೋಗಗಳ ತರಬೇತಿ ನೀಡುವ ಸಲುವಾಗಿ ಜಾಗತಿಕ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಈ ಕೇಂದ್ರವನ್ನು ಉದ್ಘಾಟಿಸಿದ್ದರು.












Click it and Unblock the Notifications