ಅಶ್ವಿನಿ ಅಕ್ಕುಂಜೆ ಉದ್ದೀಪನ ಮದ್ದು ಸೇವಿಸಿದ್ದು ನಿಜ
ನವದೆಹಲಿ,
ಜುಲೈ 11: ಭರವಸೆಯ ಅಥ್ಲೀಟ್ ಅಶ್ವಿನಿ ಅಕ್ಕುಂಜೆ ಇತ್ತೀಚೆಗೆ ಉದ್ದೀಪನ ಮದ್ದು ಸೇವಿಸಿರುವುದು ದೃಢಪಟ್ಟಿದೆ. ಸಾಮಾನ್ಯವಾಗಿ ಪೊಲೀಸರು ಯಾವುದಾದರೂ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ ರಿಪೋರ್ಟ್ ಹಾಕಿದರೆ ಆ ಪ್ರಕರಣ ಮುಚ್ಚಿದಂತೆಯೇ ಸರಿ. ಆದರೆ ಅಶ್ವಿನಿ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಬಿ ರಿಪೋರ್ಟ್ ಬಂದಿದ್ದು, ಪಾಸಿಟೀವ್ ಆಗಿದೆ. ಸದ್ಯಕ್ಕೆ ಅಶ್ವಿನಿ ಕ್ರೀಡಾ ಭವಿಷ್ಯ ಮಸುಕಾಗಿದೆ. id="toptextpromo">ಬಿ
ರಿಪೋರ್ಟ್ ಫಲಿತಾಂಶದಿಂದ ಅಶ್ವಿನಿ ಉದ್ದೀಪನ ಮದ್ದು ಸೇವಿಸಿರುವುದು ಸಾಬೀತಾಗಿರುವುದರಿಂದ ಸದ್ಯಕ್ಕೆ ಅವರಿಗೆ 2 ವರ್ಷ ನಿಷೇಧ ವಿಧಿಸುವ ಸಾಧ್ಯತೆ ಇದೆ. ಇದರಿಂದ 2012ರ ಒಲಿಂಪಿಕ್ಸ್ ನಲ್ಲಿ ಅಶ್ವಿನಿ ಪಾಳ್ಗೊಳ್ಳುವುದು ದೂರದ ಮಾತಾಗಿದೆ. ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದ ಮತ್ತೊಬ್ಬ ಅಥ್ಲೀಟ್ ಪ್ರಿಯಾಂಕಾ ಪನ್ವಾರ್ ಅವರ ಕತೆಯೂ ಇದೇ ಆಗಿದೆ. id='are-slot-1' class='oiad oi-axt oiadv'> id='top-searched-articles'>ರಾಷ್ಟ್ರೀಯ
ಉದ್ದೀಪನ ಮದ್ದು ತಡೆ ಘಟಕ (ನಾಡಾ) ಜೂನ್ 27ರಂದು ಪಟಿಯಾಲದಲ್ಲಿ ಇವರನ್ನು ಪರೀಕ್ಷೆಗೆ ಒಳಪಡಿಸಿತ್ತು. ಅದರಲ್ಲಿ ಅನಾಬಾಲಿಕ್ ಸ್ಟಿರಾಯ್ಡ ತೆಗೆದುಕೊಂಡಿರುವುದು 'ಎ' ಸ್ಯಾಂಪಲ್ ಪರೀಕ್ಷೆಯಿಂದ ಸಾಬೀತಾಗಿದೆ. 'ಎ' ಸ್ಯಾಂಪಲ್ ಪರೀಕ್ಷೆಯಲ್ಲಿ 'ಮೆಟಾಬಾಲೈಟ್ಸ್ ಆಫ್ ಮೆತಂಡಿನಾನ್' ಎಂಬ ಅಂಶ ಇರುವುದು ಪತ್ತೆಯಾಗಿದೆ. ತದನಂತರ ಕಳೆದ ವಾರ ಅವರನ್ನು ಮತ್ತೊಂದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ 'ಬಿ' ಸ್ಯಾಂಪಲ್ ಪರೀಕ್ಷೆಯಲ್ಲೂ ಮದ್ದು ಸೇವಿಸಿರುವುದು ಸಾಬೀತಾಗಿದೆ.











Click it and Unblock the Notifications