ರಾಹುಲ್ ರಿವಾಲ್ವರ್ ಪ್ರಸಂಗಕ್ಕೆ ಮಾಯಾವತಿ ನೇರ ಹೊಣೆ

ಅಲಿಘಡದಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ ಕಾರ್ಯಕ್ರಮದ ಬಗ್ಗೆ ಮೊದಲೆ ಸರ್ಕಾರಕ್ಕೆ ತಿಳಿಸಲಾಗಿದೆ. ಆದರೆ, ಈ ರೀತಿ ಭದ್ರತೆಯಲ್ಲಿ ಲೋಪ ಕಂಡು ಬಂದಿರುವುದು ಅಕ್ಷಮ್ಯ. ಸರ್ಕಾರ ಸರಿಯಾದ ಕ್ರಮ ಕೂಡಲೇ ಕೈಗೊಳ್ಳಬೇಕು. ರಾಹುಲ್ ವಿಷಯದಲ್ಲಿ ಇಂಥ ಉದಾಸೀನತೆ ಸಲ್ಲದು ಎಂದು ಅಂಬಿಕಾ ಸೋನಿ ಹೇಳಿದ್ದಾರೆ.
ಯುವಕನೊಬ್ಬ 0.32 ರಿವಾಲ್ವರ್ ಹಿಡಿದುಕೊಂಡು ರಾಹುಲ್ ಗಾಂಧಿ ಭದ್ರತಾವಲಯದ ಎರಡನೇ ಸರಪಳಿ ದಾಟಿ ಮುಂದುವರೆಯುವಾಗ ಆತನನ್ನು ವಿಶೇಷ ರಕ್ಷಣಾ ಪಡೆ(SPG)ಯವರು ಬಂಧಿಸಿದ್ದಾರೆ. ಸದ್ಯ ಉತ್ತರ ಪ್ರದೇಶ ಪೊಲೀಸರ ವಶದಲ್ಲಿರುವ ಯುವಕ ಟಪ್ಪಾಲ್ ಗ್ರಾಮದವನಾಗಿದ್ದು, ಕಾಂಗ್ರೆಸ್ ಕಾರ್ಯಕರ್ತ ಎಂದು ತಿಳಿದು ಬಂದಿದೆ.
ಭೂ ಸ್ವಾಧೀನ ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ಬೆಂಬಲವಾಗಿ ಪಾದಯಾತ್ರೆ, ಕಿಸಾನ್ ಮಹಾಪಂಚಾಯತ್ ನಡೆಸುತ್ತಾ ಉತ್ತರ ಪ್ರದೇಶ ಸರ್ಕಾರ ವಿರುದ್ಧ ರಾಹುಲ್ ಗಾಂಧಿ ತಿರುಗಿಬಿದ್ದಿದ್ದಾರೆ.ಉತ್ತರ ಪ್ರದೇಶ ದಲ್ಲಾಳಿಗಳಿಂದ ನಡೆಯುವ ರಾಜ್ಯವಾಗಿದೆ. ಇಲ್ಲಿ ಬಡವರು, ರೈತರ ಜೀವಕ್ಕೆ ಬೆಲೆ ಇಲ್ಲದ್ದಂತಾಗಿದೆ ಎಂದು ರಾಹುಲ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.












Click it and Unblock the Notifications