• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಫ್ಘಾನಿಸ್ತಾನ ಗಣಿಗಾರಿಕೆ, ರೆಡ್ಡಿಗಳು ಅಪ್ಲೈ ಮಾಡಿಲ್ಲ?

By * ಇಂದ್ರೇಶ್
|
ಕಾಬೂಲ್ ಜು 7: ಅಫ್ಘಾನಿಸ್ತಾನ ತನ್ನ ಅಪಾರ ಖನಿಜ ಸಂಪತ್ತನ್ನು ಹೊರತೆಗೆಯಲು ಯೋಜನೆ ಹಾಕಿಕೊಂಡಿದ್ದು ಇದರಿಂದ ಭಾರತ ಸೇರಿದಂತೆ ಹಲವಾರು ದೇಶದ ಗಣಿ ಕಂಪೆನಿಗಳಿಗೆ ಉತ್ತಮ ಅವಕಾಶ ಲಭ್ಯವಾಗಲಿದೆ. ಬಳ್ಳಾರಿಯಲ್ಲಿ ಗಣಿಗಾರಿಕೆ ಮಾಡಿ ಅಪಾರ ಸಂಪತ್ತು ಗಳಿಸಿರುವ ರೆಡ್ಡಿ ಸೋದರರು ಅಫ್ಘಾನಿಸ್ತಾನದ ಉಕ್ಕು ಹೆಕ್ಕಿ ತೆಗೆಯುವ ಮುಕ್ತ ಅವಕಾಶದಿಂದ ವಂಚಿತರಾಗಿದ್ದಾರೆ.

ಅಫ್ಘಾನಿಸ್ಥಾನ ಈಗ 5 ಪ್ರಮುಖ ಗಣಿಗಳ ಹರಾಜಿಗೆ ಮುಂದಾಗಿದೆ. ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಫ್ಘಾನಿಸ್ತಾನದ ಗಣಿ ಸಚಿವ ವಹೀದುಲ್ಲಾ ಶಹ್ರಾನಿ ಅವರು ಈ ವಿಷಯವನ್ನು ತಿಳಿಸಿದ್ದಾರೆ. ಹಾಜಿಗಾಕ್ ಗಣಿ ಹರಾಜಿನ ನಂತರ ಮೂರು ತಾಮ್ರ ಹಾಗೂ ಎರಡು ಚಿನ್ನದ ಗಣಿಗಳನ್ನು ಹರಾಜು ಮಾಡಲಿದೆ.

ಹಾಜಿಗಾಕ್ ಗಣಿ ಹರಾಜಿಗೆ 22 ಕಂಪೆನಿಗಳನ್ನು ಅಂತಿಮಗೊಳಿಸಲಾಗಿದ್ದು, ಇದರಲ್ಲಿ 14 ಭಾರತೀಯ ಕಂಪೆನಿಗಳಾಗಿವೆ. ರೆಡ್ಡಿ ಕಂಪೆನಿ ಈ ಪಟ್ಟಿಯಲ್ಲಿ ಸೇರಿಲ್ಲ. ಬಹುಶಃ ಅಂತಾರಾಷ್ಟೀಯ ಮಟ್ಟದಲ್ಲಿ ಉದ್ದಿಮೆ ಬೆಳೆಸುವ ಯೋಜನೆ ಕನಸು ಕಂಡಿಲ್ಲ.

ಮೂಲಗಳ ಪ್ರಕಾರ ಸರ್ಕಾರಿ ಸ್ವಾಮ್ಯದ ಎನ್‌ಎಮ್‌ಡಿಸಿ ಹಾಗೂ ಸೇಲ್ ಜಂಟಿಯಾಗಿ ಇದಕ್ಕೆ ಬಿಡ್ ಸಲ್ಲಿಸಲಿವೆ. ಈ ಬಿಡ್ ನಲ್ಲೂ ಉಕ್ಕು ತಯಾರಿಕಾ ಘಟಕ ಸ್ಥಾಪನೆ, ರಸ್ತೆ-ರೈಲು ಸಂಪರ್ಕ, ಉದ್ಯೋಗ ಸೃಷ್ಟಿ ಹಾಗೂ ಸುತ್ತಲಿನ ಮಕ್ಕಳಿಗೆ ಶಿಕ್ಷಣ ನೀಡುವ ಪ್ರಸ್ತಾವನೆಯೂ ಸೇರಿದೆ.

ಮುಂದಿನ ಫೆಬ್ರವರಿಯಲ್ಲಿ ಉತ್ತರ ಅಫ್ಘಾನಿಸ್ಥಾನದ ಮಜರ್ ಏ ಶರೀಫ್ ನಗರದ ದೊಡ್ಡ ತೈಲ ನಿಕ್ಷೇಪವನ್ನು ಹರಾಜು ಮಾಡಲಾಗುವುದು ಎಂದು ತಿಳಿಸಿದರು. ಹಾಜಿಗಾಕ್ ನ ಬೃಹತ್ ಕಬ್ಬಿಣದ ಅದಿರು ನಿಕ್ಷೇಪದ ಹರಾಜಿಗೆ ಬಿಡ್ ಅಲ್ಲಿಸಲು ಆಗಸ್ಟ್ 3 ಕೊನೆ ದಿನಾಂಕವಾಗಿದೆ. ಅಕ್ಟೋಬರ್ ನಲ್ಲಿ ಬಿಡ್ ದಾರರನ್ನು ಅಂತಿಮಗೊಳಿಸಲಾಗುವುದು ಎಂದರು.

ಕಳೆದ ಮೇ 7 ರಿಂದ 12ರವರೆಗೆ ಅಂತಿಮಗೊಳಿಸಲಾದ 16 ಕಂಪೆನಿಗಳ ಪ್ರತಿನಿಧಿಗಳನ್ನು ಸ್ಥಳ ಪರಿಶೀಲನೆಗಾಗಿ ಕರೆದೊಯ್ಯಲಾಗಿತ್ತು. ಅಫ್ಘಾನಿಸ್ಥಾನದ ಅಯಂಕ್ ನಲ್ಲಿ ಚೀನಾ ತಾಮ್ರದ ಗಣಿ ಗುತ್ತಿಗೆ ಪಡೆದಿದೆ. ಸ್ಥಳಿಯರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಹಾಜಿಗಾಕ್ ನ ಗಣಿ ಪ್ರದೇಶಗಳಿಗೆ ಬಿಗಿ ಭದ್ರತೆ ಒದಗಿಸಲು ಯೋಜಿಸಲಾಗಿದ್ದು 1500 ಪೋಲೀಸರನ್ನು ಖಾಯಂ ಆಗಿ ನಿಯೋಜಿಸಿ ಗುತ್ತಿಗೆ ಪಡೆದ ಕಂಪೆನಿಯ ಆಸ್ತಿ ಹಾಗೂ ನೌಕರರ ರಕ್ಷಣೆ ಮಾಡಲಾಗುವುದು ಎಂದೂ ಅವರು ಹೇಳಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Afghanistan’s Minister for Mines Wahidullah Shahrani revealed, “After Hajigak, in July this year, I will put five major projects on tender: three copper and two gold deposits and, in February 2012, I will put a huge oil basin in the northern city of Mazar-e-Sharif on tender.”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more